»   » ಪ್ರಭುದೇವ ತಮ್ಮ ನಾಗೇಂದ್ರ 'ಮರೆಯುವ ಮುನ್ನ'

ಪ್ರಭುದೇವ ತಮ್ಮ ನಾಗೇಂದ್ರ 'ಮರೆಯುವ ಮುನ್ನ'

By: ಉದಯರವಿ
Subscribe to Filmibeat Kannada

ಈ ನಟನನ್ನು ನೋಡಿದರೆ ಎಲ್ಲೋ ನೋಡಿದಂತಿದೆಯಲ್ಲಾ ಎಂದು ಅನ್ನಿಸುತ್ತದೆ ಅಲ್ಲವೇ? ಹೌದು ಅದು 2001ನೇ ಸಾಲಿನಲ್ಲಿ ಬಿಡುಗಡೆಯಾದ 'ಚಿತ್ರ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟ ನಟ ನಾಗೇಂದ್ರ ಪ್ರಸಾದ್.

ಇದೀಗ ಅವರು ಸ್ಯಾಂಡಲ್ ವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇವರು ಬೇರಾರು ಅಲ್ಲ ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವ ಅವರ ಸಹೋದರ. ಹದಿನೈದು ವರ್ಷಗಳ ಬಳಿಕ ಮತ್ತೆ ಗಾಂಧಿನಗರಕ್ಕೆ ಅಡಿಯಿಡುತ್ತಿದ್ದಾರೆ ನಾಗೇಂದ್ರ. [ಮುಂಬೈ ಡಾನ್ಸರ್ ಜತೆ ಪ್ರಭುದೇವ ಎರಡನೇ ಮದುವೆ?]


ಇವರನ್ನು ಕನ್ನಡ ಚಿತ್ರಾಭಿಮಾನಿಗಳು ಮರೆತೇ ಹೋಗಿದ್ದರು. ಈಗವರು ಮತ್ತೆ ನೆನಪಿಸಲು 'ಮರೆಯುವ ಮುನ್ನ' ಚಿತ್ರದ ಮೂಲಕ ರೀ ಎಂಟ್ರಿ ಕೊಡುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಪ್ರಸಾದ್ ಸ್ಟುಡಿಯೋದಲ್ಲಿ ಈ ಚಿತ್ರದ ಹಾಡಿನ ರೆಕಾರ್ಡಿಂಗ್ ನಡೆಯಿತು. ಶೀಘ್ರದಲ್ಲೇ ಶೂಟಿಂಗ್ ಆರಂಭವಾಲಿದೆ.

ಸುಪ್ರೀತ್ ಶಂಕರ್ ರತ್ನ ಎಂಬುವವರು ನಿರ್ಮಿಸಿ ನಿರ್ದೇಶಿಸುತ್ತಿರುವ ಚಿತ್ರ ಇದು. ಅದೆಲ್ಲಾ ಸರಿ ನಾಗೇಂದ್ರ ಇಷ್ಟು ದಿನ ಎಲ್ಲಿ ಕಾಣೆಯಾಗಿದ್ದರು ಎಂದರೆ, ಅವರು ನಿರ್ದೇಶಕನಾಗುವ ಪ್ರಯತ್ನದಲ್ಲಿದ್ದರಂತೆ. ಆ ಪ್ರಯತ್ನದಲ್ಲಿ ಒಂದಷ್ಟು ಯಶಸ್ಸನ್ನೂ ಕಂಡಿದ್ದಾರಂತೆ.

ಅಣ್ಣನ 'ರೌಡಿ ರಾಥೋಡ್' ಚಿತ್ರಕ್ಕೆ ಸಹಾಯಕನಾಗಿ ಕೆಲಸ ಮಾಡಿ ಒಂದಷ್ಟು ಅನುಭವ ಸಂಪಾದಿಸಿದ್ದಾರೆ. ನಟನೆಗಿಂತಲೂ ತನಗೆ ನಿರ್ದೇಶಕನಾಗಬೇಕೆಂಬ ಹಂಬಲ ಜಾಸ್ತಿ ಇದ್ದ ಕಾರಣ ನಟನೆಗೆ ದೂರವಾಗಿ ಉಳಿದಿದ್ದರು.

ನಿರ್ದೇಶಕನಾಗಬೇಕೆಂಬ ಕನಸಿಗೆ ಸಾಕಷ್ಟು ಇಂಬು ಕೊಟ್ಟವರು ಅಣ್ಣ. ಅವರ ಸಲಹೆ ಸೂಚನೆಯಂತೆ ಲಂಡನ್ ನಲ್ಲಿ ನಿರ್ದೇಶನದ ಕೋರ್ಸ್ ಮಾಡಿದೆ. ಇದೀಗ ಮತ್ತೆ ಸ್ಯಾಂಡಲ್ ವುಡ್ ಗೆ ಮರಳಿರುವುದು ಖುಷಿ ಕೊಟ್ಟಿದೆ ಎನ್ನುತ್ತಾರೆ ನಾಗೇಂದ್ರ.

English summary
Kannada movie 'Chitra' (2001) fame actor Nagendra Prasad (brother of Prabhu Deva) back to Sandalwood after 15 years gap. The actor is all set to make his comeback with a new Kannada film called 'Mareyuva Munna'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada