For Quick Alerts
  ALLOW NOTIFICATIONS  
  For Daily Alerts

  ನಿರಂಜನ್ 'ಸೂಪರ್ ಸ್ಟಾರ್' ಚಿತ್ರದಲ್ಲಿ ಪ್ರಭುದೇವ ತಂದೆ ನಟನೆ!

  |

  ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ನಟನೆಯ 'ಸೂಪರ್ ಸ್ಟಾರ್' ಸಿನಿಮಾ ಸೆಟ್ಟೇರಿದೆ. ಲಾಕ್‌ಡೌನ್‌ಗೂ ಮುಂಚೆ ಶುರುವಾದ ಈ ಚಿತ್ರ ಸದ್ಯಕ್ಕೆ ಶೂಟಿಂಗ್‌ಗೆ ಬ್ರೇಕ್ ಹಾಕಿದೆ.

  ಫಸ್ಟ್ ಲುಕ್ ಮೂಲಕವೇ ಭಾರಿ ಕುತೂಹಲ ಸೃಷ್ಟಿಸಿರುವ ಸೂಪರ್ ಸ್ಟಾರ್ ಚಿತ್ರಕ್ಕೆ ಈಗ ದಿಗ್ಗಜ ಕೊರಿಯೋಗ್ರಫರ್ ಎಂಟ್ರಿಯಾಗಿದೆ. ಆದ್ರೆ, ಇವರು ಕೊರಿಯೋಗ್ರಫರ್ ಆಗಿ ಕೆಲಸ ಮಾಡುತ್ತಿಲ್ಲ, ಬದಲಾಗಿ ನಟನೆ ಮಾಡುತ್ತಿದ್ದಾರೆ.

  'ಸೂಪರ್ ಸ್ಟಾರ್'ಗೆ ರಾಕಿಂಗ್ ಸ್ಟಾರ್ ಸಾಥ್, ಆಗಸ್ಟ್ 20ಕ್ಕೆ ಸರ್ಪ್ರೈಸ್!'ಸೂಪರ್ ಸ್ಟಾರ್'ಗೆ ರಾಕಿಂಗ್ ಸ್ಟಾರ್ ಸಾಥ್, ಆಗಸ್ಟ್ 20ಕ್ಕೆ ಸರ್ಪ್ರೈಸ್!

  ಹೌದು, ನಿರಂಜನ್ ಚೊಚ್ಚಲ ಚಿತ್ರದಲ್ಲಿ ಸುಂದರ್ ಮುಗುರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸುಂದರ್ ಮುಗುರ್ ಭಾರತೀಯ ಚಿತ್ರರಂಗದ ದಿಗ್ಗಜ ಕೊರಿಯೋಗ್ರಫರ್. ತೆಲುಗು, ಕನ್ನಡ, ತಮಿಳು ಹಾಗೂ ಹಿಂದಿ ಇಂಡಸ್ಟ್ರಿಯ ದಿಗ್ಗಜ ನಟರಿಗೆ ನೃತ್ಯ ಸಂಯೋಜನೆ ಮಾಡಿರುವ ನಿರ್ದೇಶಕ.

  ಸುಂದರ್ ಮಾಸ್ಟರ್ ಅವರ ಮಗನೇ ನಟ-ನಿರ್ದೇಶಕ-ನೃತ್ಯ ಸಂಯೋಜಕ ಪ್ರಭುದೇವ.

  ಅಂದ್ಹಾಗೆ, ಸೂಪರ್ ಸ್ಟಾರ್ ಚಿತ್ರ ಡ್ಯಾನ್ಸ್ ಹಿನ್ನೆಲೆ ಮಾಡಲಾಗಿರುವ ಕಥೆ. ಡ್ಯಾನ್ಸ್ ಕ್ಷೇತ್ರದಲ್ಲಿ ಸೂಪರ್ ಸ್ಟಾರ್ ಆಗಬೇಕು ಆಸೆಯಿಂದ ನಾಯಕ ಜೀವನದಲ್ಲಿ ಆಗುವ ಘಟನೆಗಳೇ ಚಿತ್ರಕಥೆ. ಸುಂದರ್ ಮಾಸ್ಟರ್ ಅವರನ್ನೇ ಗಮನದಲ್ಲಿಟ್ಟುಕೊಂಡು ಅವರಿಗೊಂದು ವಿಶೇಷ ಪಾತ್ರ ಸಿದ್ಧಮಾಡಿದ್ದಾರೆ ನಿರ್ದೇಶಕ.

  3 ಜನ ಒಳ್ಳೆ ಗ್ಲಾಮರ್ ಎಂದು ಕಾಲೆಳೆದ Upendra | Filmibeat Kannada

  ರಮೇಶ್ ವೆಂಕಟೇಶ್ ಬಾಬು ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ಆಗಸ್ಟ್ ತಿಂಗಳಲ್ಲಿ 'ಸೂಪರ್ ಸ್ಟಾರ್' ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದರು. ಆರ್‌ವಿಬಿ ಪ್ರೊಡಕ್ಷನ್ ಮತ್ತು ಮೈಲಾರಿ ಪ್ರೊಡಕ್ಷನ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರ ಡಿಸೆಂಬರ್‌ನಿಂದ ಮತ್ತೆ ಚಿತ್ರೀಕರಣ ಆರಂಭಿಸಲಿದೆ.

  English summary
  Choreographer-actor Sundar Mugur to play major role in Niranjan Sudhindra debut Super star directed by Ramesh Venkatesh Babu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X