ಚಿರಂಜೀವಿ ಸರ್ಜಾ ಈಗ ಪಿಜ್ಜಾ ಡೆಲಿವರಿ ಬಾಯ್

ತೆಲುಗಿನ 'ಲಕ್ಷ್ಮ್ಯಂ' ಚಿತ್ರದ ರೀಮೇಕ್ ಆಗಿರುವ 'ವರದನಾಯಕ' ಚಿತ್ರ ಜನವರಿ 4, 2013ರಂದು ತೆರೆಕಾಣುತ್ತಿದೆ. ಇದಕ್ಕೂ ಮುನ್ನ ಅವರು ಅಭಿನಯಿಸಿದ್ದ 'ದಂಡಂ ದಶಗುಣಂ' ಚಿತ್ರವೂ ತೆಲುಗಿನ 'ಘರ್ಷಣ' ಚಿತ್ರದ ರೀಮೇಕ್ ಆಗಿತ್ತು.
'ಪಿಜ್ಜಾ' ಚಿತ್ರದ ರೀಮೇಕ್ ರೈಟ್ಸ್ ನಿರ್ದೇಶಕ ಪ್ರಶಾಂತ್ ರಾಜ್ ಪಾಲಾಗಿರುವುದು ಗೊತ್ತೇ ಇದೆ. ಲವ್ ಗುರು, ಗಾನಾ ಬಜಾನ ಚಿತ್ರಗಳನ್ನು ನಿರ್ದೇಶಿಸಿದ್ದ ಪ್ರಶಾಂತ್ ರಾಜ್ ಈ ಚಿತ್ರದ ರೀಮೇಕ್ ರೈಟ್ಸನ್ನು ರು.35 ಲಕ್ಷಕ್ಕೆ ಕೊಂಡುಕೊಂಡಿದ್ದಾರೆ.
ಮಠ, ಎದ್ದೇಳು ಮಂಜುನಾಥ ಖ್ಯಾತಿಯ ಗುರುಪ್ರಸಾದ್ ಅವರ ಸಂಭಾಷಣೆ ಹಾಗೂ ಜೋಶುವಾ ಶ್ರೀಧರ್ ಅವರ ಸಂಗೀತ ಚಿತ್ರಕ್ಕಿರುತ್ತದೆ. ಜನವರಿ ತಿಂಗಳಿಂದ ಚಿತ್ರೀಕರಣ ನಡೆಯುವ ಸಾಧ್ಯತೆಗಳಿವೆ. ಚಿತ್ರದ ನಾಯಕಿಗಾಗಿ ಹುಡುಕಾಟ ನಡೆದಿದೆ.
ಪಿಜ್ಜಾ ಡೆಲಿವರಿ ಬಾಯ್ ಒಬ್ಬ ಗ್ರಾಹಕನೊಬ್ಬನಿಗೆ ಪಿಜ್ಜಾ ಡೆಲಿವರಿ ಮಾಡಲು ಹೋಗಿ ತೊಂದರೆಗೆ ಸಿಕ್ಕಿಬೀಳುವ ಕಥಾಹಂದರವನ್ನು ಚಿತ್ರ ಒಳಗೊಂಡಿದೆ. ಕನ್ನಡಕ್ಕೆ ಹೊಂದುವಂತೆ ಕಥೆಯಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡು ಚಿತ್ರವನ್ನು ಆರಂಭಿಸುವುದಾಗಿ ಹೇಳಿದ್ದಾರೆ ಪ್ರಶಾಂತ್.
ಅಂದಹಾಗೆ ಏಪ್ರಿಲ್ ನಲ್ಲಿ ಸೆಟ್ಟೇರಿದ್ದ ಚಿರು ಅವರ ಮತ್ತೊಂದು ಚಿತ್ರ "ಕಲಿಕುಮಾರ್, ಕಲಿನಾಗ್, ಕಲಿವರ್ಧನ" ಚಿತ್ರದ ಕಥೆ ಎಲ್ಲಿಗೆ ಬಂತೋ, ಏನಾಯಿತೋ ಅದೇನು ಕಥೆನೋ. ಈಗ ಇನ್ನೊಂದು ರೀಮೇಕ್ ಚಿತ್ರಕ್ಕೆ ಸಹಿಹಾಕಿದ್ದಾರೆ. (ಏಜೆನ್ಸೀಸ್)


Click it and Unblock the Notifications











