»   » ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರದಲ್ಲಿ 'ಡ್ರಾಮಾ ಜೂನಿಯರ್ಸ್' ಚಿತ್ರಾಲಿ ನಟನೆ

ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರದಲ್ಲಿ 'ಡ್ರಾಮಾ ಜೂನಿಯರ್ಸ್' ಚಿತ್ರಾಲಿ ನಟನೆ

Posted By:
Subscribe to Filmibeat Kannada

'ಜೀ ಕನ್ನಡ' ವಾಹಿನಿಯ 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮ ದೊಡ್ಡ ಜನಪ್ರಿಯತೆ ಗಳಿಸಿತ್ತು. ಅದರಲ್ಲಿಯೂ ಮೊದಲ ಸೀಸನ್ ನಲ್ಲಿ ಬಂದ ಪ್ರತಿ ಮಕ್ಕಳು ಜನರ ಮನಸ್ಸಿಗೆ ಬಹಳ ಹತ್ತಿರ ಆಗಿದ್ದರು. ಆ ರೀತಿ ಪ್ರೇಕ್ಷಕರ ತುಂಬ ಇಷ್ಟ ಆದ ಮಕ್ಕಳಲ್ಲಿ ಚಿತ್ರಾಲಿ ಕೂಡ ಒಬ್ಬರು.

'ಡ್ರಾಮಾ' ಕ್ವೀನ್, 'ಬಾರ್ಬಿ ಡಾಲ್' ಚಿತ್ರಾಲಿ ಬಗ್ಗೆ ನಿಮಗೆಷ್ಟು ಗೊತ್ತು?

ಚಿತ್ರಾಲಿ ತನ್ನ ನಟನೆಯ ಮೂಲಕ 'ಡ್ರಾಮಾ ಜೂನಿಯರ್ಸ್' ಪ್ರಶಸ್ತಿ ಪಡೆದರು. ಆ ನಂತರ ಕಿಚ್ಚ ಸುದೀಪ್ ನಿರ್ಮಾಣದ 'ವಾರಸ್ದಾರ' ಧಾರಾವಾಹಿಯಲ್ಲಿಯೂ ನಟಿಸಿದರು. ಆದರೆ ಇದೀಗ ಚಿತ್ರಾಲಿ ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರದಲ್ಲಿ ಕೂಡ ನಟಿಸುವ ಅವಕಾಶವನ್ನು ಪಡೆದಿದ್ದಾರೆ.

Chitrali making her sandalwood debut from 'Bheema Sena Nala Maharaja'

ರಕ್ಷಿತ್ ಶೆಟ್ಟಿ ನಿರ್ಮಾಣದ 'ಭೀಮಸೇನಾ ನಳಮಹರಾಜ' ಎಂಬ ಸಿನಿಮಾದಲ್ಲಿ ಚಿತ್ರಾಲಿ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ವಿಶೇಷ ಅಂದರೆ ಇದೇ ಸಿನಿಮಾದಲ್ಲಿ ಬೇಬಿ ಡಾಲ್ ಆದ್ಯಾ ಕೂಡ ಒಂದು ಪಾತ್ರವನ್ನು ಮಾಡಿದ್ದಾರೆ. 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಅಭಿನಯಿಸಿದ್ದ ಅರವಿಂದ್ ಅಯ್ಯರ್ ಈ ಚಿತ್ರದ ನಾಯಕನಾಗಿದ್ದಾರೆ.

Chitrali making her sandalwood debut from 'Bheema Sena Nala Maharaja'

'ಭೀಮಸೇನಾ ನಳಮಹರಾಜ' ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಜೊತೆಗೆ ಪುಷ್ಕರ್ ಮಲ್ಲಿಕಾರ್ಜುನ್ ಮತ್ತು ಹೇಮಂತ್ ರಾವ್ ಅವರು ಬಂಡವಾಳ ಹಾಕಿದ್ದಾರೆ. ಕಾರ್ತಿಕ್ ಸರಗೂರು ನಿರ್ದೇಶನ ಮಾಡುತ್ತಿದ್ದಾರೆ. 'ದೃಶ್ಯ' ಸಿನಿಮಾದಲ್ಲಿ ರವಿಚಂದ್ರನ್ ಪುತ್ರಿಯಾಗಿ ಕಾಣಿಸಿಕೊಂಡಿದ್ದ ಆರೋಹಿ ಇಲ್ಲಿ ನಾಯಕಿ ಆಗಿದ್ದಾರೆ.

English summary
'Drama Juniors' winner Chitrali making her sandalwood debut from 'Bheema Sena Nala Maharaja' movie. the movie is producing by Rakshith Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada