twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರ ವಿಮರ್ಶೆ : ಸಿಲ್ಕ್ ಸಖತ್ ಹಾಟ್ ಪ್ರೇಕ್ಷಕರು ಫ್ಲ್ಯಾಟ್

    By Rajendra
    |

    "ಈ ಚಿತ್ರ ಯಾರನ್ನೂ ಉದ್ದೇಶಿಸಿದ್ದಲ್ಲ" ಎಂಬ ಬರಹದೊಂದಿಗೆ 'ಸಿಲ್ಕ್' ಆಟ ಆರಂಭವಾಗುತ್ತದೆ. ಆದರೆ ಆರಂಭದ ಕೆಲವು ದೃಶ್ಯಗಳು ಕ್ಯಾಬರೆ ಬೆಡಗಿ ಸಿಲ್ಕ್ ಸ್ಮಿತಾರನ್ನು ನೆನಪಿಸುತ್ತವೆ. ಕಥೆ ಸಾಗಿದಂತೆ ಆ ಸಿಲ್ಕ್ ಗೂ ಈ ಸಿಲ್ಕ್ ಗೂ ಎತ್ತಣಿಂದ ಎತ್ತ ಸಂಬಂಧವೂ ಇಲ್ಲ ಎಂದು ನಿರ್ದೇಶಕರು ಪ್ರತಿಪಾದಿಸುತ್ತಾರೆ.

    ಇನ್ನೇನು ಕಥೆ ಶುರುವಾಗಬೇಕು "ಉಂಡಾಡಿ ಗುಂಡಮ್ಮ ನಾನು ರಂಗೀನು ರಂಗಮ್ಮ.." ಎಂಬ ವೀಣಾ ಮಲಿಕ್ ಇಂಟ್ರಡಕ್ಷನ್ ಸಾಂಗ್ ಶುರುವಾಗುತ್ತದೆ. ಅಲ್ಲಿಂದ ಕಥೆ ಫ್ಲ್ಯಾಶ್ ಬ್ಯಾಕ್ ಗೆ ಹೊರಳುತ್ತದೆ. ವೀಣಾ ಮಲಿಕ್ ಅಭಿನಯವೂ ಸಹ ಚಳಿ ಬಿಟ್ಟ ಚಂದ್ರಚಕೋರಿ ತರಹವಾಗುತ್ತದೆ.

    ವಿಜಯಲಕ್ಷ್ಮಿ ಎಂಬ ಹಳ್ಳಿಯ ಮುಗ್ಧ ಯುವತಿಯೊಬ್ಬಳು 'ಸಿಲ್ಕ್' ಹೇಗಾಗುತ್ತಾಳೆ ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿ. ಸಿನಿಮಾ ಹೀರೋಯಿನ್ ಮಾಡ್ತೀನಿ ಎಂದು ಕರೆದುಕೊಂಡು ಹೋಗಿ ಆಕೆಯನ್ನು ಡಿಸ್ಕೋಥೆಕ್ ನಲ್ಲಿ ಕುಣಿಯಲು ಬಳಸಿಕೊಳ್ಳುತ್ತಾರೆ.

    Rating:
    3.0/5

    ಚಿತ್ರ: ಸಿಲ್ಕ್ (ಅಡಿಬರಹ ಸಖತ್ ಹಾಟ್)
    ನಿರ್ಮಾಣ: ಅಕ್ಷಯಾ ಪ್ರೊಡಕ್ಷನ್ಸ್ (ಆರ್ ವಿ ವೆಂಕಟಪ್ಪ ನಿರ್ಮಾಪಕ)
    ಕಥೆ, ಚಿತ್ರಕಥೆ, ನಿರ್ದೇಶನ, ಸಾಹಿತ್ಯ: ತ್ರಿಶೂಲ್
    ಛಾಯಾಗ್ರಹಣ: ಜೈ ಆನಂದ್
    ಸಂಗೀತ: ಜೆಸ್ಸಿ ಗಿಫ್ಟ್
    ಸಂಕಲನ: ಎಸ್ ಕೆ ನಾಗೇಂದ್ರ ಅರಸ್
    ಸಾಹಸ ನಿರ್ದೇಶನ: ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್
    ನೃತ್ಯ ಸಂಯೋಜನೆ: ಎ ಹರ್ಷ, ಮದನ್ ಹರಿಣಿ
    ಕಲೆ: ಮೋಹನ್ ಬಿ.ಕೆರೆ
    ಪಾತ್ರವರ್ಗ: ಅಕ್ಷಯ್, ವೀಣಾ ಮಲಿಕ್, ಸನಾ, ಶಶಿ, ಅವಿನಾಶ್, ಶ್ರೀನಿವಾಸಮೂರ್ತಿ, ಅಚ್ಯುತ್ ಕುಮಾರ್, ಸಾಧು ಕೋಕಿಲ, ನಯನಾ ಕೃಷ್ಣ, ಅನಿತಾ ಭಟ್ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.

    ಲೈಂಗಿಕ ಕಾರ್ಯಕರ್ತೆಯಾಗಿ ವೀಣಾ ಮಲಿಕ್

    ಲೈಂಗಿಕ ಕಾರ್ಯಕರ್ತೆಯಾಗಿ ವೀಣಾ ಮಲಿಕ್

    ಆಕೆಯ ಕೂದಲು ರೇಶ್ಮೆಯಷ್ಟೇ ನಯವಾಗಿದ್ದ ಕಾರಣ ಸಿಲ್ಕ್ ಎಂದು ನಾಮಕರಣ ಮಾಡುತ್ತಾಳೆ ವೇಶ್ಯಾವಾಟಿಕೆ ನಡೆಸುವ ಅಮ್ಮಣ್ಣಿ (ಸನಾ). ಈಕೆಯ ನಯವಾದ ಮಾತಿಗೆ ಮರುಳಾಗಿ 'ಸಿಲ್ಕ್' ವೇಶ್ಯಾವಾಟಿಕೆ ಪಾಲಾಗುತ್ತಾಳೆ. ಕಡೆಗೆ ಲೈಂಗಿಕ ಕಾರ್ಯಕರ್ತೆಯಾಗಿ ಆಕೆ ಅಲ್ಲಿ ಕಾಲ ನೂಕುವಂತಾಗುತ್ತದೆ.

    ಈ ಶಿವನ ಕೈಯಲ್ಲಿ ತ್ರಿಶೂಲ ಇರಲ್ಲ ಲಾಂಗ್ ಇರುತ್ತೆ

    ಈ ಶಿವನ ಕೈಯಲ್ಲಿ ತ್ರಿಶೂಲ ಇರಲ್ಲ ಲಾಂಗ್ ಇರುತ್ತೆ

    ಕಥೆ ಹೀಗೆ ಸಾಗಬೇಕಾದರೆ ಸಿಲ್ಕ್ ಗೆ ಒಬ್ಬ ಬಾಯ್ ಫ್ರೆಂಡ್ ಸಿಗ್ತಾನೆ. ಅವನ ಹೆಸರು ಶಿವ (ಅಕ್ಷಯ್). ಆದರೆ ಈ ಶಿವನ ಕೈಯಲ್ಲಿ ತ್ರಿಶೂಲ ಇರಲ್ಲ ಲಾಂಗ್ ಇರುತ್ತದೆ. ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ಲಾಂಗ್ ಹಿಡಿದಿರುತ್ತಾನೆ. ಸಿಲ್ಕ್ ಸಹ ಅಷ್ಟೇ ಪರಿಸ್ಥಿತಿಯ ಕೈಗೊಂಬೆಯಾಗಿರುತ್ತಾಳೆ.

    'ಸಿಲ್ಕ್' ಗೆ ಹೊಸ ಬಾಳು ಕೊಡುವ ಶಿವ

    'ಸಿಲ್ಕ್' ಗೆ ಹೊಸ ಬಾಳು ಕೊಡುವ ಶಿವ

    ಇಬ್ಬರೂ ಒಂದಷ್ಟು ಡ್ಯುಯೆಟ್, ಕಣ್ಣಾಮುಚ್ಚಾಲೆ, ಜೂಟಾಟ ಹಾಡುತ್ತಾರೆ. ಕಡೆಗೆ 'ಸಿಲ್ಕ್' ರಹಸ್ಯ ಬಯಲಾಗುತ್ತದೆ. ಆದರೂ ಆಕೆಯ ಕೈಹಿಡಿದು ಹೊಸ ಬಾಳು ಕೊಡುತ್ತಾನೆ ಶಿವ. ಅಲ್ಲಿಂದ ಕಥೆ ಇನ್ನೊಂದು ತಿರುವು ಪಡೆದುಕೊಳ್ಳುತ್ತದೆ.

    ರೌಡಿಗಳ ಮಚ್ಚಿಗೆ ಶಿವ ಬಲಿಯಾಗುತ್ತಾನೆ

    ರೌಡಿಗಳ ಮಚ್ಚಿಗೆ ಶಿವ ಬಲಿಯಾಗುತ್ತಾನೆ

    ವೇಶ್ಯಾಜಾಲದಿಂದ ಹೊರಬೀಳುವ ಸಿಲ್ಕ್ ಹೊಸ ಜೀವನ ಆರಂಭವಾಗುತ್ತದೆ. ಇತ್ತ ಶಿವ ಸಹ ಲಾಂಗ್ ಬಿಟ್ಟಿರುತ್ತಾನೆ. ಕಡೆಗೆ ಶಿವನ ಹತ್ಯೆಯಲ್ಲಿ ಕಥೆ ಇನ್ನೊಂದು ತಿರುವು ಪಡೆದುಕೊಳ್ಳುತ್ತದೆ. ಅಲ್ಲಿಂದ 'ಸಿಲ್ಕ್' ಕಥೆ ಏನಾಗುತ್ತದೆ ಎಂಬುದನ್ನು ಸಾಧ್ಯವಾದರೆ ತೆರೆಯ ಮೇಲೆ ನೋಡಿ ಆನಂದಿಸಿ.

    ಬಿಗಿ ನಿರೂಪಣೆ ಇಲ್ಲದೆ ಸೂತ್ರ ಹರಿದ ಗಾಳಿಪಟ

    ಬಿಗಿ ನಿರೂಪಣೆ ಇಲ್ಲದೆ ಸೂತ್ರ ಹರಿದ ಗಾಳಿಪಟ

    ಒಳ್ಳೆಯ ಸಬ್ಜೆಕ್ಟನ್ನು ತ್ರಿಶೂಲ್ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಅವರು ನಿರೂಪಣೆಯಲ್ಲಿ ಎಡವಿದ್ದಾರೆ. ಬಿಗಿ ನಿರೂಪಣೆ ಇಲ್ಲದ ಕಾರಣ ಚಿತ್ರ ಸೂತ್ರ ಹರಿದ ಗಾಳಿಪಟವಂತಾಗಿದೆ. ಹಾಡುಗಳಿಗೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ಕಥೆಯ ನಿರೂಪಣೆ ಕಡೆ ನಿರ್ದೇಶಕರು ಗಮನಹರಿಸಿಲ್ಲದಿರುವುದು ದೊಡ್ಡ ಲೋಪದೋಷ.

    ತೆರೆಯ ತುಂಬೆಲ್ಲಾ ತುಳುಕಾಡುವ ವೀಣಾ ಮಲಿಕ್

    ತೆರೆಯ ತುಂಬೆಲ್ಲಾ ತುಳುಕಾಡುವ ವೀಣಾ ಮಲಿಕ್

    ಇನ್ನು ತೆರೆಯ ತುಂಬೆಲ್ಲಾ ವೀಣಾ ಮಲಿಕ್ ಅವರೇ ಕಾಣುತ್ತಾರೆ. ಅವರ ದೇಹಸಿರಿ ಪ್ರದರ್ಶನಕ್ಕೇ ಬಹುತೇಕ ಸನ್ನಿವೇಶಗಳು ಮೀಸಲಾಗಿವೆ. ಇನ್ನು ವೀಣಾ ಮಲಿಕ್ ಗ್ಲಾಮರ್ ಮುಂದೆ ಅಭಿನಯ ಕಾಲು ಮುದುಡಿ ಶಿರಸಾಷ್ಟಾಂಗ ನಮಸ್ಕಾರ ಹಾಕಿದೆ.

    ವೀಣಾ ಬಿಚ್ಚಾಟದ ಮುಂದೆ ಅಕ್ಷಯ್ ಆಟ ಡಲ್

    ವೀಣಾ ಬಿಚ್ಚಾಟದ ಮುಂದೆ ಅಕ್ಷಯ್ ಆಟ ಡಲ್

    ವೀಣಾ ಮಲಿಕ್ ಬಿಚ್ಚಾಟದ ಮುಂದೆ ನಟ ಅಕ್ಷಯ್ ಅವರ ಆಟ ನಡೆದಿಲ್ಲ. ಅಭಿನಯದಲ್ಲಿ, ಡೈಲಾಗ್ ಡೆಲಿವರಿಯಲ್ಲಿ ಅವರು ಸಾಕಷ್ಟು ಸುಧಾರಿಸಬೇಕಿದೆ. ಚಿತ್ರದಲ್ಲಿ ನಾಯಕ ನಟ ಇದ್ದರೂ ತೆರೆಯ ತುಂಬೆಲ್ಲಾ ಗುಂಡುಹಾಕದೇನೆ ಕಿಕ್ ಕೊಟ್ಟು, ಸೊಂಟದಲ್ಲೇ ಸುನಾಮಿ ನಿಲ್ಲಿಸುವ ಸಿಲ್ಕ್ ತುಂಬಿ ತುಳುಕಾಡುತ್ತಾರೆ.

    ಸಾಧುಕೋಕಿಲಾ, ನಯನಕೃಷ್ಣಾ ಕಾಮಿಡಿ ಜೋಡಿ

    ಸಾಧುಕೋಕಿಲಾ, ನಯನಕೃಷ್ಣಾ ಕಾಮಿಡಿ ಜೋಡಿ

    ಸಾಧುಕೋಕಿಲ ಹಾಗೂ ನಯನಾಕೃಷ್ಣ ಜೋಡಿಯನ್ನು ಇನ್ನಷ್ಟು ಪರಿಣಾಮಕಾರಿ ಬಳಸಿಕೊಳ್ಳಬಹುದಿತ್ತು. ಅವಿನಾಶ್, ಶ್ರೀನಿವಾಸಮೂರ್ತಿ, ಅಚ್ಯುತ್ ಕುಮಾರ್ ಪೋಷಕ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ವೇಶ್ಯಾವಾಟಿಕೆ ನಡೆಸುವ ಅಮ್ಮಣ್ಣಿಯಾಗಿ ಸನಾ ಅವರ ಪಾತ್ರ ಗಮನಸೆಳೆಯುತ್ತದೆ.

    ಚಿತ್ರದಲ್ಲಿ ಹಾಡುಗಳ ಮೇಕಿಂಗ್ ಸೂಪರ್

    ಚಿತ್ರದಲ್ಲಿ ಹಾಡುಗಳ ಮೇಕಿಂಗ್ ಸೂಪರ್

    ಚಿತ್ರದಲ್ಲಿ ಹಾಡುಗಳ ಮೇಕಿಂಗ್ ಸೂಪರ್. ಚಿತ್ರದ ಪ್ಲಸ್ ಪಾಯಿಂಟ್ ಗಳಲ್ಲಿ ಇದೂ ಒಂದು. ಇನ್ನೊಂದು ವೀಣಾ ಮಲಿಕ್ ಟೂ ಪೀಸ್ ದೃಶ್ಯಗಳು. ಪುನಃ ಪುನಃ...ಮತ್ತಿನ ಕಣ್ಣಲ್ಲೆ ಸುಡುವೆ ಹಾಡುಗಳ ಮೇಕಿಂಗ್ ಚೆನ್ನಾಗಿದೆ. ಜೆಸ್ಸಿ ಗಿಫ್ಟ್ ಸಂಗೀತವೂ ಪುನಃ ಪುನಃ ನೆನಪಾಗುತ್ತದೆ.

    'ಸಿಲ್ಕ್' ದೇಹಸಿರಿ ಅದ್ಭುತವಾಗಿ ಕ್ಯಾಮೆರಾದಲ್ಲಿ ಸೆರೆ

    'ಸಿಲ್ಕ್' ದೇಹಸಿರಿ ಅದ್ಭುತವಾಗಿ ಕ್ಯಾಮೆರಾದಲ್ಲಿ ಸೆರೆ

    ಇನ್ನು ಜೈ ಆನಂದ್ ಅವರ ಛಾಯಾಗ್ರಹಣದಲ್ಲಿ ಹೊಸತನವಿಲ್ಲದಿದ್ದರೂ 'ಸಿಲ್ಕ್' ದೇಹಸಿರಿಯನ್ನು ಅದ್ಭುತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ನಾಗೇಂದ್ರ ಅರಸ್ ಅವರ ಸಂಕಲನ ಇನ್ನಷ್ಟು ಪರಿಣಾಮಕಾರಿಯಾಗಿ ಇರಬೇಕಾಗಿತ್ತು.

    ಲೈಂಗಿಕ ಕಾರ್ಯಕರ್ತೆಯೊಬ್ಬಳ ಕಣ್ಣೀರ ಕಥೆ

    ಲೈಂಗಿಕ ಕಾರ್ಯಕರ್ತೆಯೊಬ್ಬಳ ಕಣ್ಣೀರ ಕಥೆ

    ಲೈಂಗಿಕ ಕಾರ್ಯಕರ್ತೆಯೊಬ್ಬಳ ಕಣ್ಣೀರ ಕಥೆಯನ್ನು ಹೇಳುವಲ್ಲಿ ತ್ರಿಶೂಲ್ ಅವರು ಸಾಕಷ್ಟು ಶ್ರಮಿಸಿದ್ದರೂ ಅದನ್ನು ಪರಿಣಾಮಕಾರಿಯಾಗಿ ಹೇಳುವಲ್ಲಿ ಎಡವಿದ್ದಾರೆ. ಜೊತೆಗೆ ವಿರೋಧಾಭಾಸವನ್ನೂ ಮೂಡಿಸಿದ್ದಾರೆ. 'ಸಿಲ್ಕ್' ಸಖತ್ ಹಾಟ್ ಟೈಟಲ್ ಗೂ ಕೊನೆಗೆ ಅವರು ಕೊಡುವ ಸಂದೇಶಕ್ಕೂ ಹೊಂದಾಣಿಕೆ ಆಗದೆ ಗೊಂದಲ ಮೂಡುತ್ತದೆ.

    ಕೊನೆಯಲ್ಲಿ ಪ್ರೇಕ್ಷಕರ ಕಣ್ಣು ತೆರೆಸುವ ನಿರ್ದೇಶಕರು

    ಕೊನೆಯಲ್ಲಿ ಪ್ರೇಕ್ಷಕರ ಕಣ್ಣು ತೆರೆಸುವ ನಿರ್ದೇಶಕರು

    ಸಂಭಾಷಣೆಯಲ್ಲಿ ಕಿಕ್ ಇಲ್ಲದಿದ್ದರೂ ನೋಟದಲ್ಲೇ ವೀಣಾ ಕಿಕ್ ಕೊಡುತ್ತಾರೆ. ಕೊನೆಗೆ ಮಗುವಿನ ಚಿಕಿತ್ಸೆಗಾಗಿ ಪರದಾಡುವ 'ಸಿಲ್ಕ್' ತನ್ನ ಮಗುವನ್ನು ಉಳಿಸಿಕೊಳ್ಳಲು ಅದೇ ಹಳೆ ದಾರಿ ಹಿಡಿಯುತ್ತಾಳೆ. ಇಷ್ಟೆಲ್ಲಾ ಕಥೆ ಹೇಳುವ ನಿರ್ದೇಶಕರು ಕೊನೆಯಲ್ಲಿ ಪ್ರೇಕ್ಷಕರ ಕಣ್ಣು ತೆರೆಸುತ್ತಾರೆ. "ಭಾರತ ಮಾತೆಯ ದೌರ್ಭಾಗ್ಯದ ಹೆಣ್ಣುಮಕ್ಕಳ ಕಣ್ಣೀರ ಕಥೆಗೆ ಕೊನೆ ಎಂದು?" ಎಂಬ ಪ್ರಶ್ನೆಯನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಆದರೆ ಅವರ ಸಂದೇಶ ವೀಣಾ ಹಾಟ್ ಸೀನ್ ಗಳ ಹೋಳೆಯಲ್ಲಿ ಕೊಚ್ಚಿಕೊಂಡು ಹೋಗಿದೆ.

    English summary
    Bollywood actress Veena Malik debut Kananda film 'Silk Sakkat Hot' review. Veena Malik steals the show left, right and center as Silk. The film written and directed by Trishul and produced by R V Venkatappa. The supporting cast consists of Akshay, Sana and Srinivasa Murthy.
    Monday, August 5, 2013, 13:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X