For Quick Alerts
  ALLOW NOTIFICATIONS  
  For Daily Alerts

  ಮಾರ್ಚ್ 03 'ವಿಶ್ವ ಕನ್ನಡ ಸಿನಿಮಾ ದಿನ': ಸಿಎಂ ಘೋಷಣೆ

  |

  ಮಾರ್ಚ್ 03 ಅನ್ನು 'ವಿಶ್ವ ಕನ್ನಡ ಸಿನಿಮಾ ದಿನ'ವನ್ನಾಗಿ ಸಿಎಂ ಬಸವರಾಜ ಬೊಮ್ಮಾಯಿ ಇಂದು ಘೋಷಿಸಿದರು.

  13ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮಾ ಉತ್ಸವ ಉದ್ಘಾಟಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಕನ್ನಡ ಸಿನಿಮಾದಲ್ಲಿ ಮಾರ್ಚ್ 03 ಮಹತ್ವದ ದಿನವಾಗಿದ್ದು ಈ ದಿನವನ್ನು ವಿಶ್ವ ಕನ್ನಡ ಸಿನಿಮಾ ದಿನವನ್ನಾಗಿ ಆಚರಿಸಲಾಗುವುದು ಎಂದರು.

  13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ!13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ!

  ಇಂದಿಗೆ ಸರಿಯಾಗಿ 88 ವರ್ಷಗಳ ಹಿಂದೆ 1934 ರಲ್ಲಿ ಮಾರ್ಚ್ 03ರಂದೇ ಕನ್ನಡದ ಮೊದಲ ಸಿನಿಮಾ 'ಸತಿ ಸುಲೋಚನಾ' ಬಿಡುಗಡೆ ಆಗಿತ್ತು. ಹಾಗಾಗಿ ಇದೇ ದಿನವನ್ನು 'ವಿಶ್ವ ಕನ್ನಡ ದಿನ'ವನ್ನಾಗಿ ಘೋಷಿಸಲಾಗಿದೆ.

  ಸಮಾರಂಭದಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ''ಕನ್ನಡ ಚಿತ್ರರಂಗ ಉಳಿಯಬೇಕಾದರೆ ವಿಶೇಷ ಶ್ರಮವನ್ನು ನಾವು ಹಾಕಬೇಕಾಗುತ್ತೆ. 'ಸ್ಪೆಶಲ್ ಎಫೆಕ್ಟ್' ಜೊತೆಗೆ 'ಸ್ಪೆಷಲ್ ಎಫರ್ಟ್' ಸಹ ಬೇಕು. ಕನ್ನಡ ಉಳಿಸಲು ಸಿನಿಮಾಗಳ ಅಗತ್ಯವೂ ಇದೆ. ಪ್ರಸ್ತುತ ಹಲವು ಚಿತ್ರಂದಿರಗಳು ಮುಚ್ಚುತ್ತಿವೆ. ಚಿತ್ರಮಂದಿರಗಳು ಉಳಿಯಲು ಹೊಸ ತಂತ್ರಜ್ಞಾನದ ಚಿತ್ರರಂಗ ದೊರೆಯಬೇಕು. ಕುಟುಂಬದವರು ಮತ್ತೆ ಒಟ್ಟಾಗಿ ಬಂದು ಸಿನಿಮಾ ನೋಡುವಂತೆ ಮಾಡಬೇಕು. ಇದಕ್ಕೆ ಸರ್ಕಾರ ಎಲ್ಲರೀತಿಯ ಸಹಕಾರ ನಿಡಲಿದೆ ಎಂದು ಭರವಸೆಯನ್ನು ನೀಡಿದರು.

  'ಪೆದ್ರೊ'ಗೆ ಅವಕಾಶ ನಿರಾಕರಿಸಿದ್ದು ಏಕೆ? ಸಿನಿಮೋತ್ಸವದಿಂದ ಹೊರಗುಳಿದ ಕನ್ನಡ ಸಿನಿಮಾಗಳಾವುವು?'ಪೆದ್ರೊ'ಗೆ ಅವಕಾಶ ನಿರಾಕರಿಸಿದ್ದು ಏಕೆ? ಸಿನಿಮೋತ್ಸವದಿಂದ ಹೊರಗುಳಿದ ಕನ್ನಡ ಸಿನಿಮಾಗಳಾವುವು?

  ಅಗಲಿದ ನಟ ಪುನೀತ್ ರಾಜ್‌ಕುಮಾರ್ ಅವರನ್ನು ನೆನೆದ ಸಿಎಂ, ''ಪುನೀತ್ ರಾಜ್‌ಕುಮಾರ್ ಅವರು, ಸಮಾಜಕ್ಕೆ ಮತ್ತು ಚಲನಚಿತ್ರ ರಂಗಕ್ಕೆ ಕೊಟ್ಟ ಕೊಡುಗೆ ದೊಡ್ಡದು, ಅವರ ಕೊಡುಗೆ ಶಾಶ್ವತವಾಗಿ ಉಳಿಯಲಿದೆ. ಪುನೀತ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನಿಡಲು ನಿರ್ಧರಿಸಿದ್ದೇವೆ. ಶೀಘ್ರದಲ್ಲೇ ದಿನಾಂಕ ಪ್ರಕಟಿಸಲಾಗುವುದು. ಮೈಸೂರಿನಲ್ಲಿ ಚಿತ್ರನಗರಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತೆ'' ಎಂದರು. ಜೊತೆಗೆ ಪುಟ್ಟಣ್ಣ ಕಣಗಾಲ್ ನಿವಾಸವನ್ನು ಸ್ಮಾರಕ ಮಾಡುವ ಬಗ್ಗೆಯೂ ಚರ್ಚಿಸುವುದಾಗಿ ಹೇಳಿದರು.

  ಮಾರ್ಚ್ 3ಕ್ಕೆ ಬೆಂಗಳೂರು ಸಿನಿಮೋತ್ಸವಕ್ಕೆ ಚಾಲನೆ: ದರ್ಶನ್ ಅತಿಥಿ, ಹಲವು ವಿಶೇಷತೆಗಳುಮಾರ್ಚ್ 3ಕ್ಕೆ ಬೆಂಗಳೂರು ಸಿನಿಮೋತ್ಸವಕ್ಕೆ ಚಾಲನೆ: ದರ್ಶನ್ ಅತಿಥಿ, ಹಲವು ವಿಶೇಷತೆಗಳು

  ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವವನ್ನು ಸಿಎಂ ಬಸವರಾಜ ಬೊಮ್ಮಾಯಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಭಾರತಿ ವಿಷ್ಣುವರ್ಧನ್, ಮಲಯಾಳಂ ಚಿತ್ರರಂಗದ ನಿರ್ದೇಶಕ ಪ್ರಿಯದರ್ಶನ್ ಇತರರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗವಹಿಸಿದ್ದರು. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಮುನಿರತ್ನ ಅವರುಗಳು ಸಹ ಹಾಜರಿದ್ದರು.

  English summary
  Henceforth March 03 will be celebrated as World Kannada Cinema Day CM Basavaraj Bommai. On March 03, 1934 first Kannada movie Sati Sulochana released.
  Friday, March 4, 2022, 9:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X