»   » ಇದೆಲ್ಲಾ ಮೇಘನಾ ರಾಜ್ ಹೆಸರಿಗೆ ಮಸಿ ಬಳಿಯುವ ಕೆಲಸ?

ಇದೆಲ್ಲಾ ಮೇಘನಾ ರಾಜ್ ಹೆಸರಿಗೆ ಮಸಿ ಬಳಿಯುವ ಕೆಲಸ?

Posted By:
Subscribe to Filmibeat Kannada

ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್ ಮತ್ತು ಮಾಲಿವುಡ್ ನಲ್ಲಿ ಬೇಡಿಕೆ ಕಂಡುಕೊಂಡಿರುವ ನಟಿ ಮೇಘನಾ ರಾಜ್ ಈಗ ವಿವಾದಕ್ಕೆ ಸಿಲುಕಿರುವ ಸಂಗತಿ ನಿಮಗೆ ಗೊತ್ತೇ ಇದೆ.

''ಮೇಘನಾ ರಾಜ್ ನನ್ನ ಮದುವೆ ಆಗಿ ವಂಚಿಸಿದ್ದಾರೆ'' ಎಂದು ತಮಿಳುನಾಡಿನ ಧರ್ಮಪುರಿ ಮೂಲದ ಜನಾರ್ಧನ್ ಎಂಬ ವ್ಯಕ್ತಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಗೆ ಈ-ಮೇಲ್ ಮೂಲಕ ದೂರು ನೀಡಿದ್ದಾರೆ. [ನಟಿ ಮೇಘನಾ ರಾಜ್ ಬಗ್ಗೆ ಕೇಳಿಬಂದಿರುವ ವಂಚನೆ ಆರೋಪ ನಿಜವೇ?]

ಅಸಲಿಗೆ, ಕನ್ನಡ ಚಿತ್ರರಂಗದ ಹಿರಿಯ ನಟ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯಿ ದಂಪತಿಯ ಪುತ್ರಿ ಮೇಘನಾ ರಾಜ್ ಕದ್ದು ಮುಚ್ಚಿ ಮದುವೆ ಆಗುವ ಅವಶ್ಯಕತೆ ಇತ್ತಾ?

ಮಗಳ ಈ ಮದುವೆ ವಿವಾದದ ಬಗ್ಗೆ ನಟಿ ಪ್ರಮೀಳಾ ಜೋಷಾಯಿ ಏನು ಹೇಳ್ತಾರೆ ಅಂತ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

ನಟಿ ಮೇಘನಾ ರಾಜ್ ಬೆಂಗಳೂರಿನಲ್ಲಿಲ್ಲ!

ಮೇಘನಾ ರಾಜ್ ಕುಟುಂಬದ ಮೂಲಗಳು ತಿಳಿಸಿರುವ ಪ್ರಕಾರ, ಸದ್ಯ ನಟಿ ಮೇಘನಾ ರಾಜ್ ಬೆಂಗಳೂರಿನಲ್ಲಿಲ್ಲ. [ಚಿರು ಸರ್ಜಾ-ಮೇಘನಾ ನಡುವೆ ಏನಿದೆ! ಏನಿಲ್ಲ?]

ಪ್ರತಿಕ್ರಿಯೆ ನೀಡದ ಮೇಘನಾ ರಾಜ್

ತಮ್ಮ ವಿರುದ್ಧ ವಂಚನೆ ಆರೋಪ ಕೇಳಿಬಂದಿದ್ದರೂ, ನಟಿ ಮೇಘನಾ ರಾಜ್ ಪ್ರತಿಕ್ರಿಯೆ ನೀಡಲು ತಯಾರಿಲ್ಲ. ಅವರು ಫೋನ್ ಕಾಲ್ ಗಳನ್ನೂ ರಿಸೀವ್ ಮಾಡುತ್ತಿಲ್ಲ. [ಕನ್ನಡದಲ್ಲಿ ಸಿಕ್ಕಾಪಟ್ಟೆ ಬಿಜಿಯಾದ ಕನ್ನಡತಿ ಮೇಘನಾ ರಾಜ್]

ಮೇಘನಾ ರಾಜ್ ತಾಯಿ ಏನಂತಾರೆ?

ಮೇಘನಾ ರಾಜ್ ತಾಯಿ ಪ್ರಮೀಳಾ ಜೋಷಾಯಿ ಹೇಳಿದಿಷ್ಟು - ''ದೂರಿನ ಬಗ್ಗೆ ಚಾನೆಲ್ ಗಳಲ್ಲಿ ಸುದ್ದಿ ಬಂದಾಗಲೇ ಗೊತ್ತಾಗಿದ್ದು. ಈ ಸುದ್ದಿ ಕೇಳಿ ಆಶ್ಚರ್ಯ ಆಯ್ತು'' [ನಟ ಚಿರಂಜೀವಿ ಸರ್ಜಾಗೆ ನಿದಿರೆ ಬರದಿರೆ ಏನಂತೀ?]

ಯಾರು ಅನ್ನೋದೇ ಗೊತ್ತಿಲ್ಲ!

''ದೂರು ನೀಡಿರುವವರು ಯಾರು ಅಂತಲೇ ಗೊತ್ತಿಲ್ಲ. ಅದರ ಬಗ್ಗೆ ತನಿಖೆ ಆಗಬೇಕು'' - ಪ್ರಮೀಳಾ ಜೋಷಾಯಿ [ಬೆಂಗಳೂರು 'ಸಂಪಿಗೆ' ಮೇಘನಾ, ಇದು ನಿಜನಾ?]

ಮಗಳ ಹೆಸರಿಗೆ ಮಸಿ ಬಳಿಯುವ ಪ್ರಯತ್ನ

''ಮಗಳಿಗೆ ಆಗದೇ ಇರೋರು ಯಾರೋ ಹೀಗೆ ಮಾಡಿರಬೇಕು. ಸುಮ್ಮನೆ ಅವಳ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ'' - ಪ್ರಮೀಳಾ ಜೋಷಾಯಿ

ತಂದೆ ಸುಂದರ್ ರಾಜ್ ಏನಂತಾರೆ?

''ಪ್ರಕರಣದ ಬಗ್ಗೆ ಪೊಲೀಸರು ಮತ್ತು ವಕೀಲರ ಜೊತೆ ಚರ್ಚಿಸಿ ಪ್ರತಿಕ್ರಿಯೆ ನೀಡುತ್ತೇನೆ'' ಅಂತ ತಂದೆ ಸುಂದರ್ ರಾಜ್ ಹೇಳುತ್ತಾರೆ.

English summary
Complaint is lodged against Kannada Actress Meghana Raj by Janardhan from Tamil Nadu. Kannada Actress Pramila Joshai, Meghana Raj's mother has reacted to this issue. Read the article to know Pramila Joshai's reaction.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada