»   » 'ಅಮ್ಮ ಐ ಲವ್ ಯೂ' ಚಿತ್ರದಲ್ಲಿ ಬದಲಾದ ಮಗ.!

'ಅಮ್ಮ ಐ ಲವ್ ಯೂ' ಚಿತ್ರದಲ್ಲಿ ಬದಲಾದ ಮಗ.!

Posted By:
Subscribe to Filmibeat Kannada

'ದ್ವಾರಕೀಶ್ ಚಿತ್ರ' ಸಂಸ್ಥೆಯ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರ 'ಅಮ್ಮ ಐ ಲವ್ ಯೂ'. ಕೆ.ಎಂ.ಚೈತನ್ಯ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಅಂದ್ಹಾಗೆ, 'ಅಮ್ಮ ಐ ಲವ್ ಯೂ' ಸಿನಿಮಾ ತಮಿಳಿನ 'ಪಿಚ್ಚಕಾರನ್' ಚಿತ್ರದ ರೀಮೇಕ್.

ಈ ಚಿತ್ರಕ್ಕೀಗ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ನಾಯಕನಟನಾಗಿ ಆಯ್ಕೆಯಾಗಿದ್ದಾರೆ. ಈ ಮೊದಲು ಈ ಚಿತ್ರಕ್ಕೆ 'ರೋಗ್' ಖ್ಯಾತಿಯ ಇಶಾನ್ ನಾಯಕನಟನಾಗಿ ಕಾಣಿಸಕೊಳ್ಳಬೇಕಿತ್ತು. ಆದ್ರೆ, ಅಂತಿಮ ಕ್ಷಣದಲ್ಲಿ ಚಿತ್ರಕ್ಕೆ ಹೀರೋ ಬದಲಾಗಿದ್ದಾರೆ.

Chiranjeevi Sarja entry For Amma I Love You Movie

ಈ ಮೂಲಕ ಕೆ.ಎಂ.ಚೈತನ್ಯ ಹಾಗೂ ಚಿರಂಜೀವಿ ಸರ್ಜಾ ಅವರ ಜೋಡಿಯಲ್ಲಿ ಮೂರನೇ ಸಿನಿಮಾ ಆರಂಭವಾಗುತ್ತಿದೆ. ಈ ಹಿಂದೆ 'ಆಟಗಾರ', 'ಆಕೆ', ಈಗ 'ಅಮ್ಮ ಐ ಲವ್ ಯೂ' ಚಿತ್ರವನ್ನ ಒಟ್ಟಿಗೆ ಮಾಡುತ್ತಿದ್ದಾರೆ.

ಶಾನ್ವಿ ಶ್ರೀವಾಸ್ತವ್ ಈ ಬಾರಿ ಯಾವ ನಟನಿಗೆ ನಾಯಕಿ ಆಗ್ತಿದ್ದಾರೆ ಗೊತ್ತಾ?

ಸದ್ಯ, ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿರುವ ಚಿತ್ರತಂಡ ಆದಷ್ಟೂ ಬೇಗ ಚಿತ್ರೀಕರಣ ಶುರುಮಾಡಲಿದೆ. ಮತ್ತೊಂದೆಡೆ ಚಿರಂಜೀವಿ ಸರ್ಜಾ 'ಸಂಹಾರ' ಚಿತ್ರದಲ್ಲಿ ನಟಿಸುತ್ತಿದ್ದು, ಅದಾದ ನಂತರ ಈ ಸಿನಿಮಾವನ್ನ ಕೈಗೆತ್ತಿಕೊಳ್ಳಲಿದ್ದಾರೆ.

English summary
Chiranjeevi Sarja has replaced Ishan in Dwarakish Chitra's new film 'Amma I Love You' Directed by KM Chaithanya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X