For Quick Alerts
  ALLOW NOTIFICATIONS  
  For Daily Alerts

  ಶರಣ್ ನಾಯಕತ್ವದ ಮೊದಲ ಚಿತ್ರಕ್ಕೆ ಭಾರಿ ನಿರೀಕ್ಷೆ

  |

  ವರ್ಷವೊಂದಕ್ಕೆ ಹತ್ತಾರು ನಟರು ಬಂದು ಹೋಗುವ ಕನ್ನಡ ಚಿತ್ರರಂಗದಲ್ಲಿ ಬಂದು ಅದೆಷ್ಟೋ ವರ್ಷಗಳಾದರೂ ಇನ್ನೂ ಗಟ್ಟಿಯಾಗಿ ನೆಲೆನಿಂತಿರುವ ನಟ ಶರಣ್ ಇದೀಗ ಕಮರ್ಷಿಯಲ್ ಹೀರೋ ಆಗಿ ತೆರೆಗೆ ಬರುತ್ತಿದ್ದಾರೆ. 'Rambo' ಎಂಬ ವಿಶಿಷ್ಟ ಹೆಸರಿನ ಈ ಚಿತ್ರ, ಶರಣ್ ಅಭಿನಯದ 100 ನೇ ಚಿತ್ರವೆಂಬುದು ವಿಶೇಷ. ಈ ಚಿತ್ರ ಸೆಪ್ಟೆಂಬರ್ 7, 2012 ರಂದು ಬಿಡುಗಡೆಯಾಗಲಿದೆ.

  ಕೆಲವು ವರ್ಷಗಳ ಹಿಂದಿನ 'ಸುಂದರಿ ಗಂಡ ಸದಾನಂದ' ಎಂಬುದು ಶರಣ್ ನಾಯಕರಾಗಿ ಬಣ್ಣ ಹಚ್ಚಿರುವ ಮೊದಲ ಚಿತ್ರ. ಆದರೆ ಅದನ್ನು ಪ್ರೇಕ್ಷಕರು ಥಿಯೇಟರಿನಲ್ಲಿ ನೋಡಲು ಸಾಧ್ಯವಾಗಿಲ್ಲ. ಕೇವಲ ಟಿವಿಯಲ್ಲಷ್ಟೇ ಅದು ಪ್ರಸಾರಕಾಣುವಂತಾಯ್ತು. ಹೀಗಾಗಿ ಇದೀಗ ತೆರೆಗೆ ಬರಲಿರುವ ಚಿತ್ರ, Rambo, ಶರಣ್ ನಾಯಕತ್ವದ ಮೊದಲ ಚಿತ್ರವಾಗಿದೆ. ಅದಕ್ಕೂ ಮೊದಲು ನಟಿ ನಿವೇದಿತಾ ಜೈನ್ ಜೊತೆ ಒಂದು ಚಿತ್ರ ಪ್ರಾರಂಭವಾಗಿತ್ತಾದರೂ ಅವರು ದುರಂತ ಸಾವನ್ನಪ್ಪಿದ ಮೇಲೆ ಆ ಚಿತ್ರ ನಿಂತುಹೋಯ್ತು.

  ಈ ಚಿತ್ರಕ್ಕೆ ಶರಣ್ ಕೇವಲ ನಾಯಕ ನಟರು ಮಾತ್ರವಲ್ಲ, ನಿರ್ಮಾಪಕರಲ್ಲೊಬ್ಬರೂ ಹೌದು. ಇನ್ನೊಬ್ಬ ನಿರ್ಮಾಪಕರು ಅಟ್ಲಾಂಟಾ ನಾಗೇಂದ್ರ. ಈ ಚಿತ್ರದಲ್ಲಿ ಮಾಧುರಿ ಹಾಗೂ ದೀಪಿಕಾ ಎಂಬ ಇಬ್ಬರು ನಾಯಕಿಯರಿದ್ದಾರೆ. ನಗಿಸಲು ಶರಣ್ ಒಬ್ಬರೇ ಸಾಕಿದ್ದರೂ ಜೊತೆಯಲ್ಲಿ ತಬಲಾ ನಾಣಿ, ರಂಗಾಯಣ ರಘು, ತರುಣ್, ಸಂಗೀತಾ ಶೆಟ್ಟಿ, ಶ್ರುತಿ, ಸಾಧು ಕೋಕಿಲ, ಉಮಾಶ್ರೀ, ಉಮೇಶ್, ಕಾಶಿ, ಧರ್ಮ, ಕುರಿಗಳು ಪ್ರತಾಪ್ ಮುಂತಾದವರ ಮಹಾನ್ ಕಲಾವಿದರ ಸಾಥ್ ಇರುವುದು ಪ್ರೇಕ್ಷಕರಿಗೆ ಬೋನಸ್.

  ನಾಯಕರಾಗಿ ನಟನೆ, ನಿರ್ಮಾಣ ಹೀಗೆ ಎಲ್ಲವೂ ಆಗಿರುವ ಶರಣ್ ಜೊತೆ ನಿರ್ಮಾಣದಲ್ಲಿ 'ಸಾಥಿ' ಆಗಿರುವ ಅಟ್ಲಾಂಟಾ ನಾಗೇಂದ್ರ, ಈ ಚಿತ್ರವು ವಿದೇಶದಲ್ಲೂ ಬಿಡುಗಡೆಯಾಗುವಂತೆ ನೋಡಿಕೊಳ್ಲಲಿದ್ದಾರೆ. ಇದು ಶರಣ್ ಚಿತ್ರಕ್ಕೆ ಸಿಕ್ಕಿರುವ ಪ್ಲಸ್ ಪಾಯಿಂಟ್. ಎಂ.ಎಸ್. ಶ್ರೀನಾಥ್ ನಿರ್ದೇಶನದ ಈ ಚಿತ್ರಕ್ಕೆ 'ವಿದ್ಯಾರ್ಥಿ' ಖ್ಯಾತಿಯ ತರುಣ್ ಸಹ-ನಿರ್ಧೇಶನವಿದೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಫಲಿತಾಂಶಕ್ಕಾಗಿ ಶರಣ್ ಕಾಯುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Popular Comedy actor Sharan's starer Kannada movie 'Rambo' releases on next month, 07 September 2012. This is the first movie of Sharan acted as Hero in his carrier. Madhuri and Deepika are the heroines for this MS Shrinath directed movie. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X