For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಆಡಿಯೋ ಎನ್ನಲಾಗುತ್ತಿರುವ ಆ ಕ್ಲಿಪ್ ನಲ್ಲಿ ಏನಿದೆ? ಈ ಆಡಿಯೋ ರಹಸ್ಯವೇನು?

  |
  Lok Sabha Elections 2019 : ದರ್ಶನ್ ಆಡಿಯೋ ಎನ್ನಲಾಗುತ್ತಿರುವ ಆ ಕ್ಲಿಪ್ ನಲ್ಲಿ ಏನಿದೆ? ಈ ಆಡಿಯೋ ರಹಸ್ಯವೇನು?

  ಮಂಡ್ಯ ರಾಜಕಾರಣದಲ್ಲಿ ಸದ್ಯ ನಟ ದರ್ಶನ್ ಮಾತನಾಡಿರುವ ಸಂಭಾಷಣೆ ಎನ್ನಲಾಗುತ್ತಿರುವ ಆಡಿಯೋ ಕ್ಲಿಪ್ ದೊಡ್ಡ ಸಂಚಲನ ಸೃಷ್ಟಿಸಿದೆ. ಮಂಡ್ಯದ ಕೆಲವು ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಈ ಆಡಿಯೋ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡ್ತಿದ್ದಾರೆ.

  ನಟ ದರ್ಶನ್ ಅವರು ಮಂಡ್ಯ ಜನರ ಬಗ್ಗೆ ಅವಹೇಳನಕಾರಿಯಾಗಿ, ತುಂಬಾ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಈ ಆಡಿಯೋ ವೈರಲ್ ಆಗಿದೆ. ಇದೀಗ, ಈ ಆಡಿಯೋ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಆ ಆಡಿಯೋ ಬಗ್ಗೆ ಹೇಳಿದ್ದಾರೆ. ಸಿಎಂ ಕೂಡ ಈ ಆಡಿಯೋ ನಿಜ ಎನ್ನುವ ರೀತಿಯಲ್ಲಿ ಹೇಳಿಕೆ ನೀಡಿರುವುದು ನಿಜಕ್ಕೂ ಅಚ್ಚರಿ ತಂದಿದೆ.

  ಜೋಡೆತ್ತುಗಳ ವಿರುದ್ಧ ಸಿಎಂ ಕುಮಾರಸ್ವಾಮಿ ಗರಂ: ಯಾರದು ಡಿ ಬಾಸ್?

  ಆದ್ರೆ, ಆ ಆಡಿಯೋ ಯಾವುದು, ಈಗ್ಯಾಕೆ ವೈರಲ್ ಆಗುತ್ತಿದೆ, ನಿಜಕ್ಕೂ ಆ ಕ್ಲಿಪ್ ನಲ್ಲಿರುವುದು ದರ್ಶನ್ ಅವರ ಧ್ವನಿನಾ ಎಂಬುದು ಸದ್ಯಕ್ಕೆ ಉತ್ತರ ಸಿಗದ ಪ್ರಶ್ನೆಯಾಗಿದೆ. ಆದ್ರೆ, ಮಂಡ್ಯ ರಾಜಕಾರಣದಲ್ಲಿ ಈ ಆಡಿಯೋ ಕ್ಲಿಪ್ ಮಾತ್ರ ಸಖತ್ ಆಗಿಯೇ ಬಳಕೆಯಾಗ್ತಿದೆ.? ಅಷ್ಟಕ್ಕೂ, ಏನಿದು ಆಡಿಯೋ ರಹಸ್ಯ?

  2009ರಲ್ಲಿ ಮಾತನಾಡಿದ್ದ ಆಡಿಯೋ ಅಂತಿದ್ದಾರೆ.!

  2009ರಲ್ಲಿ ಮಾತನಾಡಿದ್ದ ಆಡಿಯೋ ಅಂತಿದ್ದಾರೆ.!

  2009ರ ಲೋಕಸಭೆ ಚುನಾವಣೆಯಲ್ಲಿ ನಟ ಅಂಬರೀಶ್ ಅವರು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಜೆಡಿಎಸ್ ಅಭ್ಯರ್ಥಿ ವಿರುದ್ಧ ಸೋತಿದ್ದರು. ಆ ಸಂದರ್ಭದಲ್ಲಿ ಅಂಬಿ ಪರ ದರ್ಶನ್ ಚುನಾವಣೆ ಪ್ರಚಾರ ಮಾಡಿದ್ದರು. ಫಲಿತಾಂಶದ ಬಳಿಕ ಕೆಲವು ಅಭಿಮಾನಿಗಳ ಜೊತೆ ದರ್ಶನ್ ಮಾತನಾಡಿರುವ ಆಡಿಯೋ ಎಂದು ಆರೋಪಿಸುತ್ತಿದ್ದಾರೆ. ಆದ್ರೆ, ಎಷ್ಟು ನಿಜ ಎಂಬುದು ಗೊತ್ತಾಗುತ್ತಿಲ್ಲ.

  ಸುಮಲತಾ ಮಾತ್ರವಲ್ಲ, ನಾನು ಯಾರ ಪರವೂ ಪ್ರಚಾರ ಮಾಡಲ್ಲ: ಶಿವಣ್ಣ

  ಅಂಬಿಯನ್ನ ಸೋಲಿಸಿದ್ದಕ್ಕೆ ದರ್ಶನ್ ಗರಂ

  ಅಂಬಿಯನ್ನ ಸೋಲಿಸಿದ್ದಕ್ಕೆ ದರ್ಶನ್ ಗರಂ

  ಅಂಬರೀಶ್ ಅವರನ್ನ ಮಂಡ್ಯದಲ್ಲಿ ಸೋಲಿಸಿದ್ದಕ್ಕೆ ನಟ ದರ್ಶನ್ ಅವರು ಮಂಡ್ಯ ಜನರ ಬಗ್ಗೆ ಕೆಟ್ಟದಾಗಿ ಮಾತನಾಡುವ ಮೂಲಕ ನಿಂದಿಸಿದ್ದಾರೆ. ಇದರಲ್ಲಿ ಬಹಳ ಕೆಟ್ಟ ಪದ ಬಳಕೆ ಮಾಡಲಾಗಿದೆ ಎಂದು ದೂರಿದ್ದಾರೆ. ಬಟ್, ಈ ಆಡಿಯೋ ಯಾವುದೇ ಖಚಿತ ಮಾಹಿತಿ ಇಲ್ಲ. ಯಾಕಂದ್ರೆ, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಆಡಿಯೋ. ಹಾಗಾಗಿ, ನಂಬಕೆಗೆ ಅರ್ಹವಿಲ್ಲವಾದರೂ, ರಾಜಕಾರಣದಲ್ಲಿ ಇಂತಹ ಆಡಿಯೋ ಕ್ಲಿಪ್ ಗಳು ಚೆನ್ನಾಗಿ ಬಳಕೆಯಾಗುತ್ತೆ ಎಂಬುದಕ್ಕೆ ಹಲವು ಉದಾಹರಣೆ ಇವೆ.

  ಆಡಿಯೋ ಕ್ಲಿಪ್ ಗೆ ಸಿಎಂ ಏನಂದ್ರು?

  ಆಡಿಯೋ ಕ್ಲಿಪ್ ಗೆ ಸಿಎಂ ಏನಂದ್ರು?

  ನಿಖಿಲ್ ಕುಮಾರ್ ಅವರ ತಂದೆ ಹಾಗೂ ರಾಜ್ಯದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕೂಡ ದರ್ಶನ್ ಅವರದ್ದು ಎನ್ನಲಾಗುತ್ತಿರುವ ಆಡಿಯೋ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ''ಈ ಮಾತುಗಳನ್ನ ಕೇಳಿದ್ರೆ ದರ್ಶನ್ ಅವರನ್ನ ಮಂಡ್ಯಕ್ಕೆ ಕಾಲಿಡಲು ಮಂಡ್ಯ ಜನ ಬಿಡಲ್ಲ'' ಎಂದು ಕಿಡಿ ಕಾರಿದ್ದಾರೆ.

  ದರ್ಶನ್ ಮನೆ ಮೇಲೆ ಕಲ್ಲು ತೂರಾಟ: 'ಚಾಲೆಂಜ್ ಆಗಿ ಸ್ವೀಕರಿಸ್ತಾರೆ' ಎಂದ ಸುಮಲತಾ

  ಮಿಮಿಕ್ರಿ ಮಾಡಿದ್ದಾರೆ ಎನ್ನುವುದು ಫ್ಯಾನ್ಸ್ ಆರೋಪ

  ಮಿಮಿಕ್ರಿ ಮಾಡಿದ್ದಾರೆ ಎನ್ನುವುದು ಫ್ಯಾನ್ಸ್ ಆರೋಪ

  ಸಿನಿಮಾ ನಟರಂತೆ ಮಾತನಾಡುವ ಅನೇಕ ಮಿಮಿಕ್ರಿ ಕಲಾವಿದರಿದ್ದಾರೆ. ದರ್ಶನ್ ಅವರ ಧ್ವನಿಯಲ್ಲಿ ಯಾರೋ ಮಿಮಿಕ್ರಿ ಮಾಡಿ ಈ ರೀತಿ ಅವರ ಹೆಸರಿಗೆ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಡಿ ಬಾಸ್ ಅವರ ಅಭಿಮಾನಿಗಳು ಪ್ರತ್ಯಾರೋಪ ಮಾಡ್ತಿದ್ದಾರೆ. ಆದ್ರೆ, ಇದರಲ್ಲಿ ಯಾವುದು ನಿಜಾ ಯಾವುದು ಸುಳ್ಳು ಎಂದು ಗೊತ್ತಾಗದೇ ಸಾಮಾನ್ಯ ಜನರು ಗೊಂದಲದಲ್ಲಿರುವುದಂತೂ ನಿಜ.

  'ಜೋಡಿ ಎತ್ತು'ಗಳ ಅಬ್ಬರದ ಪ್ರಚಾರ: ಮಂಡ್ಯದಲ್ಲಿ ಅಂಬಿ ಪತ್ನಿ ಶಕ್ತಿ ಪ್ರದರ್ಶನ

  English summary
  Alleged Audio of Kannada actor Darshan Speaking Bad About Mandya People Goes Viral. but, its not confirm, fake or real audio.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X