»   » 'ಕಾಲೇಜ್ ಕುಮಾರ'ನ ಆಗಮನಕ್ಕೆ ಮುಹೂರ್ತ ಫಿಕ್ಸ್ ಆಯ್ತು

'ಕಾಲೇಜ್ ಕುಮಾರ'ನ ಆಗಮನಕ್ಕೆ ಮುಹೂರ್ತ ಫಿಕ್ಸ್ ಆಯ್ತು

Written By:
Subscribe to Filmibeat Kannada

'ಕಾಲೇಜ್ ಕುಮಾರ್'ನ ಹವಾ ದಿನೇ ದಿನೇ ಹೆಚ್ಚಾಗುತ್ತಿದೆ. ಸಿನಿಮಾದ ಟ್ರೇಲರ್ ಬಂದ ಮೇಲೆ 'ಕಾಲೇಜ್ ಕುಮಾರ'ನ ಮೇಲೆ ಇದ್ದ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಇದೀಗ ಸಿನಿಮಾದ ಬಿಡುಗಡೆ ದಿನಾಂಕ ಕೂಡ ಹತ್ತಿರಕ್ಕೆ ಬಂದಿದೆ.

'ಕಾಲೇಜ್ ಕುಮಾರ್' ಒಂದು ಪಕ್ಕಾ ಯುವ ಪೀಳಿಗೆಯ ಸಿನಿಮಾವಾಗಿದೆ. ಟೈಟಲ್ ಗೆ ತಕ್ಕನಾಗಿ ಕಾಲೇಜ್ ಕಥೆ ಸಿನಿಮಾದಲ್ಲಿ ಹೇಳಲಾಗಿದೆ. ಜೊತೆಗೆ ತಂದೆ ತಾಯಿ ಸೆಂಟಿಮೆಂಟ್ ಕೂಡ ಸಿನಿಮಾದಲ್ಲಿ ಇದೆ. ಚಿತ್ರದಲ್ಲಿ ಕುಮಾರನ ತಂದೆಯಾಗಿ ರವಿಶಂಕರ್ ತಾಯಿಯಾಗಿ ಶೃತಿ ಕಾಣಿಸಿಕೊಂಡಿದ್ದಾರೆ.

'College Kumar' movie will be releasing on November 10

'ಕೆಂಡಸಂಪಿಗೆ' ಖ್ಯಾತಿಯ ವಿಕ್ಕಿ ಇಲ್ಲಿ ಕಾಲೇಜ್ ಕುಮಾರನಾಗಿದ್ದಾರೆ. ಖಡಕ್ ಹುಡುಗಿಯಾಗಿ ಸಂಯುಕ್ತ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಅಲೆಮಾರಿ ಸಂತು ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರದಲ್ಲಿದೆ. ಉಳಿದಂತೆ ಪ್ರಕಾಶ್ ಬೆಳವಾಡಿ, ಶೃತಿ, ಸಾಧು ಕೋಕಿಲ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು 'ಕಾಲೇಜ್ ಕುಮಾರ್' ಸಿನಿಮಾ ಇದೇ ಶುಕ್ರವಾರ ಅಂದರೆ ನವೆಂಬರ್ 10ಕ್ಕೆ ತೆರೆಗೆ ಬರಲಿದೆ.

English summary
'College Kumar' kannada movie will be releasing on November 10.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X