»   » ಚಿರಂಜೀವಿ ಕೈ ಹಿಡಿದ ಸೌಭಾಗ್ಯವತಿ ಮೇಘನಾ

ಚಿರಂಜೀವಿ ಕೈ ಹಿಡಿದ ಸೌಭಾಗ್ಯವತಿ ಮೇಘನಾ

Posted By:
Subscribe to Filmibeat Kannada

ನಟಿ ಮೇಘನಾ ರಾಜ್ ಮತ್ತು ನಟ ಚಿರಂಜೀವಿ ಸರ್ಜಾ ಅವರ ಮದುವೆ ಇಂದು ನಡೆದಿದೆ. 10.30 ರಿಂದ 11 ಗಂಟೆವರೆಗೆ ಇದ್ದ ಮಿಥುನ ಲಗ್ನದಲ್ಲಿ ಮಾಂಗಲ್ಯಧಾರಣೆ ನೆರವೇರಿದೆ. ಬೆಂಗಳೂರಿನ ಅರಮನೆ ಮೈದಾನದ ಮೂರನೇ ಗೇಟ್ ವೈಟ್ ಪೆಟಲ್ಸ್ ನಲ್ಲಿ ವಿವಾಹ ಕಾರ್ಯಕ್ರಮ ಜರುಗುತ್ತಿದೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಿರಂಜೀವಿ ಸರ್ಜಾ-ಮೇಘನಾ ರಾಜ್

ಕಳೆದ ಭಾನುವಾರ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದ ಈ ಜೋಡಿ ಇವತ್ತು ಹಿಂದು ಸಂಪ್ರದಾಯದಂತೆ ಹಸೆಮಣೆ ಏರಿದ್ದಾರೆ. ವೆಂಕಟೇಶ್ವರ ಪದ್ಮಾವತಿ ಕಾನ್ಸೆಪ್ಟ್ ನಲ್ಲಿ ಮದುವೆ ಮಂಟಪವನ್ನು ರೆಡಿ ಮಾಡಲಾಗಿದೆ. ಕ್ರೀಮ್ ಕಲರ್ ಮತ್ತು ಗೋಲ್ಡ್, ಗ್ರೀನ್ ಬಾರ್ಡರ್ ರೇಷ್ಮೆ ಸೀರೆ ಧರಿಸಿ ಮೇಘನಾ ಹಾಗೂ ಪಂಚೆ ಶಲ್ಯದಲ್ಲಿ ಚಿರು ನೂತನ ವಧುವರರಾಗಿ ಮಿಂಚುತ್ತಿದ್ದಾರೆ.

chiranjeevi sarja ties knot with meghana raj

ಹಿರಿಯ ನಟ ಶ್ರೀನಾಥ್ ದಂಪತಿ, ಡಾ.ರಾಜ್ ಕುಮಾರ್ ಪುತ್ರಿ ಲಕ್ಷ್ಮಿ, ನಟ ಚಂದನ್ ಸೇರಿದಂತೆ ಅನೇಕ ಗಣ್ಯರು ಮೇಘನಾ - ಚಿರುಗೆ ಶುಭ ಕೋರಿದ್ದಾರೆ. ಇಂದು ಸಂಜೆ 7 ಗಂಟೆಗೆ ಸಿನಿಮಾರಂಗದ ಸ್ನೇಹಿತರಿಗಾಗಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

chiranjeevi sarja ties knot with meghana raj

ಕಳೆದ ಭಾನುವಾರ ಸರಳವಾಗಿ ಚರ್ಚ್ ನಲ್ಲಿ ಮದುವೆ ನಡೆದಿದ್ದ ಕಾರಣ ಚಿತ್ರರಂಗದ ಮಿತ್ರರು ಮದುವೆಗೆ ಹಾಜರಾಗಲು ಸಾಧ್ಯ ಆಗಿರಲಿಲ್ಲ. ಅದೇ ಕಾರಣಕ್ಕೆ ಇಂದು ಅದ್ದೂರಿ ಕಾರ್ಯಕ್ರಮವನ್ನು ಆಯೋಚಿಸಲಾಗಿದೆ. 

English summary
Kannada actress Meghana Raj and Chiranjeevi Sarja wedding (Hindu tradition) took place today(may2nd) at palace ground Bengaluru.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X