twitter
    For Quick Alerts
    ALLOW NOTIFICATIONS  
    For Daily Alerts

    ಚಿರಂಜೀವಿ ಸರ್ಜಾ ಪುಣ್ಯಸ್ಮರಣೆ; ಯಡಿಯೂರಿನಲ್ಲಿ ಆಡಿ ಬೆಳೆದ ಚಿರಂಜೀವಿ ಸರ್ಜಾ ಹೆಜ್ಜೆ ಗುರುತು

    |

    ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಇಹಲೋಕ ತ್ಯಜಿಸಿ ಒಂದು ವರ್ಷ ಕಳೆದಿದೆ. ಕೇವಲ 35ನೇ ವಯಸ್ಸಿನಲ್ಲೇ ಚಿರು ಜೀವನ ಮುಗಿಸಿ ಬಾರದ ಲೋಕಕ್ಕೆ ಹೊರಟು ಬಿಟ್ಟರು. ಜಿರಂಜೀವಿ ಸರ್ಜಾ ಅವರ ದಿಢೀರ್ ಸಾವು ಕುಟುಂಬದವರಿಗೆ, ಸ್ನೇಹಿತರಿಗೆ, ಅಭಿಮಾನಿಗಳಿಗೆ ದೊಡ್ಡ ಆಘಾತವೊಂಟು ಮಾಡಿದೆ.

    2020, ಜೂನ್ 7, ಮದ್ಯಾಹ್ನ 2 ಗಂಟೆ ಸುಮಾರಿಗೆ ಮನೆಯಲ್ಲೇ ಕುಸಿದುಬಿದ್ದ ಚಿರಂಜೀವಿ ಸರ್ಜಾರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಿರು ಕೊನೆಯುಸಿರೆಳೆದರು.

    ಅನೇಕ ಸಿನಿಮಾಗಳಲ್ಲಿ ಅಭಿನಯಿಸಿರುವ ಚಿರಂಜೀವಿ ಸರ್ಜಾ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಬೆಂಗಳೂರಿನ ಯಡಿಯೂರಿನಲ್ಲಿ ಜನಿಸಿದ ಚಿರು ದಕ್ಷಿಣ ಭಾರತದ ಖ್ಯಾತ ನಟ ಶಕ್ತಿ ಪ್ರಸಾದ್ ಅವರ ಮೊಮ್ಮಗ. ಕಲಾವಿದರ ಕುಟುಂಬದಲ್ಲಿ ಹುಟ್ಟಿದ ಚಿರುಗೆ ಅಭಿನಯ ರಕ್ತಗತವಾಗಿಯೇ ಬಂದಿತ್ತು. ಮಾವ ಅರ್ಜುನ್ ಸರ್ಜಾ ಸಹ ಖ್ಯಾತ ನಟ. ಸಹೋದರ ಧ್ರುವ ಸರ್ಜಾ ಕೂಡ ನಟನಾಗಿ ಖ್ಯಾತಿಗಳಿಸಿದ್ದಾರೆ.

    ಬೆಂಗಳೂರಿನಲ್ಲಿ ಶಿಕ್ಷಣ

    ಬೆಂಗಳೂರಿನಲ್ಲಿ ಶಿಕ್ಷಣ

    1984 ಅಕ್ಟೋಬರ್ 17ರಂದು ಜನಿಸಿದ್ದ ಚಿರಂಜೀವಿ ಸರ್ಜಾ, ಬೆಂಗಳೂರಿನಲ್ಲೇ ವಿದ್ಯಾಭ್ಯಾಸ ಮುಗಿಸಿದರು. ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಬಾಲ್ಡ್ವಿನ್ ಶಾಲೆಯಲ್ಲಿ ಮುಗಿಸಿದರು. ಕಾಲೇಜು ವಿದ್ಯಾಭ್ಯಾಸವನ್ನು ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಮಾಡಿದರು.

    ಅರ್ಜುನ್ ಸರ್ಜಾ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ

    ಅರ್ಜುನ್ ಸರ್ಜಾ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ

    ವಿದ್ಯಾಭ್ಯಾಸದ ಬಳಿಕ ಚಿರಂಜೀವಿ ಸರ್ಜಾ, ಮಾವ ಅರ್ಜುನ್ ಸರ್ಜಾ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸಕ್ಕೆ ಸೇರಿದರು. 2005ರಿಂದ ಸುಮಾರು 4 ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಚಿರು ನಂತರ 2009ರಲ್ಲಿ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬೆಳ್ಳಿ ಪರದೆ ಮೇಲೆ ಮಿಂಚಲು ಪ್ರಾರಂಭಿಸಿದರು.

    ವಾಯುಪುತ್ರ ಮೊದಲ ಸಿನಿಮಾ

    ವಾಯುಪುತ್ರ ಮೊದಲ ಸಿನಿಮಾ

    ಚಿರಂಜೀವಿ ಸರ್ಜಾ ವಾಯುಪುತ್ರ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಸಿನಿಪ್ರೇಕ್ಷಕರ ಮುಂದೆ ಬಂದರು. ಮೊದಲ ಸಿನಿಮಾದಲ್ಲೇ ರೆಬಲ್ ಸ್ಟಾರ್ ಅಂಬರೀಶ್ ಜೊತೆ ತೆರೆಹಂಚಿಕೊಳ್ಳುವ ಮೂಲಕ ಕನ್ನಡ ಚಿತ್ರಪ್ರೇಕ್ಷಕರ ಮುಂದೆ ಬಂದರು. ಸಿನಿಮಾ ತಕ್ಕಮಟ್ಟಿಗೆ ಹೆಸರು ಮಾಡಿತು. ಮೊದಲ ಸಿನಿಮಾದಲ್ಲೇ ಬರವಸೆಯ ನಟನಾಗಿ ಗುರುತಿಸಿಕೊಂಡ ಚಿರು ಬಳಿಕ ಸುಮಾರು 22 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

    'ಚಿರು' ಸಿನಿಮಾ ಹಿಟ್

    'ಚಿರು' ಸಿನಿಮಾ ಹಿಟ್

    ವಾಯುಪುತ್ರ ಸಿನಿಮಾದ ನಂತರ ಚಿರಂಜೀವಿ ಸರ್ಜಾ ಗಂಡೆದೆ ಹಾಗು ಚಿರು ಸಿನಿಮಾದಲ್ಲಿ ಕಾಣಿಸಿಕೊಂಡರು. 'ಚಿರು' ಸಿನಿಮಾ ಚಿರಂಜೀವಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ಆ ನಂತರ ಚಿತ್ರರಂಗದಲ್ಲಿ ಚಿರುಗೆ ಬೇಡಿಕೆಯೂ ಹೆಚ್ಚಾಯಿತು. ದಡಂ ದಶಗುಣಂ, ಕೆಂಪೆಗೌಡ, ವರದನಾಯಕ, ಆಟಗಾರ, ರಾಮ್ ಲೀಲ, ಅಮ್ಮ ಐ ಲವ್ ಯೂ, ಸಿಂಗ, ಖಾಕಿ ಹೀಗೆ ಬ್ಯಾಕು ಟು ಬ್ಯಾಕು ಸಿನಿಮಾಗಳಲ್ಲಿ ಅಭಿನಯಿಸಿದರು.

    2018ರಲ್ಲಿ ಮೇಘನಾ ಜೊತೆ ಮದುವೆ

    2018ರಲ್ಲಿ ಮೇಘನಾ ಜೊತೆ ಮದುವೆ

    2018ರಲ್ಲಿ ಚಿರಂಜೀವಿ ಸರ್ಜಾ ಖ್ಯಾತ ನಟಿ ಮೇಘನಾ ರಾಜ್ ಜೊತೆ ಸಪ್ತಪದಿ ತುಳಿದರು. ಚಿರು ಮತ್ತು ಮೇಘನಾ ರಾಜ್ ಇಬ್ಬರು ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯವರ ಒಪ್ಪಿಗೆ ಮೇರೆಗೆ 2017ರಲ್ಲಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡರು. 2018 ಮೇ 2ರಂದು ಚಿರು, ಮೇಘನಾ ಜೊತೆ ಅದ್ದೂರಿಯಾಗಿ ಹಸೆಮಣೆ ಏರಿದರು. ಮದುವೆಯಾಗಿ 3 ವರ್ಷವಾಗಿದೆ. ಕಳೆದ ತಿಂಗಳಷ್ಟೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.

    ಚಿರು ಬಳಿ ಇದ್ದ ಸಿನಿಮಾಗಳು

    ಚಿರು ಬಳಿ ಇದ್ದ ಸಿನಿಮಾಗಳು

    ಚಿರು ಬಳಿ ಸದ್ಯ ರಾಜಮಾರ್ತಂಡ, ಏಪ್ರಿಲ್, ರಣಂ ಮತ್ತು ಕ್ಷತ್ರಿಯ ಸಿನಿಮಾಗಳಿವೆ. ಕೊನೆಯದಾಗಿ ಚಿರು ಶಿವಾರ್ಜುನ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಿಡುಗಡೆಯಾಗಿ ಕೆಲವೇ ದಿನಕ್ಕೆ ಲಾಕ್ ಡೌನ್ ಪರಿಣಾಮ ಸಿನಿಮಾ ಚಿತ್ರಮಂದಿರದಿಂದ ಒಂದೆ ದಿನದಲ್ಲಿ ಮಾಯವಾಗಿತ್ತು.

    Recommended Video

    ಚಿರು ಸಾವಿಗೆ ಒಂದು ವರ್ಷ, ಅಣ್ಣನಿಗೆ ಪತ್ರ ಬರೆದು ನೋವನ್ನು ಹಂಚಿಕೊಂಡ ಧ್ರುವ | Filmibeat Kannada

    English summary
    Chiranjeevi Sarja Death Anniversary: Actor chiranjeevi sarja personal life and film journey.
    Monday, June 7, 2021, 12:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X