»   » ಕೋಟಿ ರೂಪಾಯಿ ಪಂಗನಾಮ ಹಾಕಿದ ಪೂಜಾಗಾಂಧಿ!?

ಕೋಟಿ ರೂಪಾಯಿ ಪಂಗನಾಮ ಹಾಕಿದ ಪೂಜಾಗಾಂಧಿ!?

Posted By:
Subscribe to Filmibeat Kannada

ನಟಿ ಪೂಜಾ ಗಾಂಧಿ ಸುದ್ದಿ ಮಾಡಿದ್ದಾರೆ. ಅದು ಮತ್ತೆ ಬೇಡದ ಕಾರಣಕ್ಕೆ. ಮಾಡುವ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳಿಂದಲೇ ಸದ್ದು ಮಾಡುತ್ತಿರುವ ಗಾಂಧಿನಗರದ ಈ ಮಳೆ ಹುಡುಗಿ ಮೇಲೆ ಸ್ಯಾಂಡಲ್ ವುಡ್ ನಲ್ಲಿ ಹೊಸ ಅಪವಾದ ಕೇಳಿಬಂದಿದೆ.

ನಿರ್ಮಾಪಕ, ನಟ ಕಮ್ ಫೈನಾನ್ಶಿಯರ್ ಒಬ್ಬರಿಂದ ಕೋಟಿ ರೂಪಾಯಿ ಹಣ ಪಡೆದು ಈಗ ಅದನ್ನ ವಾಪಸ್ಸು ಮಾಡದೆ ಪೂಜಾ ಗಾಂಧಿ ಪಂಗನಾಮ ಹಾಕಿದ್ದಾರಂತೆ. ಪೂಜಾ ಗಾಂಧಿ ಕೈಲಿ ಎರಡು ವೈಟು ಒಂದು ರೆಡ್ಡು ಹಾಕಿಸಿಕೊಂಡಿರುವ ಆ ಫೈನಾನ್ಶಿಯರ್ ಈಗ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದಾರೆ. [ನಟಿ ಪೂಜಾ ಗಾಂಧಿ ನಸೀಬು ನೆಟ್ಟಗಿಲ್ಲ ಕಣ್ರೀ..]


ಪೂಜಾ ಗಾಂಧಿಯ ಈ ಹೊಸ ಪಂಗನಾಮ ಪುರಾಣವನ್ನ ಎಳೆಎಳೆಯಾಗಿ ಬಿಚ್ಚಿಡುತ್ತೇವೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....


ಬರೋಬ್ಬರಿ ಒಂದು ಕೋಟಿ ರೂಪಾಯಿ ಸಾಲ!

ನಟಿ ಪೂಜಾ ಗಾಂಧಿ ಕಷ್ಟದಲ್ಲಿದ್ದರು. ಖುದ್ದು ಪೂಜಾ ಗಾಂಧಿ ನಿರ್ಮಾಣ ಮಾಡುತ್ತಿದ್ದ 'ಅಭಿನೇತ್ರಿ' ಸಿನಿಮಾ ಅರ್ಧಕ್ಕೆ ನಿಂತಿತ್ತು. ಚಿತ್ರವನ್ನ ಪೂರ್ಣಗೊಳಿಸುವುದಕ್ಕೆ ಪೂಜಾ ಕೈಯಲ್ಲಿ ಹಣ ಇರ್ಲಿಲ್ಲ. ಆಗ ಪೂಜಾ ಗಾಂಧಿ ಒಂದು ಕೋಟಿ ರೂಪಾಯಿ ಸಾಲ ಪಡೆದರಂತೆ.


ಸಾಲ ಕೊಟ್ಟವರು ಯಾರು?

ಪೂಜಾ ಗಾಂಧಿಗೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಸಾಲ ಕೊಟ್ಟವರು ಗಾಂಧಿನಗರದ ಪ್ರಸಿದ್ಧ ನಿರ್ಮಾಪಕ, ನಟ ಕಮ್ ಫೈನಾನ್ಶಿಯರ್ ಸುರೇಶ್ ಶರ್ಮ.


'ತಿಪ್ಪಜ್ಜಿ ಸರ್ಕಲ್'ನಲ್ಲಿ ಒಂದಾಗಿದ್ದ ಪೂಜಾ-ಸುರೇಶ್ ಶರ್ಮಾ

ಅದು ನಟಿ ಪೂಜಾ ಗಾಂಧಿ ಅಭಿನಯದ 'ತಿಪ್ಪಜ್ಜಿ ಸರ್ಕಲ್' ಶೂಟಿಂಗ್ ಸಂದರ್ಭ. 'ಅಭಿನೇತ್ರಿ' ಚಿತ್ರದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಪೂಜಾ ಗಾಂಧಿ, ಇತ್ತ 'ತಿಪ್ಪಜ್ಜಿ ಸರ್ಕಲ್' ಶೂಟಿಂಗ್ ಗೆ ಗೈರು ಹಾಜರಾಗುತ್ತಿದ್ದರು. ಇದೇ 'ತಿಪ್ಪಜ್ಜಿ ಸರ್ಕಲ್' ಚಿತ್ರದಲ್ಲಿ ಪೂಜಾ ಗಾಂಧಿ ಜೊತೆ ನಟಿಸಿದವರು ಸುರೇಶ್ ಶರ್ಮಾ. ಈ ಚಿತ್ರದಿಂದ ಇಬ್ಬರಿಗೂ ಪರಿಚಯವಾಗಿತ್ತು.


ಪೂಜಾ ಕಣ್ಣೀರು ಹಾಕಿದು, ಶರ್ಮಾ ಕರಗಿಹೋದ್ರು..!

'ತಿಪ್ಪಜಿ ಸರ್ಕಲ್' ಶೂಟಿಂಗ್ ಗ್ಯಾಪ್ ಆಗುತ್ತಿರುವುದಕ್ಕೆ ಕಾರಣ ಏನು ಅಂತ ಪೂಜಾ ಗಾಂಧಿ ಬಳಿ ಸುರೇಶ್ ಶರ್ಮಾ ಒಮ್ಮೆ ಕೇಳಿದ್ರಂತೆ. ಆಗ, ನಟಿ ಪೂಜಾ 'ದುಡ್ಡು ಇಲ್ಲ' ಗೊಳೋ ಅಂತ ಅತ್ತುಬಿಟ್ಟರಂತೆ. ಪೂಜಾ ಗಾಂಧಿ ಕಲಾವಿದೆ. ಆಕೆಗೆ ಸಹಾಯ ಮಾಡಬೇಕು ಅಂತ ಬರೋಬ್ಬರಿ ಒಂದು ಕೋಟಿ ರೂಪಾಯಿ ಕೊಟ್ಟುಬಿಟ್ಟರಂತೆ ಸುರೇಶ್ ಶರ್ಮಾ.


ನಿರ್ದೇಶಕ ಸತೀಶ್ ಪ್ರಧಾನ್ ಕಾಲಿಗೆ ಬಿದ್ದಿದ್ರಂತೆ.!

''ಅಭಿನೇತ್ರಿ' ಸಿನಿಮಾ ನಿಂತುಹೋಗಿದೆ. ದಯವಿಟ್ಟು ಸಹಾಯ ಮಾಡಿ ಸಾರ್ ಅಂತ ಸುರೇಶ್ ಶರ್ಮಾ ಅವರ ಕಾಲಿಗೆ 'ಅಭಿನೇತ್ರಿ' ನಿರ್ದೇಶಕ ಸತೀಶ್ ಪ್ರಧಾನ್ ಬಿದ್ದಿದ್ದರಂತೆ.


ಬಡ್ಡಿ ಇಲ್ಲದೇ ಒಂದು ಕೋಟಿ ಸಾಲ.!

ಇಂತಹ ಚಾನ್ಸ್ ಯಾರಿಗೆ ಸಿಗುತ್ತೆ ಹೇಳಿ.? ಹಿಂದು ಮುಂದು ನೋಡದೆ, ಬರೀ ಪೂಜಾಗಾಂಧಿ ಮುಖವನ್ನ ನೋಡಿ ಸುರೇಶ್ ಶರ್ಮಾ ಒಂದು ಕೋಟಿ ರೂಪಾಯಿ ಸಾಲ ಕೊಟ್ಟಿದ್ದಾರೆ. ಅದು ಒಂದು ರೂಪಾಯಿ ಕೂಡ ಬಡ್ಡಿ ರೂಪದಲ್ಲಿ ಪಡೆಯದೇ.! 100 ರೂಪಾಯಿ ಬಾಂಡ್ ಮೇಲೆ ಸಾಲ ಪಡೆದಿರುವುದಕ್ಕೆ ಸಾಕ್ಷಿ ಬರೆಸಿಕೊಂಡು 0% ಇಂಟ್ರೆಸ್ಟ್ ನಿಂದ ಸುರೇಶ್ ಶರ್ಮಾ, ನಟಿ ಪೂಜಾ ಗಾಂಧಿಗೆ ಸಾಲ ಕೊಟ್ಟಿದ್ದರು. ಹಾಗಂತ ಖಾಸಗಿ ವಾಹಿನಿಗಳಿಗೆ ಸುರೇಶ್ ಶರ್ಮಾ ಹೇಳಿಕೆ ನೀಡಿದ್ದಾರೆ.


ಪೂಜಾ ಗಾಂಧಿ ಪ್ರಾಮಿಸ್.!

'ಅಭಿನೇತ್ರಿ' ಸಿನಿಮಾ ರಿಲೀಸ್ ಆಗ್ತಿದ್ದ ಹಾಗೆ, ಖಂಡಿತ ದುಡ್ಡು ವಾಪಸ್ ಕೊಡುತ್ತೇನೆ ಅಂತ ಸುರೇಶ್ ಶರ್ಮಾ ಅವರಿಗೆ ಪೂಜಾ ಗಾಂಧಿ ಮಾತುಕೊಟ್ಟಿದ್ದರು. ಆದ್ರೆ, ಸಿನಿಮಾ ರಿಲೀಸ್ ಆಗಿ ತಿಂಗಳುಗಳೇ ಕಳೆದರೂ, ಈವರೆಗೂ ಒಂದು ಕೋಟಿ ರೂಪಾಯಿ ಹಿಂದಿರುಗಿಸಿಲ್ಲ.


ಒಂದು ವರ್ಷದ ಹಿಂದೆ ಸಾಲ

ಪೂಜಾ ಗಾಂಧಿ ಹೀಗೆ ಸಾಲ ಪಡೆದದ್ದು ಒಂದು ವರ್ಷದ ಹಿಂದೆ. ಇಲ್ಲಿವರೆಗೂ ಅಸಲು ಇಲ್ಲದೇ ಬಡ್ಡಿ ಕೂಡ ಇಲ್ಲದೆ ಸುರೇಶ್ ಶರ್ಮಾ ಪೇಚಾಡುತ್ತಿದ್ದಾರೆ.


ಸಾಲ ಪಡೆದದ್ದಕ್ಕೆ ಸಾಕ್ಷಿ ಏನು?

ಸುರೇಶ್ ಶರ್ಮಾ ಮತ್ತು ನಟಿ ಪೂಜಾ ಗಾಂಧಿ ಅವರ ನಡುವಿನ ಈ ವ್ಯವಹಾರಕ್ಕೆ ಸುರೇಶ್ ಶರ್ಮಾ ಸಹಾಯಕ ನಿರ್ಮಲ್ ಮತ್ತು 'ತಿಪ್ಪಜ್ಜಿ ಸರ್ಕಲ್' ನಿರ್ಮಾಪಕ ಸಿದ್ದರಾಮಯ್ಯ ಪ್ರತ್ಯಕ್ಷ ಸಾಕ್ಷಿ. ಅಸಲಿಗೆ, 'ತಿಪ್ಪಜ್ಜಿ ಸರ್ಕಲ್' ಚಿತ್ರದ ನಿರ್ಮಾಪಕರಿಗೂ ಫೈನಾನ್ಸ್ ಮಾಡಿದ್ದು ಇದೇ ಸುರೇಶ್ ಶರ್ಮಾ. [ಪೂಜಾಗಾಂಧಿ ಹಿಂದಿರುವ ಸ್ಪೆಷಲ್ ಫ್ರೆಂಡ್ ಯಾರು?]


ವಾಣಿಜ್ಯ ಮಂಡಳಿಯಲ್ಲಿ ದೂರು.!

ಕೋಟಿ ರೂಪಾಯಿ ಸಾಲ ಪಡೆದು ಈವರೆಗೂ ಹಿಂದಿರುಗಿಸದ ಪೂಜಾ ಗಾಂಧಿ ಮೇಲೆ ಸುರೇಶ್ ಶರ್ಮಾ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಫೆಬ್ರವರಿ ತಿಂಗಳಲ್ಲೇ ದೂರು ನೀಡಿದ್ದರೂ, 'ಫಿಲ್ಮ್ ಚೇಂಬರ್' ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.


ಕೋರ್ಟ್ ಮೆಟ್ಟಿಲೇರ್ತಾರಂತೆ ಸುರೇಶ್ ಶರ್ಮಾ!

'ಅಭಿನೇತ್ರಿ' ಚಿತ್ರ ಬಿಡುಗಡೆ ಆದ ನಂತ್ರ ಸ್ಯಾಟೆಲೈಟ್ ರೈಟ್ಸ್ ಮಾರಿಬಂದ ಹಣದಲ್ಲಿ, ಪಡೆದಿರುವ ಹಣವನ್ನ ಹಿಂದಿರುಗಿಸುತ್ತೇನೆ ಅಂತ ಪೂಜಾ ಗಾಂಧಿ ಹೇಳಿದ್ದರು. ಆದ್ರೆ, ಸಿನಿಮಾ ರಿಲೀಸ್ ಆಗಿ ಪೂಜಾ ಗಾಂಧಿ ಈಗ ಇನ್ನೊಂದು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಹೀಗಿದ್ದರೂ, ಒಂದು ಕೋಟಿ ರೂಪಾಯಿ ವಾಪಸ್ಸು ನೀಡಿಲ್ಲ. ವಾಣಿಜ್ಯ ಮಂಡಳಿ ಯಾವುದೇ ಕ್ರಮ ಕೈಗೊಳ್ಳದ ಪಕ್ಷದಲ್ಲಿ ಕೋರ್ಟ್ ಮೆಟ್ಟಿಲೇರುತ್ತೇನೆ ಅಂತ ಸುರೇಶ್ ಶರ್ಮಾ ತಿಳಿಸಿದ್ದಾರೆ. [ಮೂರು ಚಿತ್ರ ನಿರ್ಮಿಸಲಿದ್ದಾರೆ ಪೂಜಾ ಗಾಂಧಿ!]


English summary
Kannada Actress Pooja Gandhi is in news again. Producer, Actor cum Financier Suresh Sharma has filed a complaint against Actress Pooja Gandhi in KFCC for not returning 1 Crore rupees loan.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada