ವಾರಾಂತ್ಯಕ್ಕೆ 'ಚಿರಂಜೀವಿ-ಮೇಘನಾ' ಮದುವೆ ನೋಡುವ ಅವಕಾಶ
Recommended Video

ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಎರಡು ತಿಂಗಳಾಗುತ್ತಾ ಬರುತ್ತಿದೆ. ಸಿನಿಮಾರಂಗದ ಹಿನ್ನಲೆ ಹೊಂದಿದ್ದ ಎರಡು ಕುಟುಂಬಗಳು ಸಂಬಂಧಿಕರಾದ ಸಂದರ್ಭವೇ ಚಿರು-ಮೇಘನಾ ಕಲ್ಯಾಣ. ಹಿಂದೂ ಹಾಗೂ ಕ್ರೈಸ್ತ ಸಂಪ್ರದಾಯದಂತೆ ನಡೆದ ಚಿರಂಜೀವಿ ಸರ್ಜಾ ಹಾಗೂ ಮೇಘನಾರಾಜ್ ಮದುವೆಯ ಕೆಲವು ತುಣುಕುಗಳನ್ನ ಮಾಧ್ಯಮದಲ್ಲಿ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿತ್ತು.
ಆದರೆ ಕ್ರೈಸ್ತ ಸಂಪ್ರದಾಯದಲ್ಲಿ ಏನೆಲ್ಲಾ ಪದ್ಧತಿಗಳಿತ್ತು. ಮದುವೆಯಲ್ಲಿ ಯಾರೆಲ್ಲಾ ಭಾಗಿ ಆಗಿದ್ದರು. ಹೀಗೆ ಸಾಕಷ್ಟು ಕುತೂಹಲಗಳು ಅನೇಕರಿಗೆ ಇರುತ್ತೆ ಅಂತಹ ಕುತೂಹಲಕ್ಕೆ ಉತ್ತರಿಸಲು ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಚಿರಂಜೀವಿ ಸೌಭಾಗ್ಯವತಿ ಮೇಘನಾ' ಹೆಸರಿನಲ್ಲಿ ಎರಡು ದಿನಗಳು ಚಿರು-ಮೇಘನಾ ಮದುವೆ ಸಮಾರಂಭ ಪ್ರಸಾರ ಆಗಲಿದೆ.

ನಿಶ್ವಿತಾರ್ಥ, ಎರಡು ಪದ್ಧತಿಯ ಮದುವೆ ಹಾಗೂ ಆರತಕ್ಷತೆ. ಮೂರು ಕಾರ್ಯಕ್ರಮಗಳು ಇದೇ ಶನಿವಾರ ಹಾಗೂ ಭಾನುವಾರ(ಜೂನ್ 23-24) ರಂದು ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ. ಸಂಪೂರ್ಣ ಮಾಹಿತಿಯೊಂದಿಗೆ ಅಭಿಮಾನಿಗಳು ಮನೆಯಲ್ಲೇ ಕೂತು 'ಚಿರಂಜೀವಿ ಸೌಭಾಗ್ಯವತಿ ಮೇಘನಾ' ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ.

ಮದುವೆ ಸಮಾರಂಭಗಳು ಹೇಗಿತ್ತು. ಚಿರು-ಮೇಘನಾ ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ? ಎರಡು ಸಂಪ್ರದಾಯದ ಬಗ್ಗೆ ಇಬ್ಬರಿಗೂ ಇರುವ ಅಭಿಪ್ರಾಯಗಳು ಏನೇನು? ಹೀಗೆ ಸಾಕಷ್ಟು ವಿಚಾರಗಳನ್ನು 'ಚಿರಂಜೀವಿ ಸೌಭಾಗ್ಯವತಿ ಮೇಘನಾ' ಕಾರ್ಯಕ್ರಮದ ಮೂಲಕ ತಿಳಿಸಿಕೊಡಲಿದೆ ಕಲರ್ಸ್ ಕನ್ನಡ ವಾಹಿನಿ.


Click it and Unblock the Notifications











