»   » ಎಲ್ಲ ಬಿಟ್ಟು ಸಿ.ಎಂ ಸಾಹೇಬ್ರು 'ಬಾಹುಬಲಿ-2' ಚಿತ್ರವನ್ನ ವೀಕ್ಷಿಸಿದ್ಯಾಕೆ.?

ಎಲ್ಲ ಬಿಟ್ಟು ಸಿ.ಎಂ ಸಾಹೇಬ್ರು 'ಬಾಹುಬಲಿ-2' ಚಿತ್ರವನ್ನ ವೀಕ್ಷಿಸಿದ್ಯಾಕೆ.?

Posted By:
Subscribe to Filmibeat Kannada

ಸದಾ ರಾಜಕೀಯ ಜಂಜಾಟದಲ್ಲಿ ಬಿಜಿಯಿರುವ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ನಿನ್ನೆ ಸ್ವಲ್ಪ ಫ್ರೀ ಆಗಿದ್ದರು. ಕುಟುಂಬಕ್ಕಾಗಿ ಕೆಲ ಸಮಯ ಮೀಸಲಿಟ್ಟಿದ್ದರು.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಫ್ಯಾಮಿಲಿ ಜೊತೆ ಬೆಂಗಳೂರಿನ ಒರಾಯನ್ ಮಾಲ್ ಗೆ ಆಗಮಿಸಿದ ಸಿ.ಎಂ ಸಾಹೇಬ್ರು ನೇರವಾಗಿ ಪಿ.ವಿ.ಆರ್ ಸಿನಿಮಾಸ್ ಒಳಗೆ ಕಾಲಿಟ್ಟರು.[ಸಾವಿರ ರೂಪಾಯಿ ಕೊಟ್ಟು ಗೋಲ್ಡ್ ಕ್ಲಾಸ್ ನಲ್ಲಿ ಕೂತು 'ಬಾಹುಬಲಿ-2' ನೋಡಿದ ಸಿ.ಎಂ ಸಿದ್ದು.!]

ಅಷ್ಟಕ್ಕೂ, ಸಿ.ಎಂ ಸಿದ್ದರಾಮಯ್ಯ ಅಂಡ್ ಫ್ಯಾಮಿಲಿ ಒರಾಯನ್ ಮಾಲ್ ಗೆ ತೆರಳಿದ್ದು ತೆಲುಗಿನ 'ಬಾಹುಬಲಿ-2' ಚಿತ್ರ ವೀಕ್ಷಿಸಲು.! ಮುಂದೆ ಓದಿರಿ....

ಎಲ್ಲಾ ಬಿಟ್ಟು ಪರಭಾಷೆ ಚಿತ್ರ ಬೇಕಿತ್ತಾ ಕರ್ನಾಟಕದ ದೊರೆಗೆ.?

ಅಪರೂಪಕ್ಕೆ ಕನ್ನಡ ಚಿತ್ರಗಳನ್ನ ಕಣ್ತುಂಬಿಕೊಳ್ಳುವ ಸಿ.ಎಂ ಸಿದ್ದರಾಮಯ್ಯ ನವರು, ಕನ್ನಡ ಚಿತ್ರಗಳನ್ನ ಬಿಟ್ಟು ಪರಭಾಷೆ ಚಿತ್ರವನ್ನ ನೋಡಲು ಥಿಯೇಟರ್ ಗೆ ಹೋಗ್ಬೇಕಿತ್ತಾ ಅಂತ ಹಲವರು ಹುಬ್ಬೇರಿಸಬಹುದು. ಆದ್ರೆ, ಇದರ ಹಿಂದೆಯೂ ಒಂದು ಕಾರಣವಿದೆ.

ಏನು ಆ ಕಾರಣ.?

'ಬಾಹುಬಲಿ-2' ಚಿತ್ರವನ್ನ ನೋಡಬೇಕು ಅಂತ ಒತ್ತಾಯಿಸಿದ್ದು ಸಿದ್ದರಾಮಯ್ಯ ನವರ ಮೊಮ್ಮಗ. ಹೀಗಾಗಿ, ಮೊಮ್ಮಗನ ಒತ್ತಾಯಕ್ಕೆ ಮಣಿದು 'ಬಾಹುಬಲಿ-2' ಚಿತ್ರವನ್ನ ಸಿ.ಎಂ ತಮ್ಮ ಕುಟುಂಬದೊಂದಿಗೆ ವೀಕ್ಷಿಸಿದ್ದಾರೆ.

ಡಾ.ಯತೀಂದ್ರ ಹೇಳಿದ್ದೇನು.?

''ಸಹೋದರ ರಾಕೇಶ್ ಪುತ್ರ ಧವನ್, 'ಬಾಹುಬಲಿ-2' ಚಿತ್ರಕ್ಕೆ ಕರೆದೊಯ್ಯುವಂತೆ ಒತ್ತಾಯಿಸಿದ. ಕಾರ್ಮಿಕ ದಿನಾಚರಣೆಯಿಂದಾಗಿ ನನಗೆ ಹಾಗೂ ಅಪ್ಪನಿಗೆ ಬಿಡುವಿತ್ತು. ಹಾಗಾಗಿ ನಾವೆಲ್ಲ ಒಟ್ಟಿಗೆ ಸಿನಿಮಾ ವೀಕ್ಷಿಸಿದೆವು'' ಎಂದು ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ತಲೆಗೆ 1050 ರೂಪಾಯಿ ಕೊಟ್ಟ ಸಿ.ಎಂ.!

ಮಲ್ಟಿಪ್ಲೆಕ್ಸ್ ಗಳಲ್ಲಿ ಏಕ ರೂಪ ಪ್ರವೇಶ ದರ ಜಾರಿಯಾಗುವಂತೆ ಬಜೆಟ್ ಮಂಡಿಸಿದ ಸಿ.ಎಂ ಸಿದ್ದರಾಮಯ್ಯ, ಟಿಕೆಟ್ ಬೆಲೆ 200 ರೂಪಾಯಿ ದಾಟುವಂತಿಲ್ಲ ಎಂದು ಆದೇಶ ಹೊರಡಿಸಿದ್ದರು. ಆದ್ರೆ, ಈಗ ಸಿದ್ದರಾಮಯ್ಯರವರೇ ತಲೆಗೆ 1050 ರೂಪಾಯಿ ಕೊಟ್ಟು 'ಬಾಹುಬಲಿ-2' ಚಿತ್ರ ವೀಕ್ಷಿಸಿದ್ದಾರೆ.

'ನಿರುತ್ತರ' ಚಿತ್ರ ವೀಕ್ಷಣೆ

'ಬಾಹುಬಲಿ-2' ವೀಕ್ಷಿಸಿದ ಬಳಿಕ, ಕನ್ನಿಂಗ್ ಹ್ಯಾಂ ರಸ್ತೆಯ ಚಾಮುಂಡೇಶ್ವರಿ ಸ್ಟುಡಿಯೋಗೆ ತೆರಳಿದ ಸಿ.ಎಂ. ಸಿದ್ದರಾಮಯ್ಯ, ಅಪೂರ್ವ ಕಾಸರವಳ್ಳಿ ನಿರ್ದೇಶನದ 'ನಿರುತ್ತರ' ಚಿತ್ರವನ್ನ ಕಣ್ತುಂಬಿಕೊಂಡರು.

ಮಲ್ಟಿಪ್ಲೆಕ್ಸ್ ಟಿಕೆಟ್ ದರಕ್ಕೆ ಕಡಿವಾಣ ಯಾವಾಗ.?

ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ದರಕ್ಕೆ ಯಾವಾಗ ಕಡಿವಾಣ ಬೀಳುತ್ತೋ ಎಂದು ಜನ ಎದುರು ನೋಡುತ್ತಿದ್ದಾರೆ.

English summary
Karnataka CM Siddaramaiah watched 'Baahubali-2' because of his Grand Son Dhawan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada