twitter
    For Quick Alerts
    ALLOW NOTIFICATIONS  
    For Daily Alerts

    ರಾಜ್ಯದ ಜನರ ಪರವಾಗಿ ಅಪ್ಪುವಿಗೆ ಮುತ್ತು ಕೊಟ್ಟೆ: ಸಿಎಂ ಬಸವರಾಜ ಬೊಮ್ಮಾಯಿ

    |

    ಪುನೀತ್ ರಾಜ್‌ಕುಮಾರ್‌ ಅಂತಿಮ ಕಾರ್ಯದ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಪುನೀತ್ ಹಣೆಗೆ ಮುತ್ತನ್ನಿಟ್ಟು ಭಾವುಕರಾಗಿದ್ದರು. ಈ ಬಗ್ಗೆ ಕೆಲವರು ವಿಶ್ಲೇಷಣೆ ಮಾಡಿದ್ದರು. ಈ ಬಗ್ಗೆ ಮಾತನಾಡಿದ ಸಿಎಂ, ''ಅದು ನನ್ನ ಹೃದಯದಿಂದ ಬಂದ ಭಾವನೆ. ಆರು ಕೋಟಿ ಜನರ ಪರವಾಗಿ ನಾನು ಅಪ್ಪುವಿಗೆ ಮುತ್ತು ಕೊಟ್ಟೆ'' ಎಂದರು.

    ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಆಯೋಜಿಸಿದ್ದ ಪುನೀತ್ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ''ಬಹಳ ದೊಡ್ಡ ಬದುಕು ಅಪ್ಪುವಿನ ಮುಂದಿತ್ತು, ಸಾಧನೆಯ ಪರ್ವತ ಏರುವ ಛಲ, ಬಲ ಇತ್ತು. ನಾಡು ಇಂದು ಯುವರತ್ನನನ್ನು ಕಳೆದುಕೊಂಡಿದೆ. ಅಪ್ಪು ನಮಗೆಲ್ಲ ಆತ್ಮೀಯ, ಅವನನ್ನು ಬಾಲ್ಯದಿಂದಲೂ ನಾನು ಬಲ್ಲೆ, ಬಾಲ್ಯದಲ್ಲಿಯೇ ಪ್ರತಿಭೆಯ ಚಿಲುಮೆ ಹೊಂದಿದ್ದ, ಕರ್ನಾಟಕದ ಇತಿಹಾಸದಲ್ಲಿ ಬಾಲನಟನಾಗಿ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ ಆತ. ಅವರ ತಂದೆ ಕನ್ನಡ ನಾಡಿನ ಶ್ರೇಷ್ಟ ಕಲಾವಿದ, ಮಾನವತಾವಾದಿ ಅವರ ಹಾದಿಯಲ್ಲಿಯೇ ಪುನೀತ್ ಸಾಗಿದ'' ಎಂದರು ಬಸವರಾಜ ಬೊಮ್ಮಾಯಿ.

    CM Basavaraj Bommai Talks About Puneeth Rajkumar In Puneeth Namana

    ''ಅಪ್ಪು ಬಹಳ ಸಣ್ಣ ವಯಸ್ಸಿನಲ್ಲಿಯೇ ತಂದೆಯೊಂದಿಗೆ ಪೈಪೋಟಿಯ ನಟನೆ ನೀಡಿದ್ದರು. ತಂದೆಯ ಎದುರು ಅಪ್ಪು ಮಾಡಿದ್ದ ಪ್ರತಿ ನಟನೆ ಅದ್ಭುತ. ಆ ರೀತಿಯ ನಟನೆ ಸುಲಭವಲ್ಲ. ಸಣ್ಣ ವಯಸ್ಸಿನಲ್ಲಿ ಆ ಮಟ್ಟದ ಜಾಗೃತಿ ಇರುವಂಥಹದ್ದು ಸುಲಭವಲ್ಲ. ನಟನೆ, ಯಶಸ್ಸಿನ ನಡುವೆ, ಅವನ ವಿನಯವನ್ನು ರೂಢಿಸಿಕೊಂಡಿದ್ದ. ಅವನ ಸ್ಟಾರ್‌ಡಮ್‌ಗೆ ಕಿರೀಟ ಆಗಿತ್ತು ಆ ವಿನಯ ಹಾಗೂ ಮಾನವತಾವಾದ. ಸ್ಟಾರ್ ಆಗಿದ್ದ ಜೊತೆಗೆ ಪುನೀತ್ ಒಬ್ಬ ಒಳ್ಳೆಯ ಕೌಟುಂಬಿಕ ವ್ಯಕ್ತಿಯಾಗಿದ್ದ. ಕುಟುಂಬವನ್ನು ಬಹಳ ಪ್ರೀತಿಸುತ್ತಿದ್ದ. ರಾಘಣ್ಣ ಆಸ್ಪತ್ರೆಯಲ್ಲಿದ್ದಾಗ ಪುನೀತ್ ಮಾಡಿದ್ದ ಸೇವೆ ನನಗೆ ನೆನಪಿದೆ'' ಎಂದರು.

    ''ಪುನೀತ್ ಮಾಡಿದ್ದ ಸಮಾಜ ಸೇವೆ ಅದ್ಭುತ, ತಾನು ಮಾಡಿದ ಸೇವೆಯನ್ನು ಯಾರಿಗೂ ಹೇಳಿಕೊಳ್ಳದ ಅವರ ಗುಣ ಬಹಳ ದೊಡ್ಡದು. ಶರಣರನ್ನು ಮರಣದಲ್ಲಿ ನೋಡಿ ಎಂಬಂತೆ ಮರಣದ ನಂತರ ಜನ ಆ ವ್ಯಕ್ತಿಯ ಬಗ್ಗೆ ಏನು ಹೇಳುತ್ತಾರೆ ಎಂಬುದು ಆ ಮನುಷ್ಯನ ವ್ಯಕ್ತಿತ್ವ ಬಿಂಬಿಸುತ್ತದೆ. ಅಪ್ಪು ಅಗಲಿದ ಮೇಲೆ ಪ್ರತಿಯೊಬ್ಬರು ಆಡಿದ ಮಾತುಗಳು ಮುತ್ತುಗಳಂತಿದ್ದವು. ಅವನ ವ್ಯಕ್ತಿತ್ವ ನಾಡಿಗೆ ಪರಿಚಯವಾಗಿದೆ'' ಎಂದರು.

    ''ಪುನೀತ್ ಸಾವನ್ನು ನಾನು ಮೊದಲಿಗೆ ನಂಬಲಿಲ್ಲ, ಆದರೆ ಕೊನೆಗೆ ನಂಬಲೇ ಬೇಕಾಯ್ತು. ನಾಡು ಕಂಡ ದೊಡ್ಡ ದುರ್ಘಟನೆ ಇದು. ನಾವು ಯಾರೂ ಈ ದುರ್ಘಟನೆಯನ್ನು ಮರೆಯಲು ಸಾಧ್ಯವಿಲ್ಲ. ಪುನೀತ್ ಸಾವಿನ ಕ್ಷಣದಿಂದ ಹಿಡಿದು ಅಂತಿಮ ಕ್ರಿಯೆಯವರೆಗೆ ದೊಡ್ಮನೆ ಕುಟುಂಬದ ಪ್ರತಿಯೊಬ್ಬ ಸದಸ್ಯರು ನಡೆದುಕೊಂಡ ರೀತಿ ಅತ್ಯಂತ ಆದರ್ಶ ಪ್ರಾಯವಾಗಿತ್ತು. ದೊಡ್ಮನೆ ಕುಟುಂಬಕ್ಕೆ ನಾನು ನಮಿಸುತ್ತಿದ್ದೇನೆ. ಅವರ ಸಹಕಾರ ಒಂದು ಕಡೆಯಾದರೆ, ಅಭಿಮಾನಿಗಳು ಸಹ ದೊಡ್ಡದಾಗಿ ಸಹಕಾರಿದರು. ಅಪ್ಪುವಿನ ವಿನಯದಂತೆ ಅಭಿಮಾನಿಗಳು ವಿನಯದಿಂದಿದ್ದರು, ಎಲ್ಲ ಹಂತದಲ್ಲೂ ಸಹಕಾರ ನೀಡಿದ ಅಭಿಮಾನಿಗಳಿಗೆ ನಮಿಸುತ್ತೇನೆ ಮತ್ತು ಸಹಕಾರ ನೀಡಿದ ನಮ್ಮ ಸರ್ಕಾರದ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದ'' ಎಂದರು ಸಿಎಂ.

    ''ಅಪ್ಪು ನನೆಪು ಚಿರಸ್ಥಾಯಿ ಆಗಬೇಕೆಂದು ಒತ್ತಾಯ ಕೇಳಿಬರುತ್ತಿದೆ ಸರ್ಕಾರದ ಅಭಿಲಾಷೆ ಸಹ ಅದೇ. ಪುನೀತ್‌ರ ಅಂತಿಮ ಸ್ಥಳವನ್ನು ಅಭಿವೃದ್ಧಿ ಪಡಿಸುತ್ತೇವೆ, ಸ್ಥಳವನ್ನು ಅವರಿಗೆ ಮಾಡಿಕೊಡುತ್ತೇವೆ. ಜೊತೆಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡುತ್ತೇವೆ. ಸೂರ್ಯ ಚಂದ್ರ ಇರೋವರೆಗೆ ಪುನೀತ್ ಚಿರಸ್ಥಾಯಿಯಾಗಿ ಇರುತ್ತಾರೆ. ರಾಜ್‌ ಕುಟುಂಬ ನಮ್ಮೆಲ್ಲರ ಹೃದಯದಲ್ಲಿರುತ್ತದೆ'' ಎಂದರು.

    English summary
    CM Basavaraj Bommai talaks about Puneeth Rajkumar in Puneeth Namana. He said Puneeth's name will be forever.
    Tuesday, November 16, 2021, 23:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X