For Quick Alerts
  ALLOW NOTIFICATIONS  
  For Daily Alerts

  ಟೀಸರ್ ಆಯ್ತು, ಈಗ ಟ್ರೈಲರ್ ಟೈಂ: ದಿನೇ ದಿನೇ ಹೆಚ್ಚಾಗ್ತಿದೆ 'ಕಮಾಂಡೊ' ಹವಾ

  By Bharath Kumar
  |

  ತಮಿಳಿನ 'ವಿವೇಗಂ' ಸಿನಿಮಾ ಕನ್ನಡದಲ್ಲಿ 'ಕಮಾಂಡೊ' ಆಗಿ ರಿಲೀಸ್ ಗೆ ಸಿದ್ಧವಾಗಿದೆ. ಕಳೆದ ವಾರವಷ್ಟೇ 'ಕಮಾಂಡೊ' ಚಿತ್ರದ ಟೀಸರ್ ಬಿಡುಗಡೆಯಾಗಿ, ಸಖತ್ ಸೌಂಡ್ ಮಾಡಿತ್ತು.

  ಈಗ ಟ್ರೈಲರ್ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ. ಆಗಸ್ಟ್ 14 ರಂದು ಕಮಾಂಡೊ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ. ಜೊತೆಗೆ ಹಾಡುಗಳನ್ನ ಕೂಡ ರಿಲೀಸ್ ಮಾಡುವ ಸಾಧ್ಯತೆ ಇದೆ.

  'ವಿವೇಗಂ' 2017 ರಲ್ಲಿ ಬಿಡುಗಡೆಯಾಗಿದ್ದ ತಮಿಳಿನ ಹಿಟ್ ಚಿತ್ರವಾಗಿದೆ. ಅಜಿತ್ ಕುಮಾರ್, ವಿವೇಕ್ ಒಬೆರಾಯ್, ಕಾಜಲ್ ಅಗರ್ವಾಲ್, ಅಕ್ಷರಾ ಹಾಸನ್ ಸೇರಿದಂತೆ ದೊಡ್ಡ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಶಿವ ನಿರ್ದೇಶನ ಮಾಡಿದ್ದ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದೆ.

  ಕನ್ನಡದಲ್ಲಿ 'ಕಮಾಂಡೋ' ಆಗಿ ಬರ್ತಿದೆ ತಮಿಳಿನ 'ವಿವೇಗಂ'.!ಕನ್ನಡದಲ್ಲಿ 'ಕಮಾಂಡೋ' ಆಗಿ ಬರ್ತಿದೆ ತಮಿಳಿನ 'ವಿವೇಗಂ'.!

  ಈ ಚಿತ್ರದ ಬಜೆಟ್ ಬರೋಬ್ಬರಿ 80 ಕೋಟಿ ಎನ್ನಲಾಗಿದೆ. ಹೀಗಾಗಿ, ದೊಡ್ಡ ಮೊತ್ತಕ್ಕೆ ಕನ್ನಡದ ಡಬ್ಬಿಂಗ್ ಹಕ್ಕು ಖರೀದಿಯಾಗಿದೆಯಂತೆ. ಆದ್ರೆ, ಎಷ್ಟು ಹಣ ಎಂಬ ಮಾಹಿತಿ ಬಿಟ್ಟುಕೊಟ್ಟಿಲ್ಲ. ಡಬ್ಬಿಂಗ್ ಸಿನಿಮಾ ನೋಡುವವರ ಸಂಖ್ಯೆಯೂ ಹೆಚ್ಚಾಗಿದ್ದು, ಕಲೆಕ್ಷನ್ ಆಗುವ ಭರವಸೆಯಲ್ಲಿದೆ ಚಿತ್ರತಂಡ.

  ಚಿತ್ರದ ಸಂಪೂರ್ಣ ಚಿತ್ರೀಕರಣ ಯುರೋಪಿನಲ್ಲಿ ಮಾಡಲಾಗಿದೆ. ಯುರೇಶಿಯಾ, ಸರ್ಬಿಯಾದಲ್ಲಿ ಮೇಕಿಂಗ್ ಆಗಿದೆ. Tom cruise, ಹಾಗೂ ಬಾಂಡ್ ‌ಸಿನಿಮಾಗಳ ಶೈಲಿಯಲ್ಲಿರುವ ಸ್ಪೈ ಆಕ್ಷನ್ ಥ್ರಿಲ್ಲರ್ ಚಿತ್ರ ಇದಾಗಿದ್ದು, ಮೈನವಿರೇಳಿಸುವ ನಾಲ್ಕು ಫೈಟ್ ಗಳ ಜೊತೆಗೆ ಚೇಸಿಂಗ್ ಸೀನ್, ಇಂಟರ್ ನೆಟ್ ಹ್ಯಾಕಿಂಗ್, virtual hologram ತಂತ್ರಜ್ಞಾನ ‌ಬಳಕೆ ಮಾಡಿರುವುದು ಚಿತ್ರದ ಬಗ್ಗೆ ಥ್ರಿಲ್ ಹೆಚ್ಚಿಸಿದೆ.

  Commando trailer on august 14th

  'ಕಮಾಂಡೋ' ಟೀಸರ್ ಗೆ ಸಿಕ್ಕಿದೆ ಪಾಸಿಟಿವ್ ರೆಸ್ಪಾನ್ಸ್ 'ಕಮಾಂಡೋ' ಟೀಸರ್ ಗೆ ಸಿಕ್ಕಿದೆ ಪಾಸಿಟಿವ್ ರೆಸ್ಪಾನ್ಸ್

  ಅಂದ್ಹಾಗೆ, ಇದು ಅಜಿತ್ ಕುಮಾರ್ ನಟನೆಯ ಮೂರನೇ ಸಿನಿಮಾ ‌ಕನ್ನಡಕ್ಕೆ ಡಬ್ ಆಗ್ತಿದೆ. ಇದಕ್ಕೂ ಮುಂಚೆ 'ಎನ್ನೈ ಅರಿಂದಾಲ್' ಹಾಗೂ 'ಆರಂಭಂ' ಚಿತ್ರಗಳು ಸ್ಯಾಂಡಲ್ ವುಡ್ ನಲ್ಲಿ ತೆರೆಕಂಡಿದ್ದವು. ಇನ್ನುಳಿದಂತೆ 'ಕಮಾಂಡೊ' ಚಿತ್ರಕ್ಕೆ 'ಕೊಲಾವರಿ ಡಿ' ಖ್ಯಾತಿ ಅನಿರುಧ್ ಸಂಗೀತ ಸಂಯೋಜನೆ ನೀಡಿದ್ದು, ಹರಿವು ಕ್ರಿಯೇಷನ್ಸ್ ಸಂಸ್ಥೆ ಕಮಾಂಡೊ ಚಿತ್ರವನ್ನ ಕನ್ನಡಕ್ಕೆ ತಂದಿದ್ದು, ವಿಶಾಲ ಕರ್ನಾಟಕದಲ್ಲಿ ಬಿಡುಗಡೆಯಾಗಲಿದೆ.

  English summary
  Ajith's Tamil movie Vivegam is titled Commando in Kannada. The Siruthai Siva's international spy thriller has bagged 'U/A' certificate. The team is now planning to launch the audio soon and the trailer will be out on august 14th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X