»   » ಕಿಡ್ನಿ ವೈಫಲ್ಯದಿಂದ ಬಳುತ್ತಿದ್ದ ನಿರ್ದೇಶಕ ಎ.ಟಿ ರಘುಗೆ ಸಿಎಂ ನೆರವು

ಕಿಡ್ನಿ ವೈಫಲ್ಯದಿಂದ ಬಳುತ್ತಿದ್ದ ನಿರ್ದೇಶಕ ಎ.ಟಿ ರಘುಗೆ ಸಿಎಂ ನೆರವು

Posted By:
Subscribe to Filmibeat Kannada

ಖ್ಯಾತ ನಿರ್ದೇಶಕ ಎ.ಟಿ.ರಘು ಅವರು ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇತ್ತೀಚೆಗೆ ಅವರ ಎರಡೂ ಕಿಡ್ನಿಗಳು ವಿಫಲವಾಗಿದ್ದವು. ಈ ಸುದ್ದಿಯನ್ನು ತಿಳಿದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ರಘು ಅವರಿಗೆ 5 ಲಕ್ಷದ ಹಣವನ್ನ ನೀಡುವುದರ ಮೂಲಕ ನೆರವಾಗಿದ್ದಾರೆ.[ಹಿರಿಯ ನಿರ್ದೇಶಕ ಎ.ಟಿ.ರಘು ಅಸ್ವಸ್ಥ!]

ಈಗಾಗಲೇ ಚೆಕ್ ಸಿದ್ದವಾಗಿದೆ, ಅದನ್ನ ಅವರ ಕುಟುಂಬಕ್ಕೆ ನೀಡಬೇಕಾಗಿದೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ ಗೋವಿಂದು ಅವರು ಸ್ವಷ್ಟಪಡಿಸಿದ್ದಾರೆ.

CM Siddaramaiah Granted 5 lakh to Director AT Raghu

ಕನ್ನಡ, ಹಿಂದಿ, ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಎ.ಟಿ.ರಘು 1990ರಲ್ಲಿ 'ಅಜಯ್-ವಿಜಯ್' ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿ ಪ್ರವೇಶ ಮಾಡಿದ್ದರು. 'ಇನ್ಸ್ ಪೆಕ್ಟರ್ ಕ್ರಾಂತಿ ಕುಮಾರ್', 'ಪುಟ್ಟ ಹೆಂಡ್ತಿ', 'ಮೈಸೂರು ಜಾಣ', 'ಮಂಡ್ಯದ ಗಂಡು', ಮಿಡಿದ ಹೃದಯಗಳು', 'ಅಂತಿಮ ತೀರ್ಪು', 'ನ್ಯಾಯಕ್ಕಾಗಿ ನಾನು', 'ಪದ್ಮವ್ಯೂಹ', 'ಸೂರ್ಯೋದಯ' ಸೇರಿದಂತೆ ಹಲವು ಚಿತ್ರಗಳನ್ನ ನಿರ್ದೇಶನ ಮಾಡಿದ್ದರು.

English summary
Chief Minister Siddaramaiah has granted a five lakh financial aid for well known director turned actor A T Raghu who is suffering from Kidney failure.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada