For Quick Alerts
  ALLOW NOTIFICATIONS  
  For Daily Alerts

  ಯೋಗರಾಜ್ ಭಟ್ ಸರ್ ನೀವು ಹಾಕೋ 'ಗುಂಡು' ಯಾವುದು?

  |

  ಯೋಗರಾಜ್ ಭಟ್ ಅವರ ನಿರ್ದೇಶನಕ್ಕಿಂತ ಸಾಹಿತ್ಯಕ್ಕೆ ಹೆಚ್ಚು ಅಭಿಮಾನಿಗಳು ಇದ್ದಾರೆ ಅಂದ್ರೆ ಬಹುಶಃ ಅದು ಸತ್ಯ ಎನ್ನಬಹುದು. ಮಾಸ್ ಸಾಂಗ್, ಐಟಂ ಸಾಂಗ್, ರೋಮ್ಯಾಂಟಿಕ್ ಸಾಂಗ್ ಹೀಗೆ ಹಾಡುಗಳಲ್ಲಿ ಹಲವು ಕ್ಯಾಟಗರಿಗಳಿವೆ. ಇದರಲ್ಲಿ ಯೋಗರಾಜ್ ಭಟ್ ಸಾಂಗ್ ಅಂತಾನೇ ಒಂದು ಸೆಕ್ಷನ್ ಇದೆ ಅನ್ಸುತ್ತೆ.

  ಯಾಕಂದ್ರೆ, ರೆಗ್ಯೂಲರ್ ಶೈಲಿ ಬಿಟ್ಟು ಬೇರೆಯದ್ದೇ ರೀತಿಯ ಸಾಹಿತ್ಯವನ್ನ ಬರೆಯೋದ್ರಲ್ಲಿ ಭಟ್ಟರು ಫೇಮಸ್. ಭಟ್ಟರು ಬರೆಯುವ ರೋಮ್ಯಾಂಟಿಕ್ ಹಾಡು, ಕುಡುಕರ ಹಾಡು, ಐಟಂ ಹಾಡು, ಹೀರೋ ಇಂಟ್ರೊಡಕ್ಷನ್ ಹಾಡು ಎಲ್ಲವೂ ಹೊಸ ಟ್ರೆಂಡ್ ಆಗುತ್ತೆ.

  35 ನಿಮಿಷಕ್ಕೆ 2 ಲಕ್ಷ ಹಿಟ್ಸ್ : ಬಸಣ್ಣಿಗೆ ಬಹುಪರಾಕ್ ಭಕ್ತರು

  ಭಟ್ಟರ ಮೈಂಡ್ ಚೆನ್ನಾಗಿದ್ದರೇ 'ಚೆಂದುಟಿಯ ಪಕ್ಕದಲ್ಲಿ ತುಂಬಾ ಹತ್ತಿರ ನಿಂತು ಗುರಿಯಿಟ್ಟು ಕಾಡಿಗೆಯ ಬಟ್ಟಡ್ಲಾ' ಅಂತಾರೆ. ತಲೆಕೆಟ್ಟರೇ 'ಕೈ ಕಯ ಕಚ್ಚಾಸುಡಾ ಬಸುಡಾ' ಅಂತಾರೆ. ಖುಷಿಯಾದ್ರೆ 'ಬಸಣ್ಣಿ ಬಾ' ಅಂತಾರೆ. ಇದೆಲ್ಲವನ್ನ ಗಮನಿಸಿದ ಅಭಿಮಾನಿಗಳಿಗೆ ಏನ್ ಹೇಳ್ಬೇಕೋ ಗೊತ್ತಾಗದೇ ಏನೇನೋ ಕಾಮೆಂಟ್ ಮಾಡ್ತಾರೆ. ಇದೀಗ, ಯಜಮಾನ ಚಿತ್ರದ ಬಸಣ್ಣಿ ಹಾಡಿಗೆ ಭಟ್ಟರ ಬಗ್ಗೆ ಕೆಲವು ಕಾಮೆಂಟ್ ಬಂದಿದೆ. ಮುಂದೆ ಓದಿ....

  ಭಟ್ ಸರ್ ನಿಮ್ಮ ಗುಂಡು ಯಾವುದು?

  ಭಟ್ ಸರ್ ನಿಮ್ಮ ಗುಂಡು ಯಾವುದು?

  ಭಟ್ಟರ ತಲೆಯಲ್ಲಿ ಎಂತೆಂತ ಪದಗಳೆಲ್ಲಾ ಬರುತ್ತೆ ಎಂಬ ಕುತೂಹಲ ಸಾಮಾನ್ಯ ಜನರದ್ದು. ಈ ಯಪ್ಪಾನಿಗೆ ಈ ಪದಗಳು ಹೆಂಗೆ ಬರುತ್ತೆ. ಅದಕ್ಕೊಬ್ಬ ಈ ರೀತಿ ಕಾಮೆಂಟ್ ಮಾಡಿದ್ದಾನೆ. ''ಭಟ್ ಸರ್ ನೀವು ಹಾಕೋ ಗುಂಡು ಯಾವುದು, ಹೆಂಗೆ ಸರ್ ಈ ಥರ ಪದಗಳು, ನಿಮಗೊಂದು ಸಲಾಂ'' ಎಂದಿದ್ದಾನೆ.

  ದರ್ಶನ್-ಭಟ್ಟರ ಜೋಡಿಯಲ್ಲಿ ಬಂದ ಎಲ್ಲ ಹಾಡುಗಳು ಸೂಪರ್ ಹಿಟ್.!

  ಯೋಗ್ಯತೆ ಬೇಕು

  ಯೋಗ್ಯತೆ ಬೇಕು

  ಮತ್ತೊಬ್ಬ ವ್ಯಕ್ತಿ ಯೋಗ್ಯತೆ ಬಗ್ಗೆಯೇ ಕಾಮೆಂಟ್ ಮಾಡಿದ್ದಾರೆ. ''ಯೋಗರಾಜ್ ಭಟ್ಟರೆ ನಿಮ್ಮ ಹಾಡು ಕೇಳಿ ಲೈಕ್ ಮಾಡಬೇಕು ಅಂದ್ರೆ ನಿಜವಾಗಿ ಯೋಗ (ತೇ) ಇರಬೇಕು'' ಎಂದು ಹೇಳಿದ್ದಾರೆ. ಈ ಮಾತು ಅತಿಯಾಯ್ತು ಅಂದ್ರೂ ಭಟ್ಟರ ಅಭಿಮಾನಿಗಳಿಗೆ ಇದು ಖುಷಿ ಕೊಡುವ ವಿಷ್ಯವೇ.

  ಭಟ್ಟರು ಸಾಬೂನು ಸಹ ಬಿಡವಲ್ರು

  ಭಟ್ಟರು ಸಾಬೂನು ಸಹ ಬಿಡವಲ್ರು

  ಯೋಗರಾಜ್ ಭಟ್ ಅವರ ಬಸಣ್ಣಿಗೆ ಹಾಡು ಕಂಡು ಉತ್ತರ ಕರ್ನಾಟಕ ಜನ ಅಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಅವರದ್ದೇ ಶೈಲಿಯಲ್ಲಿ ಭಟ್ಟರ ಸಾಲುಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲಿ ಒಂದು ಈ ಸಾಲು ''ಭಟ್ಟರು ಸಾಬೂನು ಸಹ ಬಿಡವಲ್ರು, ಲಿರಿಕ್ಸ್ ಸೂಪರ್ ಭಟ್ರೆ.

  'ಯಜಮಾನ'ನ 'ಬಸಣ್ಣಿ' ಪದದ ಅರ್ಥ ಗೊತ್ತಾಯ್ತು.!

  ಬಸಣ್ಣಿ ಹಿಟ್ ನೋ ಡೌಟ್

  ಬಸಣ್ಣಿ ಹಿಟ್ ನೋ ಡೌಟ್

  ಯೋಗರಾಜ್ ಭಟ್ ಮತ್ತು ವಿ ಹರಿಕೃಷ್ಣ ಕಾಂಬಿನೇಶನ್ ನಲ್ಲಿ ಮತ್ತೊಂದು ಉತ್ತರ ಕರ್ನಾಟಕದ "ಗಂಡು ಮೆಚ್ಚುವ ಹಾಡು" ಬಸಣ್ಣಿ ಬಾ ಬಿಡುಗಡೆ ಆಗಿದ. ಯಜಮಾನ ಚಿತ್ರದ ಮೂರನೇ ಹಾಡೂ ಹಿಟ್ಟು.. ನೋ ಡೌಟು.'' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

  ಅಂದು ದರ್ಶನ್ ಚಿತ್ರಕ್ಕೆ ರವಿ ಬೆಂಬಲ, ಇಂದು ರವಿ ಸಿನಿಮಾಗೆ ದಾಸ ಸಾಥ್

  ಭಟ್ಟರೇ ನೀವು ಬೆಂಕಿ

  ಭಟ್ಟರೇ ನೀವು ಬೆಂಕಿ

  ''ಯೋಗರಾಜ ಭಟ್ ನೀವು ಬೆಂಕಿ ಬಬಲಾದಿ ನಿಮ್ ಹಾಡು ಗಿಚ್ಚಗಿಲಿಗಿಲಿ'' ಹೀಗೆಂದು ಯಜಮಾನ ಹಾಡು ಕೇಳಿದ ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದ್ದಾರೆ. ಯಜಮಾನ ಚಿತ್ರದ ಅಧಿಕೃತ ಯೂಟ್ಯೂಬ್ ಚಾನಲ್ ಡಿ ಬೀಟ್ಸ್ ನಲ್ಲಿ ನೋಡುತ್ತಾ ಹೋದ್ರೆ ಇದಕ್ಕಿಂತ ಚಿಕ್ಕದಾದ ಹಾಗೂ ಚೊಕ್ಕದಾದ ಕಾಮೆಂಟ್ ಗಳು ಕಾಣ್ತಿದೆ.

  English summary
  Kannada actor Darshan's 'Yajamana' movie Basanni song out, lyrics by yogaraj bhat. The movie is producing by Shailaja Nag. here is the comments on yajamana lyrics.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X