»   » ಕಾಲಿವುಡ್ ನಲ್ಲಿ ಕ್ಯಾಮರಾ ಇಟ್ಟ ಕನ್ನಡದ ಸಿನಿಮಾಟೋಗ್ರಾಫರ್ ಸತ್ಯ ಹೆಗಡೆ

ಕಾಲಿವುಡ್ ನಲ್ಲಿ ಕ್ಯಾಮರಾ ಇಟ್ಟ ಕನ್ನಡದ ಸಿನಿಮಾಟೋಗ್ರಾಫರ್ ಸತ್ಯ ಹೆಗಡೆ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ತಂತ್ರಜ್ಞರು ಈಗ ಪರಭಾಷೆಯಲ್ಲಿಯೂ ಮೋಡಿ ಮಾಡುತ್ತಿದ್ದಾರೆ. ಸದ್ಯ ಸ್ಯಾಂಡಲ್ ವುಡ್ ಖ್ಯಾತ ಸಿನಿಮಾಟೋಗ್ರಾಫರ್ ಆಗಿರುವ ಸತ್ಯ ಹೆಗಡೆ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಸಂದರ್ಶನ : ಇಂದಿನ ಸಮಾಜದ ಪ್ರತಿಬಿಂಬವೇ ಈ 'ಬಟರ್ ಫ್ಲೈ'

ಈಗಾಗಲೇ ಕನ್ನಡದಲ್ಲಿ ಸತ್ಯ ಹೆಗಡೆ ಅನೇಕ ಸಿನಿಮಾ ಮಾಡಿದ್ದಾರೆ. ದೊಡ್ಡ ನಿರ್ದೇಶಕರ ಸಿನಿಮಾದಲ್ಲಿ ಕ್ಯಾಮರಾ ಹಿಡಿದು ತಮ್ಮ ಪ್ರತಿಭೆ ತೋರಿಸಿದ್ದಾರೆ. ಅದರಲ್ಲಿಯೂ ಸೂರಿ ನಿರ್ದೇಶನ 'ದುನಿಯಾ', 'ಇಂತಿ ನಿಮ್ಮ ಪ್ರೀತಿಯ', 'ಕೆಂಡಸಂಪಿಗೆ' ಸೇರಿದಂತೆ ಅವರ ಎಲ್ಲ ಚಿತ್ರಗಳಿಗೆ ಸತ್ಯ ಹೆಗಡೆ ಅವರೇ ಸಿನಿಮಾಟೋಗ್ರಾಫರ್ ಆಗಿದ್ದರು.

 Cinematographer Sathya Hegde debut to kollywood

ಇದರ ಜೊತೆಗೆ 'ಮೈನಾ', 'ಮನಸಾರೆ' 'ಗಜಕೇಸರಿ' ಹೀಗೆ ಅನೇಕ ಸೂಪರ್ ಹಿಟ್ ಚಿತ್ರಕ್ಕೆ ಸತ್ಯ ಕೆಲಸ ಮಾಡಿದ್ದರೆ. ಇದೀಗ ರಮೇಶ್ ಅರವಿಂದ್ ಚಿತ್ರಕ್ಕೆ ಮೊದಲ ಬಾರಿಗೆ ಕ್ಯಾಮರಾ ಮ್ಯಾನ್ ಆಗಿದ್ದು, 'ಬಟರ್ ಫ್ಲೈ' ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ಅಂದಹಾಗೆ, 'ಬಟರ್ ಫ್ಲೈ' ಚಿತ್ರ ತಮಿಳು ಭಾಷೆಯಲ್ಲಿಯೂ ಬರುತ್ತಿದ್ದು, ಈ ಚಿತ್ರದ ಮೂಲಕ ಸತ್ಯ ಹೆಗಡೆ ಕಾಲಿವುಡ್ ಪ್ರವೇಶ ಮಾಡಿದ್ದಾರೆ. ಈ ಚಿತ್ರದ ನಾಯಕಿ ಆಗಿ ಕಾಜಲ್ ಅಗರ್ವಾಲ್ ಕಾಣಿಸಿಕೊಳ್ಳುತ್ತಿದ್ದಾರೆ.

English summary
Kannada cinematographer Sathya Hegde debut to kollywood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X