»   » ನಿಮ್ಮ ಹಕ್ಕು ಚಲಾಯಿಸಿ, ಜವಾಬ್ದಾರಿ ನಿರ್ವಹಿಸಿ - ಇದು ಕಿರುತೆರೆ ಕಲಾವಿದರ ಅಭಿಯಾನ

ನಿಮ್ಮ ಹಕ್ಕು ಚಲಾಯಿಸಿ, ಜವಾಬ್ದಾರಿ ನಿರ್ವಹಿಸಿ - ಇದು ಕಿರುತೆರೆ ಕಲಾವಿದರ ಅಭಿಯಾನ

Posted By:
Subscribe to Filmibeat Kannada

ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವನ್ನ ಸಂಭ್ರಮಿಸಲು ಇನ್ನೊಂದೇ ದಿನ ಬಾಕಿ ಇದೆ. ನಿಮ್ಮ ಹಕ್ಕು ಚಲಾಯಿಸಲು, ನಿಮ್ಮ ಜವಾಬ್ದಾರಿ ನಿರ್ವಹಿಸಲು ಕೆಲವೇ ಕೆಲವು ಕ್ಷಣಗಳಷ್ಟೇ ಉಳಿದಿವೆ.

ಮೇ 12... ಅಂದ್ರೆ ನಾಳೆ (ಶನಿವಾರ) ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದೆ. ನಮ್ಮ ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಿರಬೇಕು, ಸಮಾಜ ಸುಧಾರಣೆ ಆಗಬೇಕು, ಅಭಿವೃದ್ಧಿ ಪಥದಲ್ಲಿ ಕರ್ನಾಟಕ ಸಾಗಬೇಕು ಅಂದ್ರೆ ನಿಮ್ಮೆಲ್ಲರ ಮತ ಅನಿವಾರ್ಯ. ಹೀಗಾಗಿ, ನಾಳೆ ನೀವು ಏನ್ನನ್ನು ಮರೆತರೂ ಪರ್ವಾಗಿಲ್ಲ. ಆದ್ರೆ ಮತದಾನ ಮಾಡುವುದನ್ನು ಮಾತ್ರ ಯಾವುದೇ ಕಾರಣಕ್ಕೂ ಮರೆಯಬೇಡಿ.

ಹೇಗಿದ್ದರೂ ನಾಳೆ ಶನಿವಾರ. ತಿಂಗಳ ಎರಡನೇ ಶನಿವಾರ ಬೇರೆ. ಸರ್ಕಾರಿ ನೌಕರರು ಹಾಗೂ ಬ್ಯಾಂಕ್ ಉದ್ಯೋಗಿಗಳಿಗೆ ರಜೆ ಇದ್ದೇ ಇದೆ. ಕೆಲವು ಖಾಸಗಿ ಕಂಪನಿಗಳು ಕೂಡ ತಮ್ಮ ಉದ್ಯೋಗಿಗಳಿಗೆ ನಾಳೆ ರಜೆ ಘೋಷಿಸಿದೆ. ರಜೆ ಸಿಕ್ಕಿದೆ ಎಂಬ ಕಾರಣಕ್ಕೆ ವೀಕೆಂಡ್ ಟ್ರಿಪ್ ಪ್ಲಾನ್ ಮಾಡುವ ಮೊದಲು ವೋಟ್ ಹಾಕಿ ನಿಮ್ಮ ಕರ್ತವ್ಯ ನಿರ್ವಹಿಸಿ...

ಕಿರುತೆರೆ ನಟ ವಿಜಯ್ ಸೂರ್ಯ, ಪವನ್, ಮಂಡ್ಯ ರಮೇಶ್ ಸೇರಿದಂತೆ 'ಕಲರ್ಸ್ ಕನ್ನಡ' ಕುಟುಂಬದ ಕಲಾವಿದರು ಕೂಡ 'ವೋಟ್ ಮಾಡು ಕರ್ನಾಟಕ' ಎಂದು ಕನ್ನಡ ಜನತೆಯನ್ನು ಕೇಳಿಕೊಳ್ಳುತ್ತಿದ್ದಾರೆ.

ಮತದಾನ ಮಾಡುವುದು ಪುಣ್ಯದ ಕೆಲಸ

''ಮತದಾನ ಮಾಡುವುದು ಜವಾಬ್ದಾರಿ ಹೌದು, ಪುಣ್ಯದ ಕೆಲಸ ಕೂಡ ಹೌದು. ಈ ಹಕ್ಕನ್ನು ನಮಗೆ ಕೊಡಲು ಎಷ್ಟೋ ಜನ ಪ್ರಾಣವನ್ನೇ ಅರ್ಪಿಸಿದ್ದಾರೆ. ಹೀಗಾಗಿ ಮೇ 12 ರಂದು ತಪ್ಪದೆ ವೋಟ್ ಮಾಡಿ'' ಎಂದು 'ಲಕ್ಷ್ಮಿ ಬಾರಮ್ಮ' ಖ್ಯಾತಿಯ ಲಚ್ಚಿ ರಶ್ಮಿ ಪ್ರಭಾಕರ್ ಕೇಳಿಕೊಂಡಿದ್ದಾರೆ.

ವೋಟ್ ಮಾಡಿ ಎನ್ನುತ್ತಿರುವ ಪುನೀತ್, ವೈಷ್ಣವಿ, ಕಂಬಾರರು

ಇದೇ ದೊಡ್ಡ ನಾಡ ಸಡಗರ

''ರಾಜ್ಯೋತ್ಸವ ಬಂತು ಅಂದ್ರೆ ಸಂಭ್ರಮಿಸುತ್ತೇವೆ. ಮೇ 12 ರಂದು ಕೂಡ ನಾಡ ಸಡಗರ ಬರ್ತಾಯಿದೆ. ಎಲೆಕ್ಷನ್ ನಲ್ಲಿ ಸರಿಯಾದ ಸೆಲೆಕ್ಷನ್ ಮಾಡಿದರೆ ಮುಂದಿನ ಐದು ವರ್ಷ ಕೂಡ ಹಬ್ಬವೇ. ಆದ್ದರಿಂದ ಮೇ 12 ರಂದು ಮಿಸ್ ಮಾಡದೆ ವೋಟ್ ಮಾಡಿ'' ಎಂದು 'ಪದ್ಮಾವತಿ' ಧಾರಾವಾಹಿ ಖ್ಯಾತಿಯ ತ್ರಿವಿಕ್ರಮ್ ಜನರಲ್ಲಿ ಮನವಿ ಮಾಡಿದ್ದಾರೆ.

ನಾಳೆ ಏನನ್ನು ಮರೆತರೂ ಮತದಾನ ಮಾಡುವುದನ್ನ ಮರೆಯಬೇಡಿ.!

ಈ ಬಾರಿ ಕಾರಣ ಕೊಡಬೇಡಿ

''ಯಾವುದೇ ಕೆಲಸ ಆಗದೇ ಇದ್ದರೆ, ನಾವು ಕಾರಣ ಕೇಳುತ್ತೇವೆ. ಯಾವ ಕೆಲಸವನ್ನೂ ನಾವು ಮಾಡದೇ ಹೋದರೆ ಏನೋ ಒಂದು ಕಾರಣ ಕೊಡುತ್ತೇವೆ. ಈ ಸಲ ಯಾವ ಕಾರಣವೂ ನಡೆಯೋಲ್ಲ. ನಮ್ಮ ಜವಾಬ್ದಾರಿಯನ್ನ ನಾವೇ ನೆರವೇರಿಸಬೇಕು. ಮೇ 12 ರಂದು ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಮರೆಯಬೇಡಿ'' ಎಂದಿದ್ದಾರೆ 'ಪುಟ್ಟಗೌರಿ ಮದುವೆ'ಯ ಹಿಮ ಖ್ಯಾತಿಯ ನಮ್ರತಾ ಗೌಡ

ಕನ್ನಡ ನೆಲದ ಪ್ರಜ್ಞಾವಂತಿಕೆಗೊಂದು ಸವಾಲು

''ಕನ್ನಡ ನೆಲದ ಪ್ರಜ್ಞಾವಂತಿಕೆಗೊಂದು ಸವಾಲು ಈ ಸಲದ ಚುನಾವಣೆ. ನಾವು ವೋಟ್ ಮಾಡೇ ಮಾಡ್ತೀನಿ. ನೀವು ಮಾಡಬೇಕು'' ಅಂತ ಹೇಳಿದ್ದಾರೆ ನಟ ಮಂಡ್ಯ ರಮೇಶ್.

ತಪ್ಪು ಮಾಡ್ಬೇಡಿ

''ಒಂದು ಮತ ಹಾಕಿದ್ರೆಷ್ಟು, ಬೆಟ್ಟರೆಷ್ಟು ಅಂತ ಕೇಳ್ಬೇಡಿ. ನಿಮ್ಮ ಒಂದು ತಪ್ಪಿನ ಶಿಕ್ಷೆ ಇಡೀ ರಾಜ್ಯ ಅನುಭವಿಸಬಹುದು. ಈ ತರಹ ರಿಸ್ಕ್ ತೆಗೆದುಕೊಳ್ಳುವುದು ಬೇಡ. ಹೀಗಾಗಿ ನಾಳೆ ತಪ್ಪದೆ ವೋಟ್ ಮಾಡಿ ಎಂದಿದ್ದಾರೆ 'ಪುಟ್ಟಗೌರಿ ಮದುವೆ'ಯ ಮಹೇಶ ಖ್ಯಾತಿಯ ರಕ್ಷಿತ್ ಗೌಡ.

ವೋಟ್ ಮಾಡೋದನ್ನ ಮರೆಯಬೇಡಿ

''ನೀವು ಲೈಫ್ ನಲ್ಲಿ ಏನು ಬೇಕಾದರೂ ಮರೆಯಿರಿ. ವೋಟ್ ಮಾಡುವುದು ಮಾತ್ರ ಮರೆಯಬೇಡಿ'' ಅಂತ ಜನರಿಗೆ ಕೇಳಿಕೊಂಡಿದ್ದಾರೆ 'ಮಜಾ ಟಾಕೀಸ್' ಪವನ್.

ಮತದಾನ ನಮ್ಮ ಹಕ್ಕು

''ವೋಟ್ ಮಾಡುವುದು ನಮ್ಮ ಜವಾಬ್ದಾರಿ. ಹಾಗೇ ನಮ್ಮ ಹಕ್ಕು ಕೂಡ. ದಯವಿಟ್ಟು ವೋಟ್ ಮಾಡಿ'' - ಇದು ನಟ ವಿಜಯ್ ಸೂರ್ಯ ಅವರ ಕಳಕಳಿಯ ಮನವಿ.

English summary
Karnataka Assembly Elections 2018: Colors Kannada serial Actors appeals Karnataka people to caste their vote on May 12, 2018. #VoteMaduKarnataka.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X