»   » ಯೋಗರಾಜ್ ಭಟ್ ಮತ್ತು ದುನಿಯಾ ವಿಜಿ ವಿರುದ್ಧ ಕೇಸ್ ದಾಖಲು

ಯೋಗರಾಜ್ ಭಟ್ ಮತ್ತು ದುನಿಯಾ ವಿಜಿ ವಿರುದ್ಧ ಕೇಸ್ ದಾಖಲು

Posted By:
Subscribe to Filmibeat Kannada

ದ್ವಿತೀಯ ಪಿಯುಸಿ ರಸಾಯನ ವಿಜ್ಞಾನ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಟಾಂಗ್ ಕೊಡುವ ರೀತಿಯಲ್ಲಿ ರಚಿಸಲಾದ ಹಾಡಿನ ವಿರುದ್ಧ ಇದೀಗ ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಮತ್ತು ನಟ ದುನಿಯಾ ವಿಜಯ್ ಮೇಲೆ ತೀರ್ಥಹಳ್ಳಿ ಪೊಲೀಸ್‌ ಠಾಣೆಗೆ ಸೋಮವಾರ (ಏಪ್ರಿಲ್ 4) ದೂರು ನೀಡಲಾಗಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತಂತೆ ನಿರ್ದೇಶಕ ಯೋಗರಾಜ್ ಭಟ್ ಅವರು ಹಾಡನ್ನು ರಚನೆ ಮಾಡಿದ್ದು, ನಟ ದುನಿಯಾ ವಿಜಯ್ ಅವರು ಹಾಡಿದ್ದರು. ಹಾಡಿನಲ್ಲಿ ಯೋಗರಾಜ್ ಭಟ್ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರ ಹೆಸರನ್ನು ಪರೋಕ್ಷವಾಗಿ ಬಳಸಿಕೊಂಡು ಅವರ ಕುರಿತು ಅವಹೇಳನಕಾರಿಯಾಗಿ ನಿಂದಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.[ತಾನು ಸತ್ತರೂ ಅಭಿಮಾನಿಗಳನ್ನು ಬಿಡಲಾರೆ ಎಂದ ದುನಿಯಾ ವಿಜಿ]

Complaint filed against Actor Duniya Vijay and Director Yogaraj Bhat

ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತಂತೆ ಹಾಡನ್ನು ರಚಿಸಲಾಗಿದ್ದು, ಸಚಿವ ಕಿಮ್ಮನೆ ರತ್ನಾಕರ ಅವರ ಕುರಿತು ಅವಹೇಳನ ಮಾಡಿರುವ ಉಲ್ಲೇಖ ಹಾಡಿನಲ್ಲಿದೆ. ಹೀಗಾಗಿ ಯೋಗರಾಜ ಭಟ್‌, ದುನಿಯಾ ವಿಜಯ್‌ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಧರಣೇಶ್, ಹರ್ಷೇಂದ್ರ ಕುಮಾರ್‌, ನಾಗೇಶ್‌ ಹಾಗೂ ಮಂಜುನಾಥ ಶೆಟ್ಟಿ ಎಂಬುವವರು ದೂರು ಸಲ್ಲಿಸಿದ್ದಾರೆ.[ಯೋಗರಾಜ್ ಭಟ್ರಿಗೆ ಮತ್ತೆ ಲವ್ ಆಯ್ತಂತೆ..!]

Complaint filed against Actor Duniya Vijay and Director Yogaraj Bhat

ಟಿವಿ ಚಾನೆಲ್‌ ಒಂದರಲ್ಲಿ ಪ್ರಸಾರವಾದ ಹಾಡಿನಲ್ಲಿ ಅವಹೇಳನಕಾರಿ ಅಂಶವಿದೆ ಎಂಬ ಹಿನ್ನೆಲೆಯಲ್ಲಿ ನೀಡಿದ ದೂರಿನ ಮೇಲೆ ಮೊಕದ್ದಮೆ ದಾಖಲು ಮಾಡಿಲ್ಲ. ಮೇಲಧಿಕಾರಿಗಳ ಸೂಚನೆಯ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಿ ಎಸ್‌ಐ ಭರತ್‌ ಕುಮಾರ್‌ ತಿಳಿಸಿದ್ದಾರೆ.

Complaint filed against Actor Duniya Vijay and Director Yogaraj Bhat

ನಿರ್ದೇಶಕ ಯೋಗರಾಜ್ ಭಟ್ಟರು 'ಪಿಸಿಎಂಬಿ ತೀಟೆ ಹಾಡು ಕೇಳ್ರಪ್ಪಾ' ಎಂದು ತಮ್ಮ ಹಾಡಿನಲ್ಲಿ ಬರೆದಿದ್ದರು. ಇದರಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳ ಮನಸ್ಥಿತಿಯನ್ನು ಬಿಂಬಿಸಲಾಗಿತ್ತು.

English summary
Complaint filed against Kannada Actor Duniya Vijay and Kannada Director Yogaraj Bhat on song against PUC Chemistry leakage issue.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada