»   » ಕಾಕತಾಳೀಯ! ಒಂದೇ ದಿನ, ಒಂದೇ ಜಾಗ! ದರ್ಶನ್-ಸುದೀಪ್ ಚಿತ್ರ ಮುಹೂರ್ತ

ಕಾಕತಾಳೀಯ! ಒಂದೇ ದಿನ, ಒಂದೇ ಜಾಗ! ದರ್ಶನ್-ಸುದೀಪ್ ಚಿತ್ರ ಮುಹೂರ್ತ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಜಗ್ಗು ದಾದಾ' ಹಾಗೂ ಕಿಚ್ಚ ಸುದೀಪ್ ನಟಿಸಿರುವ 'ಕೋಟಿಗೊಬ್ಬ-2' ಚಿತ್ರ ಒಟ್ಟಿಗೆ ಬಿಡುಗಡೆ ಆಗಲಿದೆ ಅಂತ ಹಿಂದೊಮ್ಮೆ ಸುದ್ದಿ ಆಗಿತ್ತು. ಆ ಸುದ್ದಿ ಎಷ್ಟರಮಟ್ಟಿಗೆ ನಿಜ ಆಗಲಿದೆ ಎಂಬುದು ಸೆನ್ಸಾರ್ ಆದ ಬಳಿಕವಷ್ಟೇ ಗೊತ್ತಾಗಲಿದೆ.

ಒಂದಾನೊಂದು ಕಾಲದ ಕುಚ್ಚಿಕ್ಕು ಗೆಳೆಯರ ಚಿತ್ರಗಳು ಒಟ್ಟೊಟ್ಟಿಗೆ ಬಿಡುಗಡೆ ಆಗುವುದು ಹಾಗಿರಲಿ. ದರ್ಶನ್-ಸುದೀಪ್ ರವರ ಹೊಸ ಚಿತ್ರಗಳ ಮುಹೂರ್ತ ಒಂದೇ ದಿನ, ಒಂದೇ ಜಾಗದಲ್ಲಿ, ಒಂದು ಗಂಟೆ ಅಂತರದಲ್ಲಿ ನೆರವೇರಿದೆ ಅನ್ನೋ ವಿಚಾರ ನಿಮಗೆ ಗೊತ್ತಿದ್ಯಾ.? ಇಲ್ಲ ಅಂದ್ರೆ, ಪೂರಾ ಮ್ಯಾಟರ್ ಇಲ್ಲಿದೆ ಓದಿರಿ....


coincidence-darshan-chakravarthi-sudeep-hebbuli-muhoortha-on-same-day

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ 'ಚಕ್ರವರ್ತಿ' ಚಿತ್ರದ ಮುಹೂರ್ತ ಸಮಾರಂಭ ಮೊನ್ನೆ ಸೋಮವಾರವಷ್ಟೇ (ಮೇ 23) ನೆರವೇರಿರುವ ಬಗ್ಗೆ ನಾವೇ ನಿಮಗೆ ಫೋಟೋ ಸಮೇತ ವರದಿ ಮಾಡಿದ್ವಿ. [ಚಾಮುಂಡಿ ತಾಯಿ ಸನ್ನಿಧಿಯಲ್ಲಿ ಬಾಕ್ಸಾಫೀಸ್ 'ಚಕ್ರವರ್ತಿ'ಗೆ ಪೂಜೆ]


ಅದೇ ಸೋಮವಾರ (ಮೇ 23), ಚಾಮುಂಡಿ ಬೆಟ್ಟದಲ್ಲಿ, ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕಿಚ್ಚ ಸುದೀಪ್ ರವರ ಹೊಸ ಚಿತ್ರ 'ಹೆಬ್ಬುಲಿ' ಪೂಜೆ ಕೂಡ ನಡೆದಿದೆ.


-
-
-
-

'ಚಕ್ರವರ್ತಿ' ಮುಹೂರ್ತ ಸಮಾರಂಭಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸಹೋದರ ದಿನಕರ್ ತೂಗುದೀಪ, ನಟ ಆದಿತ್ಯ, ನಿರ್ದೇಶಕ ಚಿಂತನ್ ಸೇರಿದಂತೆ ಚಿತ್ರತಂಡ ಪಾಲ್ಗೊಂಡಿತ್ತು. [ಫೋಟೋಶೂಟ್: 'ಚಕ್ರವರ್ತಿ' ದರ್ಶನ್ ಗೆ ಸರಿಸಾಟಿ ಯಾರೂ ಇಲ್ಲ ಬಿಡಿ.!]


-
-
-
-
-
-
-
-
-

ಆದ್ರೆ, 'ಹೆಬ್ಬುಲಿ' ಪೂಜಾ ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕ ಕೃಷ್ಣ, ನಿರ್ಮಾಪಕ ರಘುನಾಥ್, ಉಮಾಪತಿ, ಹಾಗೂ ಛಾಯಾಗ್ರಾಹಕ ಕರುಣಾಕರ್ ಮಾತ್ರ ಭಾಗವಹಿಸಿದ್ದರು. ಕಿಚ್ಚ ಸುದೀಪ್ ಬಂದಿರಲಿಲ್ಲ. ['ಹೆಬ್ಬುಲಿ' ಚಿತ್ರಕ್ಕಾಗಿ ಕಿಚ್ಚ ಸುದೀಪ್ 'ಆರ್ಮಿ' ಲುಕ್.!]


ಮುಹೂರ್ತ ಸಮಾರಂಭದ ಕುರಿತಾಗಿ ನಿರ್ದೇಶಕ ಕೃಷ್ಣ ಜೊತೆ ಮಾತಿಗಿಳಿದಾಗ, ''ಮುಹೂರ್ತ, ಪೂಜೆ ಬಗ್ಗೆ ಅಷ್ಟು ನಂಬಿಕೆ ಇಲ್ಲ. ಹೀಗಾಗಿ ಮುಹೂರ್ತ ಸಮಾರಂಭ ಅಷ್ಟು ಗ್ರ್ಯಾಂಡ್ ಆಗಿ ಮಾಡಲಿಲ್ಲ. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇದೆ. ಕೆಲಸ ಪ್ರಾರಂಭಕ್ಕೂ ಮುನ್ನ ಸಣ್ಣ ಪೂಜೆ ಆಗಿದೆ ಅಷ್ಟೆ'' ಎಂದರು.

English summary
Coincidentally, Challenging Star Darshan starrer 'Chakravarthi' and Kiccha Sudeep starrer 'Hebbuli' muhoortha was held on the same day (Monday, May 23rd) in Chamundi Hills, Mysore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada