»   » ಒಂದೇ ಚಿತ್ರದಲ್ಲಿ ಮಾಸ್ಟರ್ ಆನಂದ್ ಮತ್ತು ಕಾಮಿಡಿ ಕಿಲಾಡಿ ನಯನ ನಟನೆ

ಒಂದೇ ಚಿತ್ರದಲ್ಲಿ ಮಾಸ್ಟರ್ ಆನಂದ್ ಮತ್ತು ಕಾಮಿಡಿ ಕಿಲಾಡಿ ನಯನ ನಟನೆ

Posted By:
Subscribe to Filmibeat Kannada
Master Anand

'ಜೀ ಕನ್ನಡ' ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಮೂಲಕ ಅನೇಕ ಪ್ರತಿಭಾವಂತ ಕಲಾವಿದರು ಕನ್ನಡಿಗರಿಗೆ ಪರಿಚಿತವಾದರು. ಅದರಲ್ಲಿ ನಯನ ಕೂಡ ಒಬ್ಬರು. ಬಜಾರಿ ಹುಡುಗಿ, ಜಂಭದ ಹುಡುಗಿ ಪಾತ್ರಗಳ ಮೂಲಕ ಎಲ್ಲರನ್ನ ನಕ್ಕು-ನಲಿಸುತ್ತಿದ್ದವರು 'ಕಾಮಿಡಿ ಕಿಲಾಡಿ ನಯನ'

ಬೆಳ್ಳಿತೆರೆಗೆ ಬಲಗಾಲಿಟ್ಟು ಬರಲಿದ್ದಾರೆ 'ಕಾಮಿಡಿ ಕಿಲಾಡಿ' ನಯನ

'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ರನ್ನರ್ ಅಪ್ ಆಗಿದ್ದ ನಯನ ಈಗ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ವಿಶೇಷ ಅಂದರೆ, ನಯನ ನಟಿಸುತ್ತಿರುವುದು 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ ದಲ್ಲಿ ಸ್ಪರ್ಧಿ ಆಗಿದ್ದ ಗೋವಿಂದೇಗೌಡ ನಿರ್ದೇಶನದ 'ಜಂತರ್ ಮಂತರ್' ಚಿತ್ರದಲ್ಲಿ. ಈ ಸಿನಿಮಾದ ಒಂದು ವಿಶೇಷ ಹಾಡಿನಲ್ಲಿ ನಯನ ಮತ್ತು 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ನಿರೂಪಕರಾಗಿದ್ದ ಮಾಸ್ಟರ್ ಆನಂದ್ ಕಾಣಿಸಿಕೊಳ್ಳಲಿದ್ದಾರೆ. ರೆಟ್ರೋ ಶೈಲಿಯ ಹಾಡು ಇದಾಗಿದ್ದು, ಹಾಡಿನಲ್ಲಿ ಈ ಜೋಡಿ ಡಿಫರೆಂಟ್ ಲುಕ್ ನಲ್ಲಿ ಮಿಂಚಿದ್ದಾರೆ.

'Comedy Khiladigalu' Nayana to shake her legs in Jantar Mantar movie

'ಜಂತರ್ ಮಂತರ್' ಚಿತ್ರದಲ್ಲಿ ನಟ ಜಗ್ಗೇಶ್ ಕೂಡ ಒಂದು ಹಾಡನ್ನು ಹಾಡಿದ್ದಾರೆ. ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ಇನ್ನು ಈ ಚಿತ್ರದ ಮೂಲಕ ಕಿರುತೆರೆಯಲ್ಲಿ ದೊಡ್ಡ ಕಮಾಲ್ ಮಾಡಿದ್ದ 'ಕಾಮಿಡಿ ಕಿಲಾಡಿಗಳು' ತಂಡ ಬೆಳ್ಳಿ ತೆರೆಯ ಮೇಲೂ ಮೋಡಿ ಮಾಡುವುದಕ್ಕೆ ಸಜ್ಜಾಗಿದೆ.

English summary
Zee Kannada channel's popular show 'Comedy Kiladigalu' runner up Nayana to shake her legs in Kannada Movie Jantar Mantar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada