ರಾಜಮಾರ್ತಾಂಡನಾಗಿ ರಗಡ್ ಲುಕ್‌ನಲ್ಲಿ ಬಂದ ಚಿರಂಜೀವಿ ಸರ್ಜಾ
ಚಿರಂಜೀವಿ ಸರ್ಜಾ ಹುಟ್ಟುಹಬ್ಬ ಇಂದು (ಅಕ್ಟೋಬರ್ 17). ಇದೇ ದಿನ ಚಿರಂಜೀವಿ ಸರ್ಜಾ ಅಭಿನಯದ ರಾಜಮಾರ್ತಾಂಡ ಸಿನಿಮಾದ ಹಾಡು ಸಹ ಬಿಡುಗಡೆ ಆಗಿದೆ.
ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಶುಭ ಸಂದರ್ಭಕ್ಕೆಂದು ರಾಜಮಾರ್ತಾಂಡ ಚಿತ್ರತಂಡ ಸಿನಿಮಾದ ಇಂಟ್ರೊಡಕ್ಷನ್ ಹಾಡನ್ನು ಬಿಡುಗಡೆ ಮಾಡಿದೆ.
'ಸರಿ ಸರಿಯೋ ರಾಜಮಾರ್ತಾಂಡ ಬರ್ತಾವ್ನೆ' ಹಾಡು ಚಿರಂಜೀವಿ ಸರ್ಜಾ ರನ್ನು ಸಖತ್ ಮಾಸ್ ಲುಕ್ ನಲ್ಲಿ ತೋರಿಸುತ್ತಿದೆ. ಹಾಡಿನ ಚಿತ್ರೀಕರಣ ಬಹುತೇಕ ಬೆಂಗಳೂರಿನಲ್ಲಿಯೇ ಆಗಿದೆ.

ರಾಜಮಾರ್ತಾಂಡ ಸಿನಿಮಾದ ಬಹುತೇಕ ಚಿತ್ರೀಕರಣವನ್ನು ಚಿರಂಜೀವಿ ಸರ್ಜಾ ಮುಗಿಸಿದ್ದರು. ಇನ್ನು ಒಂದು ಹಾಡು ಹಾಗೂ ಡಬ್ಬಿಂಗ್ ಮಾತ್ರವೇ ಬಾಕಿ ಇತ್ತು. ಆದರೆ ಆ ಹಾಡನ್ನು ಬಿಟ್ಟೇ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ. ಡಬ್ಬಿಂಗ್ ಅನ್ನು ಧೃವ ಸರ್ಜಾ ಮಾಡಿಕೊಡಲಿದ್ದಾರಂತೆ.
ರಾಜಮಾರ್ತಾಂಡ ಸಿನಿಮಾದ ನಿರ್ದೇಶನವನ್ನು ಕೆ.ರಾಮ್‌ನಾರಾಯಣ್ ಮಾಡಿದ್ದಾರೆ. ದಿವ್ಯನ್ ಹಾಗೂ ಶಿವಕುಮಾರ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.
English summary
Chiranjeevi Sarja's Rajamarthanda movie video song released today on Chiru Sarja's birthday occasion.


Click it and Unblock the Notifications