»   » 'ಮಫ್ತಿ' ನೋಡಿದ ಚಿರು ಸರ್ಜಾ ಫಿದಾ ಆಗಿದ್ದು ಯಾರಿಗೆ?

'ಮಫ್ತಿ' ನೋಡಿದ ಚಿರು ಸರ್ಜಾ ಫಿದಾ ಆಗಿದ್ದು ಯಾರಿಗೆ?

Posted By:
Subscribe to Filmibeat Kannada
ಮಫ್ತಿ ಸಿನಿಮಾ ನೋಡಿದ ಚಿರಂಜೀವಿ ಸರ್ಜಾ ಫುಲ್ ಫಿದಾ | Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ 'ಮಫ್ತಿ' ಚಿತ್ರಕ್ಕೆ ರಾಜ್ಯಾದ್ಯಂತ ಸೂಪರ್ ಸಕ್ಸಸ್ ಸಿಕ್ಕಿದ್ದು, ಶಿವಣ್ಣ ಮತ್ತು ಶ್ರೀಮುರಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಕೇವಲ ಅಭಿಮಾನಿಗಳು ಮಾತ್ರವಲ್ಲದೇ, ಕನ್ನಡದ ಕೆಲವು ಸ್ಟಾರ್ ನಟರು ಕೂಡ 'ಮಫ್ತಿ'ಗೆ ಫಿದಾ ಆಗಿದ್ದಾರೆ. ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಇತ್ತಿಚೆಗಷ್ಟೇ 'ಮಫ್ತಿ' ಸಿನಿಮಾ ನೋಡಿ ಫುಲ್ ಖುಷಿಯಾಗಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಸಂತಸ ವ್ಯಕ್ತಪಡಿಸಿರುವ ಚಿರು ಸರ್ಜಾ, ಶಿವಣ್ಣ ಮತ್ತು ಶ್ರೀಮುರಳಿ ಅಭಿನಯಕ್ಕೆ ಮನಸೋತಿದ್ದಾರೆ.

ಭೈರತಿ ರಣಗಲ್ಲು ಅಭಿನಯಕ್ಕೆ ಸ್ಯಾಂಡಲ್ ವುಡ್ ಕ್ಲೀನ್ ಬೌಲ್ಡ್

Chiranjeevi Sarja watch mafti

ಅಷ್ಟೇ ಅಲ್ಲದೆ ''ಇದೊಂದು ಪೈಸಾ ವಸೂಲ್ ಸಿನಿಮಾ'' ಎಂದು ಕಾಂಮೆಂಟ್ ಮಾಡಿದ್ದಾರೆ. ಇನ್ನು ಮತ್ತೊಂದೆಡೆ ಚಿರು ಸರ್ಜಾ ಅಭಿನಯಿಸುತ್ತಿರುವ ಹೊಸ ಸಿನಿಮಾ 'ರಾಜಮಾರ್ತಂಡ' ಚಿತ್ರೀಕರಣ ಆರಂಭಿಸಿದೆ.

Chiranjeevi Sarja watch mafti

ರಾಮ್ ನಾರಾಯಣ್ ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನ ಶ್ರೀ ಮಾದೇಶ್ವರ ಪ್ರೊಡಕ್ಷನ್ ನಲ್ಲಿ ಶ್ರೀಮತಿ ಸರೋಜಮ್ಮ ನಾಗರಾಜು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯಕ್ಕೆ ಚಿತ್ರದ ಬಗ್ಗೆ ಹೆಚ್ಚೇನೂ ಮಾಹಿತಿ ಬಿಟ್ಟುಕೊಡದ ಚಿತ್ರತಂಡ ಸದ್ದಿಲ್ಲದೇ ಶೂಟಿಂಗ್ ಆರಂಭಿಸಿದೆ.

English summary
Kannada actor Chiranjeevi Sarja has taken his twitter account to praise shiva rajkumar and sri murali.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada