For Quick Alerts
ALLOW NOTIFICATIONS  
For Daily Alerts

  'ಡಾಲಿ' ಧನಂಜಯ್ ಕಷ್ಟದ ದಿನಗಳನ್ನ ಬಿಚ್ಚಿಟ್ಟ ಸ್ನೇಹಿತ 'ಸಿಂಹಾಜಿ'

  By Bharath Kumar
  |
  'ಡಾಲಿ' ಧನಂಜಯ್ ಕಷ್ಟದ ದಿನಗಳನ್ನ ಬಿಚ್ಚಿಟ್ಟ ಸ್ನೇಹಿತ 'ಸಿಂಹಾಜಿ' | Filmibeat Kannada

  'ಟಗರು' ಚಿತ್ರದಲ್ಲಿ ಅತಿ ಹೆಚ್ಚು ಕಾಡುವುದು 'ಡಾಲಿ'. ಈ ಪಾತ್ರವನ್ನ ನಿರ್ವಹಿಸಿರುವ ಧನಂಜಯ್ ಸತತ 9 ಸಿನಿಮಾಗಳಲ್ಲಿ ನಾಯಕನಟನಾಗಿದ್ದರು. ಆದ್ರೆ, ಡಾಲಿ ಪಾತ್ರದಿಂದ ತನ್ನ ಹಳೇ ಇಮೇಜ್ ಬಿಟ್ಟು ಹೊಸ ಇಮೇಜ್ ಗಳಿಸಿಕೊಂಡಿದ್ದಾರೆ. ಬಹುಶಃ ಇಲ್ಲಿಂದ ಧನಂಜಯ್ ಹೊಸಯುಗ ಆರಂಭವಾಗಿದೆ ಎಂದ್ರೆ ಅಚ್ಚರಿಯಿಲ್ಲ.

  ಇಂತಹ ಧನಂಜಯ್ ಬಗ್ಗೆ ಛಾಯಾಗ್ರಾಹಕ ಮಹೆನ್ ಸಿಂಹ ಅವರು ರೋಚಕ ಕಥೆ ಬಿಚ್ಚಿಟ್ಟಿದ್ದಾರೆ. ಡಾಲಿಯ ಹ್ಯಾಂಗೋವರ್ ನಲ್ಲಿ ತೇಲಾಡುತ್ತಿರುವ ಅಭಿಮಾನಿಗಳಿಗೆ ಧನಂಜಯ್ ಅವರ ಯಶೋಗಾಥೆಯನ್ನ ಬಹಿರಂಗಪಡಿಸಿದ್ದಾರೆ.

  ಶಿವಣ್ಣ ಫ್ಯಾನ್ಸ್ ಆಕ್ರೋಶದ ಬಳಿಕ 'ಡಾಲಿ' ಧನಂಜಯ್ ಹೇಳಿದ್ದೇನು.?

  ಡೈರೆಕ್ಟರ್ ಸ್ಪೆಷಲ್ ಚಿತ್ರದಿಂದ ಟಗರು ಚಿತ್ರದವರೆಗೂ ಧನಂಜಯ್ ಗೆ ಆಪ್ತ ಸ್ನೇಹಿತರಾಗಿರುವ ಮಹೇನ್ ಸಿಂಹ ಧನಂಜಯ್ ಪಟ್ಟ ಕಷ್ಟಗಳ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಧನಂಜಯ ಹೇಗಿದ್ದರು ಎಂದು ಮನಬಿಚ್ಚಿ ಮಾತನಾಡಿದ್ದಾರೆ. ಮಹೇನ್ ಸಿಂಹ ಅವರು ಬರೆದುಕೊಂಡಿರುವ ಸಂಪೂರ್ಣವಾದ ಮಾತುಗಳು ಇಲ್ಲಿದೆ. ಮುಂದೆ ಓದಿ....

  ಅದು 2009 ರ ಸಮಯ

  ''2009 ರ ಸಮಯ...ಆಗ ತಾನೆ. 'ಡೈರೆಕ್ಟರ್ ಸ್ಪೆಷಲ್' ಸಿನಿಮಾ ಒಪ್ಪಿಕೊಂಡಿದ್ದೆ. ಗುರು ಆಫೀಸ್ ಗೆ ಹೋಗಿದ್ದಾಗ, ಕುರುಚಲು ಗಡ್ಡ ಬಿಟ್ಟ ಎತ್ತರಕ್ಕೆ ಸಣ್ಣಕ್ಕಿದ್ದ ಹುಡುಗನೊಬ್ಬನನ್ನ ಪರಿಚಯಿಸಿ "ನೋಡಿ ಇವನೇ ನಮ್ಮ ಹೀರೋ. ಟ್ಯಾಲೆಂಟೆಡ್ ಮೈಸೂರಿನವನು" ಅಂದ್ರು. ಎದ್ದು ಬಂದು ಸಂಕೋಚದಿಂದಲೇ ಕೈ ಕುಲುಕಿದ ಹುಡುಗ ಧನಂಜಯ''

  ಅಂದು ಭವಿಷ್ಯ ಕಂಡಿತ್ತು

  ''ಅವತ್ತೇ ಅವನಿಗೆ ನಾನು ಸಿಂಹಾಜಿ ಆದೆ. ಅವನು ನನಗೆ ಧನ. ಮೊದಲನೇ ಚಿತ್ರದಲ್ಲಿ ಅವನನ್ನ 'ವೀವ್ ಫೈಂಡರ್'ನಲ್ಲಿ ನೋಡಿದ ತಕ್ಷಣ ಹೇಳಿದ್ದೆ. "ನೀನೊಬ್ಬ ಒಳ್ಳೇ ನಟ, ಎತ್ತರಕ್ಕೆ ಬೆಳಿತೀಯ. ಬೇರೆ ತಲೆ ಕೆಡಿಸಿಕೊಳ್ಳಬೇಡ" ಅಂತ. ಆಗೊಮ್ಮೆ ಹಿಗ್ಗಿದ್ದ. ಅಲ್ಲಿಗೆ ಆ ಚಿತ್ರ ಬಂತು, ಹೋಯಿತು...''

  ಟ್ಯಾಲೆಂಟಿಗೆ ತಕ್ಕ ಯಶಸ್ಸು ಸಿಕ್ಕಿಲ್ಲ

  ಆ ನಂತರ ಕಾವೇರಿಯಲ್ಲಿ ಸಾಕಷ್ಟು ನೀರೂ ಹರಿದಾಯ್ತು. ಆ ನಂತರ ನಾನೂ ಹೆಚ್ಚು ಕ್ಯಾಮರ ಮ್ಯಾನ್ ಆಗಿ ಕೆಲಸ ಮಾಡಲಿಲ್ಲ. ನನ್ನ ಫೋಟೋಗ್ರಫಿಯಲ್ಲಿ ತೊಡಗಿಕೊಂಡಿದ್ದೆ. ಧನಂಜಯ ಕೂಡ ಅವನದೇ ಗಮ್ಯ ಹುಡುಕುತ್ತಾ. ಹಲವಾರು ಸಿನಿಮಾ ಮಾಡಿ ಕೊಂಡಿದ್ದ. ಸಾಕಷ್ಟು ಏಳು ಬೀಳು ಕಂಡ. ಕೇಳಬಾರದ ಮಾತು ಕೇಳಿದ. ಪ್ರತಿ ಸಲ ಒಂದು ಸಿನಿಮಾ ಒಪ್ಪಿ ಕೊಂಡಾಗಲೋ..ಅದರ ಬಿಡಗಡೆ ಆಗುವಾಗಲೋ..ಕರೆ ಮಾಡುತಿದ್ದ ದುಗುಡ ಹಂಚಿಕೊಳ್ಳುತಿದ್ದ. ಯಾಕೋ ಅವನಂದು ಕೊಂಡ ಯಶಸ್ಸು ಅವನ ಟ್ಯಾಲೆಂಟಿಗೆ ತಕ್ಕ ಹಾಗೆ ಅವನಿಗೆ ದಕ್ಕಲಿಲ್ಲ.

  'ಟಗರು' ಅವಕಾಶ ಬಂತು

  ''ಆಗೆಲ್ಲಾ ಮನೆಗೆ ಬರುತಿದ್ದ. ಒಟ್ಟಿಗೆ ಕೂತು ಊಟ ಮಾಡುತ್ತಾ. ಕಷ್ಟ ಸುಖ ಹಂಚಿ ಕೊಂಡು ಮುಂದೊಂದು ದಿನ ಮತ್ತೆ ಮೇಲೇಳುವ ಮಾತಾಡುತಿದ್ದ. ನಾನೂ ನನಗೆ ತಿಳಿದ ಮಟ್ಟಿಗೆ ಪ್ರೋತ್ಸಾಹಿಸಿ, ಜೊತೆಗಿರುತಿದ್ದೆ. ಅಷ್ಟರಲ್ಲಿ. ಸೂರಿ ಸರ್ 'ಟಗರು' ಚಿತ್ರಕ್ಕೆ ನನ್ನನ್ನು ಕರೆದರು. ಸ್ವಲ್ಪ ದಿನದ ನಂತರ. ಧನಂಜಯನ ಫೋನು." ಸಿಂಹಾಜಿ. ನಾನೂ ಮಾಡ್ತಿದ್ದೀನಿ. ಈ ಸಿನಿಮಾದಲ್ಲಿ" ಅಂತ ಸಂತಸಗೊಂಡ. ಮತ್ತೆ ಅವನಿಗೆ ನನ್ನ ಕೈಲಾದ ಹಾಗೆ ಮೋಟಿವೇಟ್ ಮಾಡಿ. "ಇದರಲ್ಲಿ ನೀನು ಗೆಲ್ತೀಯ. ನಿನ್ನ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಕ್ಕುತ್ತೆ" ಅಂತ ಹೇಳಿದ್ದೆ. ಒಟ್ಟಿಗೆ ಕೆಲಸ ಮಾಡಿದ್ವಿ. ಸೂರಿ ಸರ್ ಅವರಂತ ಪ್ಯಾಶನೇಟ್ ನಿರ್ದೇಶಕರು ಅವನ ಪ್ರತಿಭೆಯನ್ನ ಹೊರಗೆ ತರುತಿದ್ದದ್ದು ಕ್ಯಾಮೆರ ಕಣ್ಣಲ್ಲಿ ಕಾಣುತಿತ್ತು. ಏನೇ ಆದರೂ. ಜನ ಒಪ್ಪುತ್ತಾರೋ ಇಲ್ಲವೋ ಅನ್ನೋ ಭಯ ಇದ್ದೇ ಇತ್ತು''

  ಈ 5 ಡೈಲಾಗ್ ಕೇಳಿದ್ರೆ ಸಾಕು, 'ಟಗರು' ಏನೂ ಅಂತ ಗೊತ್ತಾಗುತ್ತೆ.!

  ಟಗರು ಬಿಡುಗಡೆಗೂ ಮೊದಲು ಆತಂಕ ಕಾಡುತ್ತಿತ್ತು

  ಮೊನ್ನೆ ಒಮ್ಮೆ ಇಬ್ಬರೂ, ಶೂಟಿಂಗ್ ಮುಗಿದ ಮೇಲೆ ಅವರೂರಿಗೆ ಹೋಗಿ. ಅವರ ತಂದೆ ತಾಯಿಯನ್ನು ಭೇಟಿ ಮಾಡಿ, ನಮ್ಮೂರಿಗೆ ಹೋಗಿ ಹಾಗೇ ದೇವಸ್ಥಾನಗಳ ಸುತ್ತಿಯೂ ಬಂದ್ವಿ. ಚಿತ್ರ ಬಿಡುಗಡೆ ಆಯ್ತು. ಹಿಂದಿನ ರಾತ್ರಿ ಕರೆ ಮಾಡಿ ಆತಂಕ ಹಂಚಿ ಕೊಂಡಿದ್ದ. "ದೇವರಿದ್ದಾನೆ ನಿನ್ನ ಹಾಗೇ ನನಗೂ ಇವತ್ತು ಭಯ ಕಣೋ. ಏನ್ ಹೇಳ್ಲಿ ನಿನಿಗೆ" ಅಂದೆ.

  ಆ ಕ್ಷಣ ನೋಡಿ ಖುಷಿ ಆಯ್ತು

  ''ಬೆಳಿಗ್ಗಿನ ಮೊದಲನೇ ಶೋಗೆ ಅವನು ಹೊರಟ. ನಾನು ನಂತರದ ಶೋಗೆ ಹೋದೆ. "ಊರ್ವಶಿ" ಚಿತ್ರಮಂದಿರದಲ್ಲಿ ಚಿತ್ರ ನೋಡಿ ಹೊರಗೆ ಬಂದೆ. ತೆರೆಯ ಹಿಂದೆ ಕೆಲಸ ಮಾಡಿದ್ದ ನನ್ನ ಯಾರೂ ಗಮನಿಸಿರಲಿಲ್ಲ. ಆದರೆ, ಥಿಯೇಟರ್ ನ ಆ ಗಾಜಿನ ಗೋಡೆಯ ಹೊರಗೆ. ದೊಡ್ಡದೊಂದು ಕಾರಿನ ಮೇಲೆ ನಿಂತಿದ್ದ ಧನಂಜಯನನ್ನ ಜನ ಮುತ್ತಿಕೊಂಡಿದ್ದರು. ನಾನು ಥಿಯೇಟರ್ ಒಳಗಿದ್ದೆ''

  ಸಂತೋಷದ ನೆನಪಿಗೆ ತೆಗೆದುಕೊಂಡ ಫೋಟೋ

  ''ಒಂದೇ ಮಾತು. ಡಾಲಿ..ಡಾಲಿ..ಡಾಲಿ...ಹೊರ ಬಂದು ಮಾತಾಡುವ ಅಂದುಕೊಂಡರೆ ಅವನ ಬಳಿ ಹೋಗುವುದಕ್ಕೂ ಸಾಧ್ಯವಿರಲಿಲ್ಲ. ಆ ಕ್ಷಣದಲ್ಲಿ ನಾನು ಅವನಿಗೆ ಇನ್ನೇನೂ ಹೇಳ ಬೇಕಿರಲಿಲ್ಲ. ಅವನು ಇಷ್ಟೂ ದಿನ ಪಟ್ಟಿದ್ದ ಕಷ್ಟಗಳಿಗೆ ಬಿಡುಗಡೆ ಸಿಕ್ಕಿತ್ತು. ಇವತ್ತು ಮನೇಗೆ ಬಂದ. ಮತ್ತೆ ಊಟ ಮಾಡಿ ಹೊರಡುವವನಿದ್ದ. "ಒಂದು ನಿಮಿಷ ಇರು.." ಅಂದು.. ಈ ಬೋರ್ಡ್ ಗೇಮ್ ಮುಂದೆ ಒಂದು ಚಿತ್ರ ತೆಗೆಸಿಕೊಂಡ್ವಿ. "you hit a bulls eye boy" ಅಂದೆ. ನನಗೂ ಮೊದಲನೇ ಯಶಸ್ಸು ಸಿಕ್ಕಿತ್ತು. ಇದಕ್ಕೆಲ್ಲಾ ಕಾರಣರಾದ ಸೂರಿ ಸರ್...ಮನಸ್ಸಲ್ಲಿದ್ರು''

  ಚಿತ್ರಮಂದಿರದಿಂದ ಹೊರ ಬಂದ ಮೇಲೆಯೂ ಕಾಡುತ್ತಿರುವ 'ಟಗರು' ಪಾತ್ರಗಳು

  ಟಗರು ದರ್ಶನಕ್ಕೆ ಮುಂಚೆ 'ಕಾಕ್ರೋಚ್', 'ಡಾಲಿ', 'ಚಿಟ್ಟೆ'ಯ ಹಿಸ್ಟರಿ ತಿಳಿದುಕೊಳ್ಳಿ

  English summary
  Cinematographer mahen simha has taken his facebook account to express actor Dhananjay's difficult days in film industry.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more