»   » ವಾರ ಪೂರ್ತಿ ನಡೆಯಲಿದೆ 'ಮೇಘನಾ-ಚಿರು' ಮದುವೆ ಸಂಭ್ರಮ

ವಾರ ಪೂರ್ತಿ ನಡೆಯಲಿದೆ 'ಮೇಘನಾ-ಚಿರು' ಮದುವೆ ಸಂಭ್ರಮ

Posted By:
Subscribe to Filmibeat Kannada
ಹಸೆಮಣೆ ಏರಲಿದ್ದಾರೆ ಮೇಘನಾ ಹಾಗೂ ಚಿರು | Filmibeat Kannada

ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡ ತಾರಾ ಜೋಡಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಮುಂದಿನ ತಿಂಗಳು ಮೇ 2 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸಾಕಷ್ಟು ವರ್ಷಗಳಿಂದ ಸ್ನೇಹಿತರಾಗಿದ್ದ ಮೇಘನಾ ಮತ್ತು ಚಿರು ಮುಂದಿನ ದಿನಗಳಲ್ಲಿ ದಂಪತಿಗಳಾಗಿ ಜೀವನ ನಡೆಸಲಿದ್ದಾರೆ.

ಈಗಾಗಲೇ ಆಪ್ತರಿಗೆ ಮತ್ತು ಸ್ನೇಹಿತರಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡಲು ಆರಂಭಿಸಿದ್ದು ಬೆಂಗಳೂರಿನ ಸ್ನೇಹಿತರು ಮತ್ತು ಸಿನಿಮಾರಂಗದ ಕಲಾವಿದರಿಗೆ ಪತ್ರಿಕೆ ನೀಡುವುದಷ್ಟೇ ಬಾಕಿ ಉಳಿಸಿಕೊಂಡಿದ್ದಾರೆ ಮೇಘನಾ ಮತ್ತು ಚಿರು ಕುಟುಂಬಸ್ಥರು.

ಚಿರಂಜೀವಿ ಸರ್ಜಾ-ಮೇಘನಾ ರಾಜ್ ಕಲ್ಯಾಣಕ್ಕೆ ಸಿದ್ಧತೆ

ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಮದುವೆ ಸಂಭ್ರಮ ಒಂದು ವಾರ ನಡೆಯಲಿದ್ದು ವಿಶೇಷವಾಗಿ ಎರಡು ರೀತಿಯ ಸಂಪ್ರದಾಯದಲ್ಲಿ ವಿವಾಹ ಮಹೋತ್ಸವ ಜರುಗಲಿದೆ. ಮದುವೆಯ ವಿಶೇಷತೆಗಳು ಹಾಗೂ ವಿವಾಹದಲ್ಲಿ ಮೇಘನಾ ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಬಗ್ಗೆ ಸ್ವತಃ ಮೇಘನಾ ರಾಜ್ ಫಿಲ್ಮೀಬೀಟ್ ಜೊತೆ ಮಾತನಾಡಿ ಸಂಪೂರ್ಣ ಮಾಹಿತಿ ಕೊಟ್ಟಿದ್ದಾರೆ. ಹಾಗಾದ್ರೆ ಮೇಘನಾ-ಚಿರು ಮದುವೆಯ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ಚಿರು-ಮೇಘನಾ ಮದುವೆ ಸಂಭ್ರಮ

ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮೇ 2 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಏಳು ದಿನಗಳು ಮದುವೆ ಸಂಭ್ರಮ ಎರಡು ಕುಟುಂಬದಲ್ಲಿ ಮನೆ ಮಾಡಲಿದ್ದು ಚಿತ್ರರಂಗದ ಗಣ್ಯರು ಮತ್ತು ಸ್ನೇಹಿತರೆಲ್ಲರೂ ವಿವಾಹದಲ್ಲಿ ಭಾಗಿ ಆಗಲಿದ್ದಾರೆ.

ಹಿಂದೂ-ಕ್ರಿಶ್ಚಿಯನ್ ಸಂಪ್ರದಾಯ

ಮೇಘನಾ ರಾಜ್ ಅವರ ತಾಯಿ ಪ್ರಮೀಳಾ ಜೋಷಾಯಿ ಕ್ರಿಶ್ಚಿಯನ್ ಧರ್ಮದವರು ಅಪ್ಪ ಹಿಂದೂ ಆದ್ದರಿಂದ ಎರಡು ರೀತಿಯ ಸಂಪ್ರಾದಾಯದಂತೆ ಮದುನೆ ನಡೆಯುತ್ತಿದೆ.

ಇಂಗ್ಲೀಷ್- ಟ್ರೆಡಿಶನಲ್ ಥೀಮ್ ನಲ್ಲಿ ಮದುವೆ

ಚರ್ಚ್ ನಲ್ಲಿ ಮೇಘನಾ-ಚಿರು ಪರಸ್ಪರ ರಿಂಗ್ ಬಲಾಯಿಸಿಕೊಳ್ಳಲಿದ್ದಾರೆ. ಆ ದಿನ ಮೇಘನಾ ಬಿಳಿ ಬಣ್ಣದ ಗೌನ್ ಧರಿಸಲಿದ್ದಾರೆ. ಕೇರಳದ ಡಿಸೈನರ್ ಸಿಯಾ ಮಾರಿಯಾ ಮೇಘನಾ ಅವರ ಕಾಸ್ಟ್ಯೂಮ್ಸ್ ಡಿಸೈನ್ ಮಾಡಲಿದ್ದಾರೆ.

ಪರೇಶ್ ಲಾಂಬಾ ಸಿಗ್ನೇಚರ್ ನಿಂದ ಚಿರು ಕಾಸ್ಟ್ಯೂಮ್ಸ್

ಚಿರಂಜೀವಿ ಸರ್ಜಾ ಚರ್ಚ್ ಮದುವೆ ಸಮಾರಂಭದಲ್ಲಿ ಪರೇಶ್ ಲಾಂಬಾ ಸಿಗ್ನೇಚರ್ಸ್ ನಿಂದ ಡಿಸೈನ್ಸ್ ಆದ ಸೂಟ್ ಧರಿಸಲಿದ್ದಾರೆ. ಕಂಪ್ಲೀಟ್ ಇಂಗ್ಲೀಷ್ ಸ್ಟೈಲ್ ನಲ್ಲಿ ಮದುವೆ ನಡೆಯಲಿದೆ.

ಹಿಂದೂ ಸಂಪ್ರದಾಯದಂತೆ ಮಹೂರ್ತ

ಇನ್ನೂ ಪ್ಯಾಲೇಸ್ ಗ್ರೌಂಡ್ ನಲ್ಲಿ ಹಿಂದೂ ಸಂಪ್ರದಾಯದಂತೆ ಧಾರಾ ಮಹೂರ್ತ ಸಮಾರಂಭ ನಡೆಯಲಿದೆ. ಅಂದಿನ ದಿನ ಮೇಘನಾ ರೇಷ್ಮೇ ಸೀರೆಯಲ್ಲಿ ಮಿಂಚಿದ್ರೆ ಚಿರು ರೇಷ್ಮೆ ಪಂಚೆ-ಶರ್ಟು ಧರಿಸಲಿದ್ದಾರೆ.

ಎಲ್ಲರಿಗೂ ರುಚಿಸಲಿದೆ ಮದುವೆ ಊಟ

ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಇಬ್ಬರ ಮದುವೆ ಸಮಾರಂಭ ಎರಡು ಕುಟುಂಬದಲ್ಲಿ ಅತೀ ಮುಖ್ಯವಾದದ್ದು. ಆದ್ದರಿಂದ ಈಗಾಗಲೇ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುವುದರಲ್ಲಿ ಬ್ಯುಸಿ ಆಗಿದ್ದಾರೆ. ಮದುವೆ ಊಟದ ವಿಚಾರದಲ್ಲಿಯೂ ಹೆಚ್ಚು ಕಾಳಜಿ ತೆಗೆದುಕೊಂಡಿದ್ದು ಎಲ್ಲರಿಗೂ ಇಷ್ಟವಾಗುವಂತಹ ಹಾಗೂ ರುಚಿಸುವಂತ ಅಡುಗೆ ಮಾಡಿಸಲು ನಿರ್ಧಾರ ಮಾಡಲಾಗಿದ್ಯಂತೆ.

2018ರಲ್ಲಿ ಗುಡ್ ನ್ಯೂಸ್ ಕೊಡಬಹುದು ಈ ಸ್ಟಾರ್ ಜೋಡಿಗಳು.!

English summary
Actor Chiranjeevi Sarja and Meghana Raj get married on May 2. The wedding ceremony will be held in Hindu and Christian traditions.Seven days are going on in marriage.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X