»   » ಮುತ್ತುಲಕ್ಷ್ಮಿ ಹೊಸ ವರಸೆ, ಮತ್ತೆ ವರ್ಮಾ, ವೀರಪ್ಪನ್ ಗೆ ಕಂಟಕ.!

ಮುತ್ತುಲಕ್ಷ್ಮಿ ಹೊಸ ವರಸೆ, ಮತ್ತೆ ವರ್ಮಾ, ವೀರಪ್ಪನ್ ಗೆ ಕಂಟಕ.!

Posted By:
Subscribe to Filmibeat Kannada

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಆಕ್ಷನ್-ಕಟ್ ಹೇಳಿರುವ ಶಿವಣ್ಣ ಅವರ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾಕ್ಕೆ ಮತ್ತೊಂದು ಕಂಟಕ ಎದುರಾಗಿದೆ. ಈ ಬಾರಿ ಕಂಟಕ ತಂದಿಟ್ಟವರು ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಅವರು.

ಕರಾರು ಪತ್ರದ ನಿಯಮವನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿದ ಕನ್ನಡದ 'ಕಿಲ್ಲಿಂಗ್ ವೀರಪ್ಪನ್' ಚಿತ್ರಕ್ಕೆ ಸಿಟಿ ಸಿವಿಲ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಪರ ವಾದ ಮಾಡಿದ ವಕೀಲ ಜೈಪ್ರಕಾಶ್ ತಿಳಿಸಿದ್ದಾರೆ.['ಕಿಲ್ಲಿಂಗ್ ವೀರಪ್ಪನ್' ಚಿತ್ರ ಬಿಡುಗಡೆಗೆ ಮುತ್ತುಲಕ್ಷ್ಮಿ ನಕ್ರಾ?]

2006 ರಲ್ಲಿ ಮುತ್ತುಲಕ್ಷ್ಮಿ ಅವರು ಬರೆದಿರುವ ಕರಾರು ಪತ್ರಕ್ಕೆ ನಿರ್ದೇಶಕ ರಾಮ್ ಗೋಪಾಲ ವರ್ಮಾ ಸಹಿ ಹಾಕಿದ್ದಾರೆ. ಕರಾರು ಪತ್ರದ ಪ್ರಕಾರ ವರ್ಮಾ ಅವರು ಹಿಂದಿ ಮತ್ತು ತಮಿಳು ಡಬ್ಬಿಂಗ್ ಚಿತ್ರಗಳನ್ನು ಮಾತ್ರ ನಿರ್ದೇಶಿಸಲು ಅವರಿಗೆ ಹಕ್ಕಿದೆ. ಆದರೆ ನಿಯಮವನ್ನು ಉಲ್ಲಂಘಿಸಿ ಕನ್ನಡ ಚಿತ್ರವನ್ನು ನಿರ್ದೇಶಿಸಿದ್ದಾರೆ ಎಂದು ವಕೀಲ ಜೈ ಪ್ರಕಾಶ್ ಅವರು ನುಡಿದಿದ್ದಾರೆ. ಮುಂದೆ ಓದಿ..

ಮುತ್ತುಲಕ್ಷ್ಮಿ ನಕ್ರಾ

ಕಾಡುಗಳ್ಳ ವೀರಪ್ಪನ್ ಕಥೆಯಾಧರಿತ 'ಅಟ್ಟಹಾಸ' ಚಿತ್ರ ಕೂಡ ಮುತ್ತುಲಕ್ಷ್ಮಿಯಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸಿದ್ದು, ಇದೀಗ ವರ್ಮಾ ಅವರ 'ಕಿಲ್ಲಿಂಗ್ ವೀರಪ್ಪನ್' ಚಿತ್ರಕ್ಕೂ ಇದೇ ಪರಿಸ್ಥಿತಿ ಒದಗಿ ಬರಬಹುದೇ?, ಎಂದು ನಾವು ಈ ಮೊದಲು ಇದೇ ಫಿಲ್ಮಿಬೀಟಲ್ಲಿ ನಿಮಗೆ ಹೇಳಿದ್ವಿ. ಇದೀಗ ಅದು ನಿಜವಾಗಿದ್ದು, ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಅವರು ಚಿತ್ರ ಬಿಡುಗಡೆಗೆ ತಡೆ ಒಡ್ಡಿದ್ದಾರೆ.['ಕಿಲ್ಲಿಂಗ್ ವೀರಪ್ಪನ್' ಚಿತ್ರ ಬಿಡುಗಡೆಗೆ ತಡೆಯಾಜ್ಞೆ]

ಚಿತ್ರದ ವಿರುದ್ಧ ಮುತ್ತುಲಕ್ಷ್ಮಿ ದೂರು

ಅಂದಹಾಗೆ ಡಿಸೆಂಬರ್ 4ರಂದು 'ರಥಾವರ' ಚಿತ್ರದೊಂದಿಗೆ ಶಿವಣ್ಣ ಅವರ 'ಕಿಲ್ಲಿಂಗ್ ವೀರಪ್ಪನ್' ಚಿತ್ರ ತೆರೆ ಕಾಣಬೇಕಿತ್ತು. ಆದರೆ ಇದೀಗ ಮುತ್ತುಲಕ್ಷ್ಮಿ ಅವರು 'ಕಿಲ್ಲಿಂಗ್ ವೀರಪ್ಪನ್' ಚಿತ್ರತಂಡದ ವಿರುದ್ಧ ಕೇಸ್ ದಾಖಲಿಸಿದ್ದರಿಂದ ಚಿತ್ರ ಬಿಡುಗಡೆಗೆ ಮತ್ತೆ ವಿಳಂಬವಾಗುತ್ತಿದೆ.[ಟ್ರೈಲರ್: ದೊಡ್ಡ ಯುದ್ಧ ಗೆಲ್ಲ ಬೇಕು ಅಂದ್ರೆ, ಸಣ್ಣ ಸಣ್ಣ ಯುದ್ದ ಸೋಲಬೇಕ]

ಮುತ್ತುಲಕ್ಷ್ಮಿಯ ಡಿಮ್ಯಾಂಡ್

ವಿಷ್ಯಾ ಏನಪ್ಪಾ ಅಂದ್ರೆ, ವೀರಪ್ಪನ್ ಪತ್ಮಿ ಮುತ್ತುಲಕ್ಷ್ಮಿ ಕೇವಲ ಹಿಂದಿ ಮತ್ತು ತಮಿಳು ವರ್ಷನ್ ನಲ್ಲಿ ಮಾತ್ರ ಸಿನಿಮಾ ಬಿಡುಗಡೆ ಮಾಡಲು ನಿರ್ದೇಶಕ ವರ್ಮಾ ಅವರ ಜೊತೆ ಒಪ್ಪಂದ ಮಾಡಿಕೊಂಡಿದ್ದರಂತೆ. ಆದರೆ ವರ್ಮಾ ಅವರು ಅದನ್ನು ಮೀರಿ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆ ಮಾಡುತ್ತಿರುವುದನ್ನು ನೋಡಿ ಕೆರಳಿದ ಮುತ್ತುಲಕ್ಷ್ಮಿ ಅವರು ಚಿತ್ರತಂಡದ ವಿರುದ್ಧ ದಾವೆ ಹೂಡಿದ್ದಾರೆ.

ವರ್ಮಾ ಪ್ರಾಮಿಸ್ ಮಾಡಿದ್ದರಂತೆ

ಮುತ್ತುಲಕ್ಷ್ಮಿ ಹೇಳುವ ಪ್ರಕಾರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು 'ನಾವು ನಮ್ಮ ಸಿನಿಮಾದಲ್ಲಿ ವೀರಪ್ಪನ್ ಅವರನ್ನು ಕೆಟ್ಟದಾಗಿ ಬಿಂಬಿಸುವುದಿಲ್ಲ' ಎಂದು ಒಪ್ಪಂದ ಮಾಡಿಕೊಳ್ಳುವ ಸಂದರ್ಭದಲ್ಲಿ ಪ್ರಾಮಿಸ್ ಮಾಡಿದ್ದರಂತೆ. ಆದರೆ ಇದೀಗ ಕನ್ನಡ ಮತ್ತು ತೆಲುಗಿನಲ್ಲಿ ಮಾಡುತ್ತಿರುವುದನ್ನು ನೋಡಿದರೆ, ನನಗೆ ಅನುಮಾನ ಕಾಡುತ್ತದೆ. ನಾನು ಹೇಗೆ ನಂಬಲಿ, ಅವರು ಕನ್ನಡ ಮತ್ತು ತೆಲುಗಿನಲ್ಲಿ ವೀರಪ್ಪನ್ ಅವರನ್ನು ಕೆಟ್ಟದಾಗಿ ಬಿಂಬಿಸುವುದಿಲ್ಲ ಅಂತ. ಎಂದು ಮುತ್ತುಲಕ್ಷ್ಮಿ ವರ್ಮಾ ವಿರುದ್ಧ ಕೇಸ್ ಹಾಕಿದ್ದಾರೆ.

ಜಾಹೀರಾತು ನೋಡಿ ಕೇಸ್

ಚಿತ್ರ ಕನ್ನಡ ಮತ್ತು ತೆಲುಗಿನಲ್ಲೂ ತೆರೆ ಕಾಣುತ್ತಿದೆ ಎಂದು ಜಾಹೀರಾತು ನೋಡಿ ಮುತ್ತುಲಕ್ಷ್ಮಿ ಅವರಿಗೆ ತಿಳಿದಿದೆ. ಆದ್ದರಿಂದ ವರ್ಮಾ ಅವರು ಕರಾರು ಪತ್ರದ ನಿಯಮ ಉಲ್ಲಂಘನೆ ಮಾಡಿದ ಕಾರಣ ನಾವು ಕೋರ್ಟ್ ಗೆ ಹೋಗಿದ್ದೆವು. ಇದೀಗ 'ಕಿಲ್ಲಿಂಗ್ ವೀರಪ್ಪನ್' ಚಿತ್ರ ಎಲ್ಲೂ ಪ್ರದರ್ಶನ ಆಗದಂತೆ ಕೋರ್ಟ್ ತಡೆಯಾಜ್ಞೆ ನೀಡಿದ್ದು, ವರ್ಮಾ ಅವರನ್ನು ಡಿಸೆಂಬರ್ 17 ರಂದು ನ್ಯಾಯಾಲಯಕ್ಕೆ ಹಾಜರಾಗಲು ಆದೇಶ ನೀಡಿದೆ, ಎಂದು ಮುತ್ತುಲಕ್ಷ್ಮಿ ಪರ ವಾದ ಮಾಡಿದ ವಕೀಲ ಜೈ ಪ್ರಕಾಶ್ ತಿಳಿಸಿದ್ದಾರೆ.

English summary
Kannada Actor Shivarajkumar and RGV(Ram Gopal Varma) combination 'Killing Veerappan' is again in trouble. On thursday, November 26, Civil Court, Bengaluru has grant stay on the release of the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada