»   » ಶಿವಣ್ಣ-ಸುದೀಪ್ ಸಿನಿಮಾ ಟೈಟಲ್ ಲಾಂಚ್ ಮಾಡೋದು ಇವರೇ!

ಶಿವಣ್ಣ-ಸುದೀಪ್ ಸಿನಿಮಾ ಟೈಟಲ್ ಲಾಂಚ್ ಮಾಡೋದು ಇವರೇ!

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಾಗಿ ಅಭಿನಯಿಸುತ್ತಿದ್ದಾರೆ. ಇಬ್ಬರು ದಿಗ್ಗಜರನ್ನ ಒಂದೇ ಪರದೆಯಲ್ಲಿ ತೋರಿಸುವುದಕ್ಕೆ ಹೊರಟಿರುವುದು ಹ್ಯಾಟ್ರಿಕ್ ಡೈರೆಕ್ಟರ್ 'ಜೋಗಿ' ಪ್ರೇಮ್.!

ಸೆಟ್ಟೇರುವ ಮುನ್ನವೇ ಬಹುನಿರೀಕ್ಷೆ ಹುಟ್ಟಿಸಿರುವ ಈ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ನಾಳೆ (ಡಿಸೆಂಬರ್ 13) ಬೆಂಗಳೂರಿನ ಹೋಟೆಲ್ ಲಲಿತ್ ಅಶೋಕದಲ್ಲಿ ನಡೆಯಲಿದೆ.

shivanna-sudeep

ಅಂದ್ಹಾಗೆ, ಶಿವಣ್ಣ-ಸುದೀಪ್ ಅಭಿನಯಿಸುತ್ತಿರುವ ಈ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡುತ್ತಿರುವುದು ಯಾರು ಗೊತ್ತಾ? ಸನ್ಮಾನ್ಯ ಮುಖ್ಯಮಂತ್ರಿಗಳು! [ಸ್ಟಾರ್ ನಟರ ಸಿನಿಮಾದ ಟೈಟಲ್ ಲಾಂಚ್ ಗೆ ಅತಿಥಿ ಯಾರು ಗೊತ್ತಾ?]

siddaramaiah

ಹೌದು, ಪ್ರೇಮ್ ನಿರ್ದೇಶನದ ಹೊಸ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡುವುದಕ್ಕೆ ಸಿ.ಎಂ ಸಿದ್ಧರಾಮಯ್ಯ ಹಸಿರು ನಿಶಾನೆ ತೋರಿಸಿದ್ದಾರೆ. ಸಿ.ಎಂ ಗೃಹ ಕಚೇರಿ ವಲಯದಿಂದ ನಾಳೆ ಸಂಜೆ 7 ಗಂಟೆಗೆ ಮುಖ್ಯಮಂತ್ರಿಗಳ ಕಾರ್ಯಕ್ರಮ ಲಲಿತ್ ಅಶೋಕದಲ್ಲಿ ಫಿಕ್ಸ್ ಆಗಿದೆ.

ಬಿಗ್ ಬಜೆಟ್ ನಲ್ಲಿ ರೆಡಿಯಾಗುತ್ತಿರುವ ಈ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾದ ಟೈಟಲ್ ನಾಳೆ ಜಗಜ್ಜಾಹೀರಾಗಲಿದೆ.

English summary
CM Siddaramaiah will unveil Kannada Actor Shiva Rajkumar and Sudeep starrer Prem Directorial movie title tomorrow (December 13th) in Lalit Ashok, Bengaluru at 7pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada