»   » ಓಂ ಪ್ರಕಾಶ್ ರಾವ್ ಮತ್ತು ಧನಂಜಯ್ ಮಧ್ಯೆ ಶೀತಲ ಸಮರ.!

ಓಂ ಪ್ರಕಾಶ್ ರಾವ್ ಮತ್ತು ಧನಂಜಯ್ ಮಧ್ಯೆ ಶೀತಲ ಸಮರ.!

Posted By:
Subscribe to Filmibeat Kannada

ಕನ್ನಡದ ಸ್ಟಾರ್ ನಿರ್ದೇಶಕ ಮತ್ತು ಸ್ಪೆಷಲ್ ಸ್ಟಾರ್ ಧನಂಜಯ್ ಅವರ ಮಧ್ಯೆ ಶೀತಲ ಸಮರ ನಡೆಯುತ್ತಿದೆ. ಒಬ್ಬರಿಗೊಬ್ಬರು ಆರೋಪ-ಪ್ರತ್ಯಾರೋಪ ಮಾಡುತ್ತಾ ವಿವಾದಕ್ಕೆ ನಾಂದಿ ಹಾಡುತ್ತಿದ್ದಾರೆ.

ಇವರಿಬ್ಬರ ನಡುವಿನ ಈ ಕೋಲ್ಡ್ ವಾರ್ ಗೆ ಕಾರಣ 'ಹೀರೋ'. ಇದು ಇವರಿಬ್ಬರ ಜೋಡಿಯಲ್ಲಿ ಮೂಡಿ ಬರಬೇಕಿದ್ದ ಚಿತ್ರದ ಹೆಸರು. ಈ ಚಿತ್ರದ ಫೋಟೋಶೂಟ್ ಕೂಡ ಆಗಿತ್ತು. ಆದ್ರೆ, ಈ ಸಿನಿಮಾಗೆ ಈಗ ನಾಯಕ ಬದಲಾಗಿದ್ದಾರೆ.

ಅಷ್ಟಕ್ಕೂ, 'ಹೀರೋ' ಚಿತ್ರದಿಂದ ನಾಯಕನ ಬದಲಾವಣೆ ಮಾಡಿದ್ದು ಯಾಕೆ?ಎಂಬುದನ್ನ ತಿಳಿದುಕೊಳ್ಳಲು ಮುಂದೆ ಓದಿ....

ಶೀತಲ ಸಮರಕ್ಕೆ ಕಾರಣ 'ಹೀರೋ'

ಧನಂಜಯ್ ಮತ್ತು ಓ ಪ್ರಕಾಶ್ ರಾವ್ ಅವರ ಕಾಂಬಿನೇಷನ್ ಚಿತ್ರಕ್ಕೆ ನಾಯಕ ಬದಲಾಗಲು ಕಾರಣ 'ಹೀರೋ' ಬಿಝಿ ಅಂತೆ. ಹೀಗಂತಾ ಓಂ ಪ್ರಕಾಶ್ ಆರೋಪ ಮಾಡಿದ್ದಾರೆ.

ಧನಂಜಯ್ ಮೇಲೆ ಯಾಕೆ ಈ ಮುನಿಸು?

"ಧನಂಜಯ್ ಅವರು ಒಂದೇ ಒಂದು ದೃಶ್ಯ ನೋಡಿ ಮೊಟ್ಟ ಮೊದಲ ಬಾರಿಗೆ ಅಡ್ವಾನ್ಸ್ ಮಾಡಿದವ ನಾನು. ಫೋಟೋಶೂಟ್ ಕೂಡಾ ಮಾಡಿಸಿದೆ. ಸುಮಾರು 5 ಲಕ್ಷ ರೂಪಾಯಿ ಖರ್ಚು ಮಾಡಿ, ಫೋಟೋಶೂಟ್, ಫೋಸ್ಟರ್ ಮಾಡಿಸಿದೆ. ಇವತ್ತು ಅವೆಲ್ಲವೂ ಗೋದಾಮಿನಲ್ಲಿದೆ. ಕಾರಣ 'ಹೀರೋ' ಬದಲಾಗಿದ್ದಾರೆ. ಅವರ ಆಟಿಟ್ಯೂಡ್ ತುಂಬಾ ಬಿಝೀ ತರ ಇದೆ'' ಎಂದಿದ್ದರು.

ಬೇಸರ ವ್ಯಕ್ತಪಡಿಸಿದ ಓಂ ಪ್ರಕಾಶ್

"ಮುಂದೆ ಗಾಂಧಿನಗರದ ಇಡ್ಲಿ ವಡೆ ನಿಮ್ಮನ್ನು ಬದಲಿಸಬಹುದು' ಎಂದು ಅವತ್ತೇ ಹೇಳಿದ್ದೆ. ಈಗ ಅದರಂತೆ ಆಗಿದೆ' ಎಂದು ಧನಂಜಯ್ ವಿರುದ್ಧ ನಿರ್ದೇಶಕ ಓಂ ಪ್ರಕಾಶ್ ರಾವ್ ಬೇಸರ ತೋಡಿಕೊಂಡಿದ್ದರು.

ಧನಂಜಯ್ ಪ್ರತಿಕ್ರಿಯೆ

''ಓಂ ಪ್ರಕಾಶ್ ರಾವ್ ನನಗೆ ಅಡ್ವಾನ್ಸ್ ಕೊಟ್ಟ ಮೊದಲ ನಿರ್ದೇಶಕ. ಅದರಲ್ಲಿ ತಪ್ಪೇನಿಲ್ಲ. ಆದರೆ, ಅವರು ಸಿನಿಮಾ ಶುರು ಮಾಡಲೇ ಇಲ್ಲ. ನಾನು ಹಲವು ಬಾರಿ ಅವರ ಮನೆಗೆ ಹೋಗಿ ಕೇಳಿದಾಗಲೂ, ಮಾಡೋಣ ಮಾಡೋಣ ಎಂದು ಮುಂದೆ ಹಾಕುತ್ತಲೇ ಬಂದರು''

ಅಡ್ವಾನ್ಸ್ ವಾಪಸ್ ಕೇಳಿದರು

''ಈ ಮಧ್ಯೆ 'ರಾಟೆ' ಚಿತ್ರದಲ್ಲಿ ಅವಕಾಶ ಸಿಕ್ಕಿತು. ಚಿತ್ರದ ಶೂಟಿಂಗ್ ನಲ್ಲಿದ್ದಾಗಲೇ ಸೆಟ್ ಗೆ ಬಂದ ಓಂಪ್ರಕಾಶ್ ರಾವ್, ಅಡ್ವಾನ್ಸ್ ಹಣವನ್ನು ವಾಪಸ್ ಕೇಳಿದರು. ತೊಂದರೆಯಲ್ಲಿದ್ದೇನೆ ಎಂದರು. ಅದಾದ ನಂತರ ಅವರ ಮನೆಗೇ ಹೋಗಿ ಅಡ್ವಾನ್ಸ್ ಹಣವನ್ನು ವಾಪಸ್ ಕೊಟ್ಟು ಬಂದಿದ್ದೇನೆ''

'ಹುಚ್ಚ-2' ಚಿತ್ರಕ್ಕೆ ಫೋಟೋಶೂಟ್ ಆಗಿತ್ತು

''ಓಂ ಪ್ರಕಾಶ್ ಹೇಳಿದಂತೆ ಫೋಟೋ ಶೂಟ್ ಆಗಿದ್ದು, ಹೀರೋ ಚಿತ್ರಕ್ಕಲ್ಲ. 'ಹುಚ್ಚ-2' ಚಿತ್ರಕ್ಕೆ. 'ಹೀರೋ' ಚಿತ್ರಕ್ಕೆ ನಾನು ನನ್ನ ಬಳಿಯಿದ್ದ ಕೆಲವು ಫೋಟೋಗಳನ್ನೇ ಕಳಿಸಿಕೊಟ್ಟಿದ್ದೆ. ಅದರಲ್ಲೇ ಪೋಸ್ಟರ್ ಡಿಸೈನ್ ಮಾಡಿದರು. ನಿರ್ದೇಶಕ ಓಂಪ್ರಕಾಶ್ ರಾವ್ ಅವರ ಬಗ್ಗೆ ನನಗೆ ಗೌರವವಿದೆ. ಅವರೂ ಅಷ್ಟೆ, ಒಬ್ಬ ನಟನನ್ನು ಪ್ರಾಮಾಣಿಕತೆಯನ್ನು ಗೌರವಿಸಬೇಕು'' ಎಂದು ಸಮರ್ಥಿಸಿಕೊಂಡಿದ್ದಾರೆ.

English summary
Cold war Between Director Om Prakash Rao and Dhananjay, Regarding to 'Hero' Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada