For Quick Alerts
  ALLOW NOTIFICATIONS  
  For Daily Alerts

  ಗಾದೆ : "ದಡ್ಡರು ಮನೆ ಕಟ್ತಾರೆ, ಬುದ್ಧಿವಂತರು ಅಲ್ಲಿ ವಾಸಿಸುತ್ತಾರೆ"

  By Harshitha
  |

  ರಾಕಿಂಗ್ ಸ್ಟಾರ್ ಯಶ್ ಸುದ್ದಿಯಲ್ಲಿದ್ದಾರೆ! ಈ ಬಾರಿ ಅವರು ಸುದ್ದಿಯಾಗುತ್ತಿರುವುದು ಯಾವುದೋ ಹೊಸ ಸಿನಿಮಾ ಕುರಿತ ಎಕ್ಸ್ ಕ್ಲ್ಯೂಸಿವ್ ಮಾಹಿತಿಗಾಗಿ ಅಲ್ಲ. ಬದಲಾಗಿ ಬೇಡದ ವಿಚಾರಕ್ಕೆ ಅನ್ನೋದು ಅವರ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್..!

  ನಟ ಯಶ್ ಅವರ ಸಂಭಾವನೆ ಕೋಟಿ ಕೋಟಿ ಅಂತ ನಿಮಗೆ ಗೊತ್ತಿದೆ. ಗಾಂಧಿನಗರದ ಗೆಲ್ಲುವ ಕುದುರೆ ಆಗಿರುವ ಯಶ್, ತಿಂಗಳಿಗೆ ಸರಿಯಾಗಿ ಬಾಡಿಗೆ ಕಟ್ಟದೆ ಮನೆ ಮಾಲೀಕರಿಗೆ ಬೆದರಿಕೆ ಹಾಕಿದ್ದಾರೆ.

  ಈ ಸಂಬಂಧ ಯಶ್ ಮತ್ತು ಕುಟುಂಬದ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೇ, ಜೀವ ಬೆದರಿಕೆ ಭಯದಿಂದ ಮನೆ ಮಾಲೀಕರು ಸಿಟಿ ಸಿವಿಲ್ ಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. ಮುಂದೆ ಓದಿ....

  ಬಾಡಿಗೆ ಮನೆಯಲ್ಲಿದ್ದಾರಾ ಯಶ್?

  ಬಾಡಿಗೆ ಮನೆಯಲ್ಲಿದ್ದಾರಾ ಯಶ್?

  ನಂಬುವುದಕ್ಕೆ ಕೊಂಚ ಕಷ್ಟವಾದರೂ, ಇದೇ ವಾಸ್ತವ. ರಾಕಿಂಗ್ ಸ್ಟಾರ್ ಯಶ್ ಮತ್ತು ಕುಟುಂಬ ಬಾಡಿಗೆ ಮನೆಯಲ್ಲಿದ್ದಾರೆ. ನಂ.755, 5 ನೇ ಕ್ರಾಸ್, 3 ನೇ ಬ್ಲಾಕ್, 3 ನೇ ಹಂತ, ಬನಶಂಕರಿಯಲ್ಲಿರುವ ನಿವಾಸದಲ್ಲಿ 2010 ರಿಂದ ನಟ ಯಶ್ ಮತ್ತು ಕುಟುಂಬ ಬಾಡಿಗೆಗೆ ವಾಸವಿದೆ. [ಬೀದಿಗಿಳಿದಿರುವ ನಿರ್ಮಾಪಕರ ಬಗ್ಗೆ ಯಶ್ ಹೇಳೋದೇನು?]

  ಬಾಡಿಗೆ ನೀಡುತ್ತಿಲ್ಲ 'ರಾಜಾಹುಲಿ' ಕುಟುಂಬ..!

  ಬಾಡಿಗೆ ನೀಡುತ್ತಿಲ್ಲ 'ರಾಜಾಹುಲಿ' ಕುಟುಂಬ..!

  ಯಶ್ ಮತ್ತು ಕುಟುಂಬ ಮಾಡಿಕೊಂಡಿರುವ ಕರಾರು ಪ್ರಕಾರ, ಒಂದು ವರ್ಷ ವಾಸದ ನಂತ್ರ ಅದೇ ಮನೆಯಲ್ಲಿ ವಾಸಿಸಲು ಇಚ್ಛಿಸಿದ್ದಲ್ಲಿ, ಶೇಕಡ 5 ರಷ್ಟು ಹೆಚ್ಚಿನ ಬಾಡಿಗೆಯನ್ನ ಮನೆಯ ಮಾಲೀಕರಿಗೆ ಪಾವತಿಸಬೇಕು. ಆದ್ರೆ, 2011 ರಿಂದ ಹೆಚ್ಚಿನ ಬಾಡಿಗೆಯನ್ನ ಯಶ್ ಮತ್ತು ಕುಟುಂಬ ನೀಡಿಲ್ಲ. ಅಲ್ಲದೇ, ಕಳೆದ ಒಂದು ವರ್ಷದಿಂದ ತಿಂಗಳ ಬಾಡಿಗೆಯನ್ನೂ ನೀಡುತ್ತಿಲ್ಲ.! [ಯಶ್ ವಿರುದ್ಧ ನಡೀತಿದೆ 'ಮಂಡ್ಯ ಸ್ಟಾರ್'ಗಳ ಮಸಲತ್ತು?]

  ಬಾಡಿಗೆ ಕೇಳೋಕೆ ಹೋದರೆ, ಆವಾಜ್ ಹಾಕ್ತಾರೆ

  ಬಾಡಿಗೆ ಕೇಳೋಕೆ ಹೋದರೆ, ಆವಾಜ್ ಹಾಕ್ತಾರೆ

  ಮನೆ ಬಾಡಿಗೆ ಕೇಳೋಕೆ ಅಂತ ಮನೆ ಮಾಲೀಕರಾದ ಡಾ.ಮುನಿ ಪ್ರಸಾದ್ ಮತ್ತು ಪತ್ನಿ ಡಾ.ವನಜಾ ಹೋದರೆ, 'ಗೆಟ್ ಔಟ್' ಅಂತ ಮನೆಯಿಂದ ಹೊರಗೆ ಕಳುಹಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರಂತೆ ಯಶ್ ತಾಯಿ ಪುಷ್ಪ. ['ರಾಜಾಹುಲಿ' ಯಶ್ ವಿರುದ್ಧ ಅಣ್ತಮ್ಮಂದಿರು ತಿರುಗಿಬಿದ್ದಿರುವುದೇಕೆ?]

  ಜೀವ ಬೆದರಿಕೆ ಕೂಡ ಹಾಕಿದರಂತೆ..!

  ಜೀವ ಬೆದರಿಕೆ ಕೂಡ ಹಾಕಿದರಂತೆ..!

  ''ನನ್ನ ಮಗ ಯಶ್ ದೊಡ್ಡ ಹೀರೋ. ನಮಗೆ ಅಭಿಮಾನಿ ಬಳಗ ದೊಡ್ಡದಾಗಿದೆ. ನಾವು ಯಾರಿಗೂ ಬಾಡಿಗೆ ಕೊಡಬೇಕಾಗಿಲ್ಲ. ನಮ್ಮ ತಂಟೆಗೆ ಬಂದ್ರೆ ಅಷ್ಟೆ. ಅಭಿಮಾನಿಗಳು ನಿಮಗೆ ಸರಿಯಾಗಿ ಮಾಡ್ತಾರೆ'' ಅಂತ ಯಶ್ ತಾಯಿ ಪುಷ್ಪ ಬೆದರಿಕೆ ಕೂಡ ಹಾಕಿದರಂತೆ. ಹಾಗಂತ ಮನೆ ಮಾಲೀಕರಾಗಿರುವ ಡಾ.ಮುನಿಪ್ರಸಾದ್ ಪತ್ನಿ ಡಾ.ವನಜಾ ಖಾಸಗಿ ವಾಹಿನಿಗಳಿಗೆ ಹೇಳಿಕೆ ನೀಡಿದ್ದಾರೆ. [ರಾಕಿಂಗ್ ಸ್ಟಾರ್ ಯಶ್ ಕಾರಿನ ಮೇಲೆ ದಾಳಿ ಮಾಡಿದವರಾರು?]

  ಮನೆ ಬಾಡಿಗೆ ಎಷ್ಟು..?

  ಮನೆ ಬಾಡಿಗೆ ಎಷ್ಟು..?

  2010 ರಲ್ಲಿ ಆದ ಕರಾರು ಪ್ರಕಾರ, ಬನಶಂಕರಿಯಲ್ಲಿರುವ 5 ಬೆಡ್ ರೂಮ್, ಒಂದು ಹಾಲ್, ಡೈನಿಂಗ್ ಹಾಲ್, ದೇವರ ಮನೆ, ಅಡುಗೆ ಮನೆ ಮತ್ತು 3 ಅಟ್ಯಾಚ್ಡ್ ಬಾತ್ ರೂಮ್ ಇರುವ ಎರಡು ಅಂತಸ್ತಿನ ಮನೆಗೆ, ತಿಂಗಳಿಗೆ 40 ಸಾವಿರ ರೂಪಾಯಿಯನ್ನ ಯಶ್ ಮತ್ತು ಕುಟುಂಬ ಬಾಡಿಗೆಯಾಗಿ ನೀಡಬೇಕು. [ಬಿಎಂಟಿಸಿ ಡ್ರೈವರ್ ಮಗ ರಾಕಿಂಗ್ ಸ್ಟಾರ್ ಯಶೋಗಾಥೆ]

  ಮೊದಲಿನಿಂದಲೂ ಬಾಡಿಗೆ ಸರಿಯಾಗಿ ಕೊಡಲ್ಲ..!

  ಮೊದಲಿನಿಂದಲೂ ಬಾಡಿಗೆ ಸರಿಯಾಗಿ ಕೊಡಲ್ಲ..!

  2011ನೇ ಇಸವಿಯಿಂದಲೂ ಯಶ್ ಮತ್ತು ಕುಟುಂಬ ಸರಿಯಾಗಿ ಬಾಡಿಗೆ ನೀಡುತ್ತಿಲ್ಲವಂತೆ. 5ನೇ ತಾರೀಖಿನ ಒಳಗೆ ಬಾಡಿಗೆ ನೀಡುತ್ತೇವೆ ಅಂತ ಅಗ್ರೀಮೆಂಟ್ ನಲ್ಲಿ ಬರೆದಿದ್ದರೂ, ಮನ ಬಂದಾಗಿ ಬಾಡಿಗೆ ನೀಡುತ್ತಿದ್ದರಂತೆ. ಹನ್ನೊಂದು ತಿಂಗಳ ಅವಧಿ ಮುಗಿದರೂ, 5% ಹೆಚ್ಚಿನ ಬಾಡಿಗೆ ಕೂಡ ಪಾವತಿಸಿಲ್ಲ.

  ಬಾಕಿ ಉಳಿಸಿಕೊಂಡಿರುವ ಬಾಡಿಗೆ ಮೊತ್ತ ಎಷ್ಟು ಗೊತ್ತಾ?

  ಬಾಕಿ ಉಳಿಸಿಕೊಂಡಿರುವ ಬಾಡಿಗೆ ಮೊತ್ತ ಎಷ್ಟು ಗೊತ್ತಾ?

  ವರ್ಷಗಳಿಂದಲೂ ಯಶ್ ಮತ್ತು ಕುಟುಂಬ ಬಾಕಿ ಉಳಿಸಿಕೊಂಡಿರುವ ಬಾಡಿಗೆ ಮೊತ್ತ ಬರೋಬ್ಬರಿ 23,82,602 ರೂಪಾಯಿ ಅಂದ್ರೆ ನೀವು ನಂಬಲೇಬೇಕು.!!!!

  ಮನೆ ಒಳಗೂ ಡ್ಯಾಮೇಜ್ ಮಾಡಿದ್ದಾರೆ!

  ಮನೆ ಒಳಗೂ ಡ್ಯಾಮೇಜ್ ಮಾಡಿದ್ದಾರೆ!

  ಕರಾರಿನ ಪ್ರಕಾರ, ಮಾಲೀಕರ ಸಮ್ಮತಿ ಇಲ್ಲದೆ ಮನೆಯ ಒಳಭಾಗದಲ್ಲಿ ಆಲ್ಟ್ರೇಷನ್ ಮಾಡುವಂತಿಲ್ಲ. ಆದ್ರೆ, ಯಶ್ ಮತ್ತು ಕುಟುಂಬಕ್ಕೆ ಬೇಕಾದಂತೆ ಒಳಾಂಗಣದಲ್ಲಿ Renovation ಮಾಡಿಸಿಕೊಂಡಿದ್ದಾರೆ. ಇದರಿಂದ ಮನೆಗೆ ಡ್ಯಾಮೇಜ್ ಆಗಿದೆ ಅಂತ 1,05, 372 ಡ್ಯಾಮೇಜಿಂಗ್ ಚಾರ್ಚ್ ಕೂಡ ಮಾಲೀಕರು ಕೇಳುತ್ತಿದ್ದಾರೆ.

  ಮನೆಯಲ್ಲಿ ಚೀಟಿ ಅವ್ಯವಹಾರ..!

  ಮನೆಯಲ್ಲಿ ಚೀಟಿ ಅವ್ಯವಹಾರ..!

  ಇದೆಲ್ಲದರ ಜೊತೆಗೆ ಇದೇ ಬನಶಂಕರಿ ನಿವಾಸದಲ್ಲಿ ಯಶ್ ತಾಯಿ ಪುಷ್ಪ ಅನಧಿಕೃತವಾಗಿ ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದಾರೆ ಅಂತಲೂ ಡಾ.ಮುನಿಪ್ರಸಾದ್ ಆರೋಪಿಸಿದ್ದಾರೆ.

  ರಾತ್ರಿಯೆಲ್ಲಾ ಯಶ್ ಮತ್ತು ಗೆಳೆಯರ ದಾಂಧಲೆ

  ರಾತ್ರಿಯೆಲ್ಲಾ ಯಶ್ ಮತ್ತು ಗೆಳೆಯರ ದಾಂಧಲೆ

  ಯಶ್ ಮತ್ತು ಅನೇಕ ಇತರೆ ತಾರೆಯರು ರಾತ್ರಿ ಹೊತ್ತು ಟೆರೆಸ್ ನಲ್ಲಿ ಗದ್ದಲ-ಗಲಾಟೆ ಮಾಡುತ್ತಾರಂತೆ. ಇದರಿಂದ ಅಕ್ಕ-ಪಕ್ಕದ ಮನೆಯವರಿಗೆ ಕಿರಿಕಿರಿ ಆಗುತ್ತಿದೆ. ಯಶ್ ಅಭಿಮಾನಿಗಳು ಕೂಡ ಆಗಾಗ ದಾಂಧಲೆ ಮಾಡುತ್ತಿರುತ್ತಾರೆ ಅಂತಲೂ ತಮ್ಮ ದೂರಿನಲ್ಲಿ ಮನೆ ಮಾಲೀಕರು ತಿಳಿಸಿದ್ದಾರೆ. [ರಾತ್ರಿಯೆಲ್ಲಾ ರಾಕಿಂಗ್ ಸ್ಟಾರ್ ಯಶ್ ನಿದ್ದೆಗೆಡುತ್ತಿರುವುದೇಕೆ?]

  ಸ್ವಂತಕ್ಕೆ ಮಾಡಿಕೊಳ್ಳಬೇಕು ಅನ್ನುವ ಹಠ!

  ಸ್ವಂತಕ್ಕೆ ಮಾಡಿಕೊಳ್ಳಬೇಕು ಅನ್ನುವ ಹಠ!

  ಮೂಲಗಳ ಪ್ರಕಾರ ಬನಶಂಕರಿಯಲ್ಲಿರುವ ಮನೆ ಯಶ್ ಗೆ ಲಕ್ಕಿ. ಅದನ್ನ ಬಿಟ್ಟುಹೋಗುವ ಮನಸ್ಸು ಯಶ್ ಗೆ ಇಲ್ವಂತೆ. ಹೀಗಾಗಿ ಅದನ್ನ ಸ್ವಂತ ಮಾಡಿಕೊಳ್ಳಬೇಕು ಅಂತ ಓಡಾಡುತ್ತಿದ್ದಾರಂತೆ. ಆದ್ರೆ, ಅದನ್ನ ಬಿಟ್ಟುಕೊಡುವ ಮನಸ್ಸು ಮನೆ ಮಾಲೀಕರಿಗಿಲ್ಲ. [ರಾಕಿಂಗ್ ಸ್ಟಾರ್ ಯಶ್ ಗೆಲುವಿನ ರಹಸ್ಯ ಮಂತ್ರ]

  ಆಫೀಸ್ ಮಾಡುವ ಯೋಜನೆ ಇತ್ತು!

  ಆಫೀಸ್ ಮಾಡುವ ಯೋಜನೆ ಇತ್ತು!

  ಡಾ.ಮುನಿಪ್ರಸಾದ್ ಪತ್ನಿ ಡಾ.ವನಜಾ ಹೇಳುವ ಪ್ರಕಾರ, ಬನಶಂಕರಿಯಲ್ಲಿರುವ ಮನೆಯನ್ನ ಯಶ್ ಅವರ ಆಫೀಸ್ ಆಗಿ ಪರಿವರ್ತಿಸಲು ಸಿದ್ಧತೆ ನಡೆಸುತ್ತಿದ್ದರಂತೆ. ಆದರೆ, ಮನೆ ಕೊಟ್ಟಿರುವುದು ವಾಸ ಇರುವುದಕ್ಕೆ ಹೊರತು ಆಫೀಸ್ ಮಾಡಿಕೊಳ್ಳುವುದಕ್ಕಲ್ಲ ಅಂತ ಕರಾರುವಕ್ಕಾಗಿ ಹೇಳಿದ್ದಾರೆ. ಇದರ ಪರಿಣಾಮ ಮಾತಿನ ಚಕಮಕಿ ನಡೆದಿದೆ. [ಬರ್ತಡೆ ಬಾಯ್ 'ಯಶ್' ಯಶಸ್ಸಿನ ಹಿಂದಿನ ರಹಸ್ಯ]

  ಪೊಲೀಸ್ ಕಂಪ್ಲೇಂಟ್, ಕೋರ್ಟ್ ನಲ್ಲಿ ಕೇಸ್

  ಪೊಲೀಸ್ ಕಂಪ್ಲೇಂಟ್, ಕೋರ್ಟ್ ನಲ್ಲಿ ಕೇಸ್

  ಯಶ್ ಮತ್ತು ಕುಟುಂಬದ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಡಾ.ಮುನಿಪ್ರಸಾದ್ ದೂರು ನೀಡಿದ್ದಾರೆ. ಅಲ್ಲದೇ, ಸಿಟಿ ಸಿವಿಲ್ ಕೋರ್ಟ್ ನಲ್ಲಿ ದಾವೆ ಕೂಡ ಹೂಡಿದ್ದಾರೆ. ಯಶ್ ಮತ್ತು ಕುಟುಂಬ ಮನೆ ಖಾಲಿ ಮಾಡಬೇಕು. ಕೊಟ್ಟಿರುವ 4 ಲಕ್ಷ ಅಡ್ವಾನ್ಸ್ ಕಳೆದು, ಬಾಕಿ 21,37,972 ರೂಪಾಯಿಯನ್ನ ನೀಡಬೇಕು ಅಂತ ಕೋರ್ಟ್ ಮೊರೆಹೋಗಿದ್ದಾರೆ.

  ನಟ ಯಶ್ ಏನ್ ಹೇಳ್ತಾರೆ?

  ನಟ ಯಶ್ ಏನ್ ಹೇಳ್ತಾರೆ?

  ಇಷ್ಟೆಲ್ಲಾ ರಾದ್ಧಾಂತ ಆಗುತ್ತಿದ್ದರೂ, ನಟ ಯಶ್ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಮನೆ ಮಾಲೀಕರು ಯಶ್ ರನ್ನ ಸಂಪರ್ಕಿಸುವುದಕ್ಕೆ ಪ್ರಯತ್ನ ಪಟ್ಟರೂ, ಅವರ ಕೈಗೂ ಯಶ್ ಸಿಕ್ಕಿಲ್ಲ. ಈಗಲೂ ಯಾರ ಫೋನ್ ಕಾಲ್ ನೂ ಯಶ್ ಪಿಕ್ ಮಾಡುತ್ತಿಲ್ಲ.

  ಇದು ಮೊದಲೇನಲ್ಲ..!

  ಇದು ಮೊದಲೇನಲ್ಲ..!

  ಯಶ್ ಮತ್ತು ಕುಟುಂಬ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿರುವುದು ಇದು ಮೊದಲೇನಲ್ಲ. ಚೀಟಿ ವ್ಯವಹಾರದಲ್ಲಿ ಕೆಲವರಿಗೆ ಪಂಗನಾಮ ಹಾಕಿ, ಖಾಸಗಿ ಸುದ್ದಿವಾಹಿನಿಗಳಲ್ಲಿ ಯಶ್ ಮತ್ತು ತಾಯಿ ಪುಷ್ಪ ಬ್ರೇಕಿಂಗ್ ನ್ಯೂಸ್ ಮಾಡಿದ್ದರು. ಈಗ ಮನೆ ಮಾಲೀಕರ ಮೇಲೆ ದಬ್ಬಾಳಿಕೆ ಮಾಡಿ ಮತ್ತೆ ಸುದ್ದಿಯಲ್ಲಿದ್ದಾರೆ.

  English summary
  Kannada Actor Yash is in news for Wrong reasons. Complaint against Rocking Star Yash's family is filed in Girinagar police station and Case is filed in City Civil Court for not paying rent for Banashankari house, where Yash and his family stays.
  Tuesday, June 16, 2015, 10:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X