For Quick Alerts
  ALLOW NOTIFICATIONS  
  For Daily Alerts

  ವಿಭಿನ್ನತೆ, ಕೌತುಕತೆ, ಭಯಾನಕದ ಪ್ರತಿರೂಪ ಈ ಚಿತ್ರಕಥಾ ಟ್ರೈಲರ್

  |

  ಹೊಸ ಪ್ರಯತ್ನಗಳು, ವಿಭಿನ್ನ ಕಥೆಗಳು, ತಾಂತ್ರಿಕವಾಗಿ ಹೊಸತನ ತುಂಬಿದ ಮೇಕಿಂಗ್ ಹೊಂದಿರುವ ಹಲವು ಚಿತ್ರಗಳು ಇತ್ತೀಚಿನ ದಿನದಲ್ಲಿ ಗಮನ ಸೆಳೆಯುತ್ತಿದೆ. ಈ ಸಾಲಿಗೆ ಹೊಸದಾಗಿ ಸೇರ್ಪಡೆಯಾದ ಮತ್ತೊಂದು ಸಿನಿಮಾ ಚಿತ್ರಕಥಾ.

  ನೈಜ ಘಟನೆಗಳನ್ನ ಆಧರಿಸಿ ಮಾಡಿರುವ ಈ ಸಿನಿಮಾ ಕಂಪ್ಲೀಟ್ ಸಸ್ಪೆನ್ಸ್ ಥ್ರಿಲ್ಲಿಂಗ್ ಕಥಾಹಂದರ ಹೊಂದಿದೆ. ಟ್ರೈಲರ್ ಹಾಗೂ ಪೋಸ್ಟರ್ ನೋಡಿದ್ರೆ ಇದು ಪಕ್ಕಾ ಹಾರರ್ ಸಿನಿಮಾ ಎಂಬ ಭಾವನೆ ಮೂಡಿಸುತ್ತಿದೆ. ಬಟ್, ನೋಡಿದ್ಮೇಲೆ ಅಷ್ಟೇ ಈ ಚಿತ್ರಕಥೆಯ ಅಸಲಿ ಕಥೆ ಏನು ಎಂಬುದು ತಿಳಿಯುತ್ತೆ.

  ಇತ್ತೀಚಿಗಷ್ಟೆ ರೋರಿಂಗ್ ಸ್ಟಾರ್ ಶ್ರೀಮುರಳಿ ಚಿತ್ರಕಥಾ ಟ್ರೈಲರ್ ರಿಲೀಸ್ ಮಾಡಿ ಮೆಚ್ಚಿಕೊಂಡಿದ್ದರು. ಯೂಟ್ಯೂಬ್ ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು 3 ಲಕ್ಷಕ್ಕೂ ಅಧಿಕ ವೀಕ್ಷಕರು ಟ್ರೈಲರ್ ನೋಡಿದ್ದಾರೆ. ಅಂದ್ಹಾಗೆ, ಇದು ಸಿನಿಮಾ ಕಲಾವಿದನ ಬದುಕಿನ ಸುತ್ತ ನಡೆಯುವ ಕಥೆ. ಸಿನಿಮಾ, ನಿರ್ದೇಶನ, ಚಿತ್ರಕಲಾವಿದ, ಭೂತದ ಮನೆ, ವೈದ್ಯೆ, ಹೀಗೆ ಇಡೀ ಚಿತ್ರಕಥೆಯಲ್ಲಿ ಕೌತುಕತೆ ಎದ್ದು ಕಾಣುತ್ತಿದೆ.

  ಜಾಲಿ ಪ್ರೊಡಕ್ಷನ್ ಲಾಂಛನದಡಿ ಪ್ರಜ್ವಲ್ ಎಂ ರಾಜಾ ನಿರ್ಮಾಣ ಮಾಡಿರುವ ಈ ಚಿತ್ರವನ್ನ ಯಶಸ್ವಿ ಬಾಲಾಧಿತ್ಯ ನಿರ್ದೇಶನ ಮಾಡಿದ್ದಾರೆ. ಸುಜಿತ್ ರಾಥೋಡ್, ಸುಧಾರಾಣಿ, ದಿಲೀಪ್ ರಾಜ್, ಬಿ ಜಯಶ್ರೀ, ತಬಲಾ ನಾಣಿ, ಅನುಷಾ ರಾವ್ ಸೇರಿದಂತೆ ಹಲವು ಪ್ರತಿಭಾನ್ವಿತ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

  ಚೇತನ್ ಕುಮಾರ್ ಸಂಗೀತ ಮತ್ತು ತನ್ವಿಕ್ ಛಾಯಾಗ್ರಹಣ, ಕೀರ್ತಿ ಬಿಎಂ ಅವರ ಸಂಭಾಷಣೆ, ಮಧು ಅವರ ಸಂಕಲನ ಟ್ರೈಲರ್ ನಲ್ಲೇ ಗಮನ ಸೆಳೆಯುತ್ತಿದೆ. ಈಗಾಗಲೇ ಸಂಪೂರ್ಣ ಶೂಟಿಂಗ್ ಮುಗಿಸಿರುವ ಸಿನಿಮಾತಂಡ ಜುಲೈ ತಿಂಗಳಲ್ಲಿ ತೆರೆಗೆ ಬರುವ ಸಿದ್ಧತೆಯಲ್ಲಿದ್ದಾರೆ.

  English summary
  Watch Chitrakatha Official Trailer. Written and Directed By Yashasvi Balaaditya. Produced By Prajwal M Raja. Music Composed By Chethan Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X