»   » 48ನೇ 'IFFI 2017' ಕಾರ್ಯಕ್ರಮಕ್ಕೆ ಅದ್ದೂರಿ ತೆರೆ

48ನೇ 'IFFI 2017' ಕಾರ್ಯಕ್ರಮಕ್ಕೆ ಅದ್ದೂರಿ ತೆರೆ

Posted By:
Subscribe to Filmibeat Kannada

ಗೋವಾದಲ್ಲಿ ನಡೆಯುತ್ತಿದ್ದ 48ನೇ IFFI (International Film Festival of India) ಕಾರ್ಯಕ್ರಮಕ್ಕೆ ಇಂದು ತೆರೆ ಬೀಳುತ್ತಿದೆ. ನವೆಂಬರ್ 20ಕ್ಕೆ ಶುರು ಆಗಿದ್ದ ಈ ಕಾರ್ಯಕ್ರಮ ಇಂದು ಅಂತ್ಯವಾಗುತ್ತಿದೆ.

ಇಂದು ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭ ಶುರುವಾಗಿದ್ದು, ಕಾರ್ಯಕ್ರಮದಲ್ಲಿ ಬಾಲಿವುಡ್ ಚಿತ್ರರಂಗದ ದಿಗ್ಗಜರಾದ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ನಟಿ ಸೋನಾಲಿ ಬೇಂದ್ರೆ, ಪೂಜಾ ಹೆಗ್ಡೆ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಸಾಕಷ್ಟು ಗಣ್ಯರು ಹಾಜರಾಗಿದ್ದಾರೆ.

Closing Ceremony of IFFI 2017

ಅಂದಹಾಗೆ, '48ನೇ IFFI' ಅತ್ಯುತ್ತಮ ನಟ ಪ್ರಶಸ್ತಿ ನಹುವೆಲ್ ಪೆರೆಜ್ ಬಿಸ್ಕಾರ್ಟ್ (Nahuel Perez Biscayart) ಪಾಲಾದರೆ, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಾರ್ವತಿ ಮೆನನ್ ತಮ್ಮ 'ಟೇಕ್ ಆಫ್' ಚಿತ್ರಕ್ಕಾಗಿ ಪಡೆದಿದ್ದಾರೆ. ಉಳಿದಂತೆ ಈ ಬಾರಿಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಒಟ್ಟು 82 ದೇಶದ 195 ಸಿನಿಮಾಗಳು ಪ್ರದರ್ಶನವಾಗಿತ್ತು. ಬಾಲಿವುಡ್ ನಟಿ ಶ್ರೀದೇವಿ ಕಾರ್ಯಕ್ರಮದ ಉದ್ಘಾಟನೆ ಮಾಡಿದ್ದರು. 8 ದಿನಗಳ ಕಾಲ ಫಿಲ್ಮ್ ಫೆಸ್ಟಿವಲ್ ನಡೆದಿತ್ತು.

English summary
A star studded Closing Ceremony of IFFI 2017 at Goa. ಐ.ಐ.ಎಫ್.ಎ 2017 ಕಾರ್ಯಕ್ರಮಕ್ಕೆ ಇಂದು ಅದ್ದೂರಿಯಾಗಿ ತೆರೆ ಬೀಳುತ್ತಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada