»   » 'ಪದ್ಮಾವತಿ' ಬೆಂಬಲಕ್ಕೆ ನಿಂತ ಸಿಎಂ, ಡಿಕೆಶಿ ಮತ್ತು ಸ್ಯಾಂಡಲ್ ವುಡ್

'ಪದ್ಮಾವತಿ' ಬೆಂಬಲಕ್ಕೆ ನಿಂತ ಸಿಎಂ, ಡಿಕೆಶಿ ಮತ್ತು ಸ್ಯಾಂಡಲ್ ವುಡ್

Posted By:
Subscribe to Filmibeat Kannada
ಪದ್ಮಾವತಿ ಕುರಿತು ಸಿಎಂ, ಡಿಕೆಶಿ ಮತ್ತು ಸ್ಯಾಂಡಲ್ ವುಡ್ ಅಭಿಪ್ರಾಯ | FIlmibeat Kannada

'ಪದ್ಮಾವತಿ' ಚಿತ್ರದ ವಿರುದ್ಧ ಹೋರಾಟ, ಪ್ರತಿಭಟನೆ, ಬೆದರಿಕೆಯನ್ನ ಖಂಡಿಸಿ ಸ್ಯಾಂಡಲ್ ವುಡ್ ನಟಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಗಿಣಿ, ಪ್ರಿಯಾಮಣಿ, ಶ್ರದ್ಧಾ ಸೇರಿದಂತೆ ಹಲವು ಕಲಾವಿದರು ದೀಪಿಕಾ ವಿರುದ್ಧದ ಬೆದರಿಕೆಯನ್ನ ಖಂಡಿಸಿದ್ದಾರೆ.

ಕೇವಲ ನಟಿಯರು ಮಾತ್ರವಲ್ಲ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಪದ್ಮಾವತಿ' ವಿವಾದ ಹಿನ್ನೆಲೆ ಕರ್ನಾಟಕ ದೀಪಿಕಾ ಪಡುಕೋಣೆಯ ಪರವಾಗಿ ನಿಲ್ಲುತ್ತೆ ಎಂದು ಟ್ವೀಟ್ ಮಾಡಿದ್ದಾರೆ.

ಹಾಗಿದ್ರೆ, 'ಪದ್ಮಾವತಿ'ಯ ಬಗ್ಗೆ ಯಾರು ಏನಂದ್ರು ಎಂದು ತಿಳಿಯಲು ಮುಂದೆ ಓದಿ.....

ಮುಖ್ಯಮಂತ್ರಿ ಸಿದ್ದರಾಮಯ್ಯ ಏನಂದ್ರು?

''ಬಿಜೆಪಿಯ ಅಸಹಿಷ್ಣತೆ ಸಂಸ್ಕ್ರತಿಯನ್ನ ನಾನು ಖಂಡಿಸುತ್ತೇನೆ. ದೀಪಿಕಾ ಪಡುಕೋಣೆ ಪರವಾಗಿ ಕರ್ನಾಟಕ ನಿಲ್ಲುತ್ತೆ. ನಮ್ಮ ರಾಜ್ಯದ ಹೆಣ್ಣು ಮಗಳು. ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಜರುಗಿಸಿ ಎಂದು ಹರಿಯಾಣದ ಮುಖ್ಯಮಂತ್ರಿ ಅವರಿಗೆ ನಾನು ಒತ್ತಾಯಿಸುತ್ತೇನೆ'' ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

'ಪದ್ಮಾವತಿ'ಯನ್ನ ವಿರೋಧಿಸಿದ್ದಕ್ಕೆ ಪಾಕಿಸ್ತಾನದಿಂದ ಬೆದರಿಕೆ ಕರೆ.! ಮಾಡಿದ್ಯಾರು?

ದೀಪಿಕಾ ರಕ್ಷಣೆ ಅಗತ್ಯ-ಡಿಕೆಶಿ

''ದೀಪಿಕಾ ಪಡುಕೋಣೆ ಅಂತಹ ಹೆಣ್ಣು ಮಗಳನ್ನು ಕೊಲ್ಲುವ ಮಾತನಾಡಿದ್ದಾರೆ. ಇದು ಅಕ್ಷಮ್ಯ ಅಪರಾಧ. ಭೂಮಿಯನ್ನೆ ತಾಯಿ ಎನ್ನುವ ಸಂಸ್ಕಾರ ನಮ್ಮದು. ಇವರು ತಲೆ ಕಡಿರಿ ಮೂಗು ಕತ್ತರಿಸಿ ಎನ್ನುತ್ತಿದ್ದಾರೆ. ಕೂಡಲೆ ಕೇಂದ್ರ ಸರ್ಕಾರ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಬೇಕು. ರಾಜ್ಯದಲ್ಲಿ ಸಿಎಂ ಹಾಗೂ ಗೃಹ ಸಚಿವರಿಗೂ ಮನವಿ ಮಾಡಿದ್ದೇನೆ'' - ಡಿಕೆ ಶಿವಕುಮಾರ್, ಇಂಧನ ಸಚಿವರು

ದೀಪಿಕಾ ಪಡುಕೋಣೆ ಸಹಾಯಕ್ಕೆ ಡಿಕೆಶಿ ಬರೆಯಲಿದ್ದಾರೆ ಪತ್ರ

ಪ್ರಶಂಸಿಸಬೇಕೇ ಹೊರತು ವಿರೋಧವಲ್ಲ

''ಫೋಟೋಗಳಲ್ಲಿ, ಟ್ರೇಲರ್ ನಲ್ಲಿ ಆ ಸಿನಿಮಾ ಮೇಕಿಂಗ್ ನೋಡಿದರೆ ಖುಷಿಯಾಗುತ್ತದೆ. ಇದಕ್ಕೆಲ್ಲ ದೀಪಿಕಾ ಮತ್ತು ಸಂಜಯ್‌ ಲೀಲಾ ಬನ್ಸಾಲಿಯನ್ನು ಪ್ರಶಂಸಿಸಬೇಕು. ಒಬ್ಬ ಕಲಾವಿದೆಯಾಗಿ ದೀಪಿಕಾ ತಮ್ಮ ಕೆಲಸ ಮಾಡಿದ್ದಾರೆ. ಇದರಲ್ಲಿ ಅವರ ವಿಷಯವನ್ನು ಅನವಶ್ಯಕವಾಗಿ ಎಳೆದು ತರುವುದು ತರವಲ್ಲ'' - ರಾಗಿಣಿ, ನಟಿ

'ಪದ್ಮಾವತಿ' ವಿವಾದಕ್ಕೆ ಟ್ವಿಸ್ಟ್: ರಿಲೀಸ್ ದಿನಾಂಕ ಮುಂದಕ್ಕೆ ಹೋಯ್ತು.!

ನಮ್ಮ ದೇಶದ ಸ್ಥಿತಿ ಅರ್ಥವಾಗುತ್ತಿಲ್ಲ

''ಸಾರ್ವಜನಿಕವಾಗಿ ಒಬ್ಬರನ್ನು ತಲೆ ಕತ್ತರಿಸುತ್ತೇನೆ ಎಂದು ಹೇಳಿಕೆ ನೀಡುತ್ತಾರೆ ಅಂದ್ರೆ ನಮ್ಮ ದೇಶದ ಪರಿಸ್ಥಿತಿ ಹೇಗಿದೆ ಎಂದು ಅರ್ಥವಾಗುತ್ತಿಲ್ಲ. ಇಂಥವರನ್ನು ಮೊದಲು ಕಠಿಣವಾಗಿ ಶಿಕ್ಷಿಸಬೇಕು. ಒಂದು ಸಿನಿಮಾ ಎಂದ ಮೇಲೆ ಕ್ರಿಯೇಟಿವ್‌ ಫ್ರೀಡಂ ಇರುತ್ತದೆ. ಮೊದಲು ಸಿನಿಮಾ ನೋಡಲಿ ಅವರು. ಆಮೇಲೆ ಮಿಕ್ಕಿದ್ದನ್ನು ನಿರ್ಧಾರ ಮಾಡಲಿ. ದೀಪಿಕಾ ಪಡುಕೋಣೆ ಟಾರ್ಗೆಟ್‌ ಮಾಡಿರುವುದು ಅಕ್ಷಮ್ಯ'' - ಶ್ರದ್ಧಾ ಶ್ರೀನಾಥ್, ನಟಿ

ದೀಪಿಕಾ ಕಲಾವಿದೆ ಮಾತ್ರ

''ದೀಪಿಕಾ ಪಡುಕೋಣೆ ಒಬ್ಬ ಕಲಾವಿದೆ, ಈ ಚಿತ್ರದಲ್ಲಿ ಅವರು 'ರಾಣಿ ಪದ್ಮಾವತಿ' ಪಾತ್ರ ಮಾಡಿದ್ದಾರೆ ಅಷ್ಟೇ. ಅವರ ಮೂಗು, ತಲೆ ಕತ್ತರಿಸುತ್ತೇವೆ ಎಂದು ಹೇಳುವುದು ಸರಿಯಲ್ಲ. ಅಲ್ಲದೇ ಆ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸಿತ್ತಿರುವವರು, ಮೊದಲು ಆ ಚಿತ್ರ ನೋಡಿದರೆ ಒಳ್ಳೆಯದು. ಆ ಚಿತ್ರದಲ್ಲಿ ಅವರು ಹೇಳುವಂತ ಆಕ್ಷೇಪಾರ್ಹ ದೃಶ್ಯಗಳಿದ್ದರೆ ಸಿನಿಮಾವನ್ನು ವಾಪಸ್‌ ತೆಗೆದುಕೊಳ್ಳಲಿ. ಚಿತ್ರವನ್ನೇ ನೋಡದೆ ಹೀಗೆ ನಿರ್ಧಾರ ಮಾಡುವುದು ತಪ್ಪು'' - ಪ್ರಿಯಾಮಣಿ, ನಟಿ

ದೀಪಿಕಾ ಪಡುಕೋಣೆ ತಲೆ ಕತ್ತರಿಸಿದ್ರೆ 5 ಕೋಟಿ ಬಹುಮಾನ

English summary
Karnataka chief minister siddaramaiah and power minister DK Shivakumar Tweet About Padmavati Controversy. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಡಿಕೆ ಶಿವಕುಮಾರ್ 'ಪದ್ಮಾವತಿ' ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada