»   » 'ಕಾಮಿಡಿ ಕಿಲಾಡಿ' ನಯನಗೆ ಹುಡುಕಿಕೊಂಡು ಬಂದ ಅದೃಷ್ಟ.!

'ಕಾಮಿಡಿ ಕಿಲಾಡಿ' ನಯನಗೆ ಹುಡುಕಿಕೊಂಡು ಬಂದ ಅದೃಷ್ಟ.!

Posted By:
Subscribe to Filmibeat Kannada

'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಮೂಲಕ ಬೆಳಕಿಗೆ ಬಂದ ಪ್ರತಿಭೆ ನಯನ. ಈಗಾಗಲೇ ಕನ್ನಡದ ದೊಡ್ಡ ನಟನ ಸಿನಿಮಾದಲ್ಲಿ ಅವಕಾಶ ಪಡೆದುಕೊಂಡಿರುವ ನಯನಗೆ ಈಗ ಮತ್ತೊಂದು ಅದೃಷ್ಟದ ಆಫರ್ ಬಂದಿದೆ.

ರಾಯಲ್ ಸ್ಟಾರ್ ವಿನಯ್ ರಾಜ್ ಕುಮಾರ್ ನಟಿಸುತ್ತಿರುವ 'ಅನಂತು ವರ್ಸಸ್ ನುಸ್ರತ್' ಚಿತ್ರದಲ್ಲಿ ಅವಕಾಶ ಸಿಕ್ಕಿದ್ದು, ಈಗಾಗಲೇ ನಯನ ಶೂಟಿಂಗ್ ಗೆ ಹಾಜರಾಗಿದ್ದಾರೆ.

ಇನ್ನು ನಯನ ಜೊತೆ ಕನ್ನಡದ ಖ್ಯಾತ ಖಳನಟ ಕೂಡ ವಿನಯ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಮುಂದೆ ಓದಿ......

ವಿನಯ್ ಜೊತೆ ಶಾಂತಲಕ್ಷ್ಮಿ

ವಿನಯ್ ರಾಜ್ ಕುಮಾರ್ ಅವರ 'ಅನಂತು ವರ್ಸಸ್ ನುಸ್ರತ್' ಚಿತ್ರದಲ್ಲಿ ನಯನ ಹಾಸ್ಯ ಕಲಾವಿದೆಯಾಗಿ ಅಭಿನಯಿಸುತ್ತಿದ್ದು, ಶಾಂತಲಕ್ಷ್ಮಿ ಎಂಬ ಲಾಯರ್ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.

ರಾಜ್ ಮೊಮ್ಮಗನ ಚಿತ್ರಕ್ಕೆ ಶುಭ ಕೋರಿದ ರಾಜ್ ಪುತ್ರರು

ನಯನಗೆ ಅದೃಷ್ಟ ಖುಲಾಯಿಸಿದೆ

ಈ ಚಿತ್ರ ಮಾತ್ರವಲ್ಲದೇ, ಯಶ್ ಅಭಿನಯದ 'ಕೆ.ಜಿ.ಎಫ್' ಚಿತ್ರದಲ್ಲಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡ ನಿರ್ದೇಶನದ 'ಜಂತರ್ ಮಂಥರ್' ಚಿತ್ರದಲ್ಲೂ ನಯನ ಕಮಾಲ್ ಮಾಡಲಿದ್ದಾರೆ.

ವಿನಯ್ ರಾಜ್ ಕುಮಾರ್ ಗೆ ಜೋಡಿಯಾದ ನ್ಯೂಜಿಲ್ಯಾಂಡ್ ಚೆಲುವೆ ಯಾರದು?

ರವಿಶಂಕರ್ ಎಂಟ್ರಿ

ಕನ್ನಡದ ಖ್ಯಾತ ಖಳನಟ ರವಿಶಂಕರ್ ಕೂಡ ವಿನಯ್ ರಾಜ್ ಕುಮಾರ್ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದು, ವಿಭಿನ್ನ ಪಾತ್ರವನ್ನ ನಿರ್ವಹಿಸಲಿದ್ದಾರೆ.

ಅನಂತು ವರ್ಸಸ್ ನುಸ್ರತ್ ಚಿತ್ರದ ಬಗ್ಗೆ...

ಅಂದ್ಹಾಗೆ, ವಿನಯ್ ರಾಜ್ ಕುಮಾರ್ ಇದೇ ಮೊದಲ ಬಾರಿಗೆ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಾಯಕಿಯಾಗಿ ಲತಾ ಹೆಗಡೆ ಜೋಡಿಯಾಗಿದ್ದಾರೆ. ಈ ಚಿತ್ರವನ್ನ ಸುಧೀರ್‌ ಶಾನುಭೋಗ್ ನಿರ್ದೇಶಿಸುತ್ತಿದ್ದಾರೆ. ಮಾಣಿಕ್ಯ ಪ್ರೊಡಕ್ಷನ್ಸ್‌ನಡಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಸುನಾದ್ ಗೌತಮ್ ಅವರ ಸಂಗೀತ ಚಿತ್ರಕ್ಕಿದೆ.

English summary
Comedy kiladigalu nayana And Ravi shankar enter to Vinay Rajkumar's New Movie Ananthu vs Nusrath.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X