»   » ಪವರ್ ಸ್ಟಾರ್ ಗೆ ಆಕ್ಷನ್-ಕಟ್ ಹೇಳ್ತಾರಂತೆ ತಮಿಳಿನ ವಿಕ್ರಂ

ಪವರ್ ಸ್ಟಾರ್ ಗೆ ಆಕ್ಷನ್-ಕಟ್ ಹೇಳ್ತಾರಂತೆ ತಮಿಳಿನ ವಿಕ್ರಂ

Posted By:
Subscribe to Filmibeat Kannada

ಕಾಲಿವುಡ್ ಚಿತ್ರರಂಗ ಕ್ಷೇತ್ರದ ಸ್ಟಾರ್ ನಟ 'ಐ' ಚಿತ್ರದ ಖ್ಯಾತಿಯ ವಿಕ್ರಂ ಅವರು ಬರೀ ನಟನೆ ಮಾತ್ರವಲ್ಲದೇ ಇದೀಗ ನಿರ್ದೇಶಕರ ಪಟ್ಟ ಹೊತ್ತುಕೊಳ್ಳಲು ತಯಾರಾಗಿದ್ದಾರೆ. ಅದರಲ್ಲಿ ಏನ್ ವಿಶೇಷ ಅಂತ ನೀವು ಯೋಚನೆ ಮಾಡುತ್ತಿದ್ದೀರಾ?.

ವಿಷ್ಯಾ ಇಲ್ಲಿದೆ, ಅದೇನಪ್ಪಾ ಅಂದ್ರೆ ಚೀಯಾನ್ ವಿಕ್ರಂ ನಿರ್ದೇಶನ ಮಾಡುತ್ತಿರೋದು ನಮ್ಮ ಕನ್ನಡದ ಕಣ್ಮಣಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ. ವಾವ್ ಇದು ಪವರ್ ಸ್ಟಾರ್ ಪುನೀತ್ ಅಭಿಮಾನಿಗಳಿಗೆ ಮತ್ತು ಕನ್ನಡಿಗರಿಗೆ ಇದು ಸಂತಸ ಸುದ್ದಿ.[ಪವರ್ ಸ್ಟಾರ್ ಚಿತ್ರಕ್ಕೆ ಧ್ವನಿ ನೀಡಿದ ಯಂಗ್ ಟೈಗರ್ NTR]

Chiyaan Vikram To Direct A Mutilingual Starring Puneeth Rajkumar

ಅಂದಹಾಗೆ ಕಾಲಿವುಡ್ ನಟ ವಿಕ್ರಂ ಅವರು ಪುನೀತ್ ಅವರಿಗೆ ನಿರ್ದೇಶನ ಮಾಡುವುದು ಹೌದಾದರೂ ಅದು ಯಾವುದೇ ಸಿನಿಮಾಗೆ ಅಲ್ಲ ಬದಲಾಗಿ 'ಸ್ಪಿರಿಟ್ ಆಫ್ ಚೆನ್ನೈ' ಎನ್ನುವ ವಿಡಿಯೋ ಆಲ್ಬಂ ಒಂದು ಹೊರಬರುತ್ತಿದ್ದು, ಇದನ್ನು ವಿಕ್ರಂ ಅವರು ನಿರ್ದೇಶಿಸುತ್ತಿದ್ದಾರೆ.

ಈ ಆಲ್ಬಂನಲ್ಲಿ ದಕ್ಷಿಣ ಭಾರತದಲ್ಲಿ ಸುಪ್ರಸಿದ್ಧರಾಗಿರುವ ಇಪ್ಪತ್ತು ಜನ ಹಾಡುಗಾರರು ಹಾಡುತ್ತಿದ್ದಾರೆ. ಈ ಆಲ್ಬಂನಲ್ಲಿ ಕನ್ನಡದ ಪವರ್ ಸ್ಟಾರ್ ಪುನೀತ್, ತಮಿಳಿನ ಸೂರ್ಯ, ತೆಲುಗಿನ ಪ್ರಭಾಸ್, ನವೀನ್ ಪೌಲಿ, ವಿಶಾಲ್, ಆರ್ಯ, ಜಯಂರವಿ, ಜೀವಾ, ಸಿದ್ಧಾರ್ಥ ಸೇರಿದಂತೆ ಹಲವಾರು ನಟರು ಅಭಿನಯಿಸುತ್ತಿದ್ದಾರೆ.[ಬಿಡುಗಡೆಗೆ ಮುನ್ನವೇ ಇತಿಹಾಸ ಸೃಷ್ಟಿಸಿದ 'ಚಕ್ರವ್ಯೂಹ']

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಈ ಮೂಲಕ ಇದೇ ಮೊದಲ ಬಾರಿಗೆ ಪರಭಾಷೆಗೆ ಕಾಲಿಡುತ್ತಿದ್ದು, ವಿಕ್ರಂ ನಿರ್ದೇಶನದ ಈ ಆಲ್ಬಂ ಹಿಟ್ ಆದರೆ ಅಪ್ಪು ಅವರನ್ನು ಕಾಲಿವುಡ್ ಕ್ಷೇತ್ರ ರೆಡ್ ಕಾರ್ಪೆಟ್ ಹಾಕಿ ಕರೆಸಿಕೊಂಡರು ಆಶ್ವರ್ಯವಿಲ್ಲ.

ಈಗಾಗಲೇ ಅಣ್ಣ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು 'ಕಿಲ್ಲಿಂಗ್ ವೀರಪ್ಪನ್' ಸಿನಿಮಾದ ಮೂಲಕ ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ ಚಿತ್ರಕ್ಷೇತ್ರಗಳಿಗೆ ಇದೇ ಮೊದಲ ಬಾರಿಗೆ ಪಾದಾರ್ಪಣೆ ಮಾಡಿದ್ದಾರೆ. ಇದೀಗ ತಮ್ಮ ಪುನೀತ್ ಅವರು ಆಲ್ಬಂ ಮೂಲಕ ಚೆನ್ನೈಗೆ ಕಾಲಿಡುತ್ತಿದ್ದಾರೆ.[ದಾಖಲೆ ಬೆಲೆಗೆ 'ಚಕ್ರವ್ಯೂಹ' ವಿತರಣಾ ಹಕ್ಕು ಸೇಲ್!]

ಒಟ್ನಲ್ಲಿ ಅಣ್ಣ-ತಮ್ಮಂದಿರಿಬ್ಬರು ಸ್ಯಾಂಡಲ್ ವುಡ್ ನಲ್ಲಿ ಆಯ್ತು ಇದೀಗ ಪರಭಾಷಾ ಸಿನಿಮಾ ಕ್ಷೇತ್ರಗಳಲ್ಲಿ ಕಮಾಲ್ ಮಾಡಲು ತಯಾರಾಗಿದ್ದಾರೆ. ಅಂತೂ ಹ್ಯಾಟ್ರಿಕ್ ಹೀರೋ ಮತ್ತು ಪವರ್ ಸ್ಟಾರ್ ಅಭಿಮಾನಿಗಳಿಗೆ ಸಂಭ್ರಮವೋ ಸಂಭ್ರಮ.

    English summary
    'I' fame Tamil Actor Chiyaan Vikram is all set to say the action-cut. The hero of many hit movies in Tamil & Telugu is now making rounds in social media for his latest update. Vikram is directing a multilingual starring the Kannada Superstar Puneeth Rajkumar.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada