»   » ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಗೆ ಸಿಎಂ ರಿಂದ ಸನ್ಮಾನ

ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಗೆ ಸಿಎಂ ರಿಂದ ಸನ್ಮಾನ

By: ಹರಾ
Subscribe to Filmibeat Kannada

ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡ ನಟ ಸಂಚಾರಿ ವಿಜಯ್ ಗೆ ಇಂದು ಸಿ.ಎಂ.ಸಿದ್ಧರಾಮಯ್ಯ ಸನ್ಮಾನ ಮಾಡಿದರು. ಇವತ್ತು ಮಧ್ಯಾಹ್ನ ವಿಧಾನಸೌಧದಲ್ಲಿ ನಟ ಸಂಚಾರಿ ವಿಜಯ್ ಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಗೌರವಿಸಿದರು.

ಅಸಲಿಗೆ ನಟ ಸಂಚಾರಿ ವಿಜಯ್ ಗೆ ಮುಖ್ಯಮಂತ್ರಿಗಳಿಂದ ಆಹ್ವಾನ ಇರ್ಲಿಲ್ಲ. ತಮಗೆ ರಾಷ್ಟ್ರ ಪ್ರಶಸ್ತಿ ನೀಡಿದ 'ನಾನು ಅವನಲ್ಲ ಅವಳು' ಚಿತ್ರವನ್ನ ಸಿ.ಎಂ ವೀಕ್ಷಿಸಬೇಕು ಅನ್ನುವ ಆಶಯ ಸಂಚಾರಿ ವಿಜಯ್ ಗಿದೆ. ಈ ಬಗ್ಗೆ ಮನವಿ ಮಾಡುವುದಕ್ಕೆ ಆಪ್ತರ ಮುಖಾಂತರ ಮುಖ್ಯಮಂತ್ರಿಗಳನ್ನ ಸಂಚಾರಿ ವಿಜಯ್ ಇಂದು ಭೇಟಿ ಮಾಡಿದರು.

CM Siddaramaiah felicitates National Award winner Sanchari Vijay

ಸಂಚಾರಿ ವಿಜಯ್ ಅವರ ಮನವಿ ಮೇರೆಗೆ 'ನಾನು ಅವನಲ್ಲ ಅವಳು' ಚಿತ್ರವನ್ನ ವೀಕ್ಷಿಸುವುದಾಗಿ ಸಿ.ಎಂ ಸಿದ್ದರಾಮಯ್ಯ ಹೇಳಿದರು. ಇದೇ ವೇಳೆ ತಮ್ಮ ಅತ್ತ್ಯುತ್ತಮ ನಟನೆಗೆ ಸಂದ ಪುರಸ್ಕಾರಕ್ಕೆ ಸಿ.ಎಂ, ತಮ್ಮ ಚೇಂಬರ್ ನಲ್ಲೇ ಸನ್ಮಾನಿಸಿದರು. ಸಚಿವ ಆಂಜನೇಯ ಉಪಸ್ಥಿತರಿದ್ದರು. [ರಾಷ್ಟ್ರ ಪ್ರಶಸ್ತಿ ಬಂತು; ಸಂಚಾರಿ ವಿಜಯ್ ಗೆ ಅದೃಷ್ಟ ಖುಲಾಯಿಸ್ತು.!]

CM Siddaramaiah felicitates National Award winner Sanchari Vijay

ಈ ಬಗ್ಗೆ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡಿದ ಸಂಚಾರಿ ವಿಜಯ್, ''ಸಮಾಜಕ್ಕೆ ಉತ್ತಮ ಸಂದೇಶ ಸಾರುವ 'ನಾನು ಅವನಲ್ಲ ಅವಳು' ಚಿತ್ರವನ್ನ ಮುಖ್ಯಮಂತ್ರಿಗಳು ನೋಡಲಿ ಅನ್ನೋದು ನನ್ನ ಆಶಯವಾಗಿತ್ತು. ಅವರನ್ನ ಕೇಳಿದ್ದೀನಿ. ನೋಡುತ್ತೇನೆ ಅಂದಿದ್ದಾರೆ. ಸನ್ಮಾನ ಮಾಡಿದ್ದು ಖುಷಿಯಾಯ್ತು'' ಅಂದರು.

English summary
Karnataka Chief Minister Siddaramaiah felicitates National Award Winner Sanchari Vijay today in Bengaluru. C.M also agreed to watch Sanchari Vijay Acted 'Nanu Avanalla Avalu' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada