»   » ಹರ್ಷ ಪಾಸ್ ಪೋರ್ಟ್ ಮಿಸ್ಸಿಂಗ್; ಇಟಲಿಯಲ್ಲಿ ಪರದಾಟ

ಹರ್ಷ ಪಾಸ್ ಪೋರ್ಟ್ ಮಿಸ್ಸಿಂಗ್; ಇಟಲಿಯಲ್ಲಿ ಪರದಾಟ

Posted By:
Subscribe to Filmibeat Kannada

ವಿದೇಶದಲ್ಲಿ ನೃತ್ಯ ನಿರ್ದೇಶಕ ಹರ್ಷ ಪರದಾಡುವಂತಾಗಿದೆ. ಏನು ಮಾಡುವುದು ಅಂತ ಗೊತ್ತಾಗದೆ ಪೇಚಿಗೆ ಸಿಲುಕಿದ್ದಾರೆ. ಹರ್ಷಗೆ ಅಂಥದ್ದೇನಾಯ್ತು ಅಂದ್ರೆ, ಇಟಲಿಯಲ್ಲಿ ತಮ್ಮ ಪಾಸ್ ಪೋರ್ಟ್ ಕಳೆದುಕೊಂಡಿದ್ದಾರೆ.

ಶಿವಣ್ಣ ಅಭಿನಯದ 'ವಜ್ರಕಾಯ' ಚಿತ್ರಕ್ಕೆ ನಿರ್ದೇಶನ ಮತ್ತು ನೃತ್ಯ ನಿರ್ದೇಶನದ ಹೊಣೆ ಹೊತ್ತಿರುವ ಹರ್ಷ, ಹಾಡುಗಳ ಚಿತ್ರೀಕರಣಕ್ಕೆ ಅಂತ ಶಿವರಾಜ್ ಕುಮಾರ್ ಸೇರಿದಂತೆ ಇಡೀ 'ವಜ್ರಕಾಯ' ತಂಡದೊಂದಿಗೆ ಇಟಲಿಯ ಮಿಲಾನ್ ಗೆ ತೆರಳಿದ್ದರು.


Choreographer cum Director Harsha's passport stolen in Italy

ಶೂಟಿಂಗ್ ಮಧ್ಯದಲ್ಲಿ ತಿಂಡಿಗೆ ಅಂತ ರೆಸ್ಟೋರೆಂಟ್ ಗೆ ಹೋದ ಹರ್ಷ ಬಳಿಯಿದ್ದ ಬ್ಯಾಗ್ ಕಳುವಾಗಿದೆ. ''ತಿಂಡಿಗೆ ಅಂತ ಹೋಟೆಲ್ ಗೆ ಬಂದ್ವಿ. ಅಲ್ಲಿ ನನ್ನ ಬ್ಯಾಗ್ ಕದ್ದು ಬಿಟ್ಟಿದ್ದಾರೆ. ಅದ್ರಲ್ಲಿ ತುಂಬಾ ಮುಖ್ಯವಾದ ವಸ್ತುಗಳೆಲ್ಲಾ ಇದ್ವು. ಅದ್ರಲ್ಲೂ ಪಾಸ್ ಪೋರ್ಟ್ ತುಂಬಾ ಮುಖ್ಯ. ಅದೇ ಕಳೆದುಹೋಗಿದೆ'' ಅಂತ ಆತಂಕದಲ್ಲಿ 'ಫಿಲ್ಮಿಬೀಟ್ ಕನ್ನಡ' ಜೊತೆ ನೃತ್ಯ ನಿರ್ದೇಶಕ ಹರ್ಷ ಮಾತನಾಡಿದರು. ['ಫಿಲ್ಮಿಬೀಟ್ ಕನ್ನಡ' ಉಚಿತ ಸುದ್ದಿಸಾರಂಗಿ ಸೇವೆ ಆರಂಭ]


ಮಿಲಾನ್ ನಲ್ಲಿ 'ವಜ್ರಕಾಯ' ಹಾಡಿನ ಚಿತ್ರೀಕರಣ ಇನ್ನೂ ನಡೆಯುತ್ತಲೇ ಇದೆ. ಟೆನ್ಷನ್ ನಲ್ಲೇ ಶೂಟಿಂಗ್ ಮಾಡುತ್ತಿದ್ದಾರೆ ಹರ್ಷ. ಇಂದು ರಾತ್ರಿ 10.30ಕ್ಕೆ ರಿಟರ್ನ್ ಟಿಕೆಟ್ ಬುಕ್ ಆಗಿದೆ. ಅಷ್ಟರೊಳಗೆ ಚಿತ್ರೀಕರಣ ಪೂರ್ಣಗೊಳಿಸಬೇಕು. ಇದರೊಂದಿಗೆ ಪಾಸ್ ಪೋರ್ಟ್ ತಲೆನೋವು ಬೇರೆ.


Choreographer cum Director Harsha's passport stolen in Italy

ಪಾಸ್ ಪೋರ್ಟ್ ಇಲ್ಲದೆ ಬೆಂಗಳೂರಿಗೆ ಮರಳುವುದು ಕಷ್ಟ ಸಾಧ್ಯ. ಇದರಿಂದ ಇಟಲಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸಹಾಯ ಕೋರಿದ್ದಾರೆ ಹರ್ಷ. ''ಇಂಡಿಯನ್ ಎಂಬೆಸ್ಸಿ ಜೊತೆ ಮಾತನಾಡಿ ಎಮರ್ಜೆನ್ಸಿ ಪಾಸ್ ಪೋರ್ಟ್ ಗೆ ಅಪ್ಲೈ ಮಾಡಿದ್ದೀನಿ. ಇನ್ನು ಕೆಲವೇ ಗಂಟೆಗಳಲ್ಲಿ ನನ್ನ ಪಾಸ್ ಪೋರ್ಟ್ ಸಿಗಲಿದೆ.'' ಅಂತ ಹರ್ಷ ಹೇಳಿದರು.


ಒಟ್ನಲ್ಲಿ ಇಟಿಲಿಯಲ್ಲಿನ ಶೂಟಿಂಗ್ ಮಜದೊಂದಿಗೆ ಹರ್ಷಗೆ ಈ ಬಾರಿ ಕಹಿ ಅನುಭವವಾದಂತಾಗಿದೆ. (ಫಿಲ್ಮಿಬೀಟ್ ಕನ್ನಡ)

English summary
Choreographer turned Director Harsha, who is presently in Italy shooting for Shivarajkumar's 'Vajrakaya' has lost his passport. Director Harsha claims that his bag was stolen in a restaurant while having breakfast today.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada