»   » ವಿದೇಶಗಳಲ್ಲಿ ಮಿನುಗಲಿದೆ ಕನ್ನಡದ 'ಚೌಕ' ಚಿತ್ರ

ವಿದೇಶಗಳಲ್ಲಿ ಮಿನುಗಲಿದೆ ಕನ್ನಡದ 'ಚೌಕ' ಚಿತ್ರ

Posted By:
Subscribe to Filmibeat Kannada

'ಕನ್ನಡದ ಕುಳ್ಳ' ದ್ವಾರಕೀಶ್ ರವರ ನಿರ್ಮಾಣದ 50ನೇ ಚಿತ್ರ 'ಚೌಕ' ಮಾರ್ಚ್ 17 ರಂದು ಯು.ಎಸ್.ಎ ಹಾಗೂ ಕೆನಡಾದಲ್ಲಿ ಬಿಡುಗಡೆ ಆಗಲಿದೆ.

ಕಸ್ತೂರಿ ಮೀಡಿಯಾ ಹಾಗೂ ಡ್ರೀಮ್ಸ್ ಮೀಡಿಯಾ ಯು.ಎಸ್.ಎ ಹಾಗೂ ಕೆನಡಾದಲ್ಲಿ 'ಚೌಕ' ಚಿತ್ರವನ್ನ ರಿಲೀಸ್ ಮಾಡಲಿದೆ.[ಮೊದಲ ಮೂರು ದಿನದಲ್ಲಿ 'ಚೌಕ' ಗಳಿಸಿದ್ದೆಷ್ಟು ಗೊತ್ತಾ?]


chowka-to-release-in-usa-and-canada-on-march-17th

ಲವ್ಲಿ ಸ್ಟಾರ್ ಪ್ರೇಮ್, ವಿಜಯ್ ರಾಘವೇಂದ್ರ, ಪ್ರಜ್ವಲ್ ದೇವರಾಜ್, ದಿಗಂತ್, ದೀಪಾ ಸನ್ನಿಧಿ, ಪ್ರಿಯಾಮಣಿ, ಭಾವನಾ ಸೇರಿದಂತೆ ದೊಡ್ಡ ತಾರಾಬಳಗವಿರುವ 'ಚೌಕ' ಚಿತ್ರಕ್ಕೆ ಕರ್ನಾಟಕದಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೌಸ್ ಫುಲ್ ಪ್ರದರ್ಶನ ಕಂಡಿತ್ತು.[ವಿಮರ್ಶೆ: ಒಳ್ಳೆಯ ಕೆಲಸಗಳಿಗೆ ತಾಳ್ಮೆ ಇರಲಿ ಎಂದು ಹೇಳುವ 'ಚೌಕ']


ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿರುವ ಚೊಚ್ಚಲ ಚಿತ್ರ 'ಚೌಕ'. ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಶಿಷ್ಟ ಹಾಡುಗಳಿಂದ ಕರ್ನಾಟಕದಲ್ಲಿ ಸದ್ದು ಮಾಡಿದ್ದ 'ಚೌಕ' ಈಗ ದೂರದ ಯು.ಎಸ್.ಎ ಹಾಗೂ ಕೆನಡಾದಲ್ಲೂ ಸೌಂಡ್ ಮಾಡಲಿದೆ.

English summary
Kannada Movie 'Chowka' is all set to release in USA and Canada on March 17th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada