»   » ಅಭಿಮಾನಿಗಳ ಕದನದ ಕುರಿತು ರಕ್ಷಿತ್ ಶೆಟ್ಟಿ ಮಾಡಿರುವ ಕಾಮೆಂಟ್ ಇದು.!

ಅಭಿಮಾನಿಗಳ ಕದನದ ಕುರಿತು ರಕ್ಷಿತ್ ಶೆಟ್ಟಿ ಮಾಡಿರುವ ಕಾಮೆಂಟ್ ಇದು.!

Posted By:
Subscribe to Filmibeat Kannada

'ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ ಹಾಗೂ 'ರಾಕಿಂಗ್ ಸ್ಟಾರ್' ಯಶ್ ಅಭಿಮಾನಿಗಳ ಮಧ್ಯೆ ಫೇಸ್ ಬುಕ್ ನಲ್ಲಿ ಕಾಮೆಂಟ್ ವಾರ್ ಶುರು ಆಗಿದೆ.

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಸಾಧಕರ ಸೀಟ್ ಮೇಲೆ ಕೂರಲು ರಕ್ಷಿತ್ ಶೆಟ್ಟಿ ಅರ್ಹರಲ್ಲ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುವಾಗಲೇ, ಫೇಸ್ ಬುಕ್ ನಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಯಶ್ ನಡುವೆ ಹೋಲಿಕೆ ಮಾಡಲಾಗಿದೆ. ಇದರಿಂದ ಇಬ್ಬರು ಸ್ಟಾರ್ ನಟರ ಅಭಿಮಾನಿಗಳ ನಡುವೆ ವಾಕ್ಸಮರ ಆರಂಭವಾಗಿದೆ. ['ವೀಕೆಂಡ್ ವಿತ್ ರಮೇಶ್'ನಲ್ಲಿ ರಕ್ಷಿತ್ ಶೆಟ್ಟಿ: ಸಿಡಿಮಿಡಿಗೊಂಡ ವೀಕ್ಷಕರು.!]

ಈ ಬೆಳವಣಿಗೆ ಬಗ್ಗೆ ನಟ ರಕ್ಷಿತ್ ಶೆಟ್ಟಿ ಕಾಮೆಂಟ್ ಮಾಡಿರುವುದು ಹೀಗೆ...

ನಾವೆಲ್ಲರೂ ಒಂದೇ

''ಕಾಮೆಂಟ್ ಗಳನ್ನ ನಾನು ನೋಡಿಲ್ಲ. ನಾವೆಲ್ಲರೂ ಒಂದೇ. ಕನ್ನಡ ಚಿತ್ರರಂಗಕ್ಕಾಗಿ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ. ಪರಭಾಷೆಯ ಜೊತೆಗೆ ನಾವೆಲ್ಲ ಕಂಪೀಟ್ ಮಾಡಬೇಕು. ಹೀಗಿರುವಾಗ ಈ ರೀತಿ ಕಿತ್ತಾಟ ಆಗುವುದು ಬೇಡ'' ಎಂದು 'ವಿಜಯ ಕರ್ನಾಟಕ' ದಿನಪತ್ರಿಕೆಗೆ ನಟ ರಕ್ಷಿತ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.

ನಮ್ಮಲ್ಲಿ ಭೇದಭಾವ ಇಲ್ಲ

''ನಮ್ಮಲ್ಲಿ ಯಾವುದೇ ರೀತಿಯ ಭೇದಭಾವ ಇಲ್ಲ. 'ಕಿರಿಕ್ ಪಾರ್ಟಿ' ಗೆದ್ದಾಗ ಯಶ್ ಸಂತಸಗೊಂಡಿದ್ದರು. ನಾನು ಮತ್ತು ಯಶ್ ಚೆನ್ನಾಗಿ ಇದ್ದೇವೆ. ಅವರ ಮದುವೆಗೆ ನನ್ನನ್ನ ಇನ್ವೈಟ್ ಮಾಡಿದ್ದರು'' - ರಕ್ಷಿತ್ ಶೆಟ್ಟಿ

ಎಲ್ಲರೂ ಎಲ್ಲಾ ನಟರ ಸಿನಿಮಾಗಳನ್ನ ನೋಡಿ

''ಎಲ್ಲರಿಗೂ ಅವರವರ ಫೇವರಿಟ್ ನಟರು ಇರುತ್ತಾರೆ. ಎಲ್ಲರೂ ಎಲ್ಲ ನಟರ ಸಿನಿಮಾಗಳನ್ನ ನೋಡಿ ಪ್ರೋತ್ಸಾಹಿಸಬೇಕು'' ಎಂದು ಕೋರುತ್ತಾರೆ ನಟ ರಕ್ಷಿತ್ ಶೆಟ್ಟಿ

ಕದನಕ್ಕೆ ಕಾರಣವೇನು.?

ರಕ್ಷಿತ್ ಶೆಟ್ಟಿ ಫ್ಯಾನ್ಸ್ ಹಾಗೂ ಯಶ್ ಅಭಿಮಾನಿಗಳ ನಡುವೆ ಫೇಸ್ ಬುಕ್ ನಲ್ಲಿ ನಡೆಯುತ್ತಿರುವ ಘೋರ ಸಮರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ....[ಫೇಸ್ ಬುಕ್ ರಣರಂಗ: ಜೋರಾಯ್ತು ಯಶ್-ರಕ್ಷಿತ್ ಶೆಟ್ಟಿ ಅಭಿಮಾನಿಗಳ ಮುಷ್ಟಿ ಕಾಳಗ.!]

English summary
Kannada Actor Rakshit Shetty reacts over Comments War between his fans and Yash fans in Facebook.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada