For Quick Alerts
  ALLOW NOTIFICATIONS  
  For Daily Alerts

  ನಟಿ ಮೇಘನಾ ರಾಜ್ ಬಗ್ಗೆ ಕೇಳಿಬಂದಿರುವ ವಂಚನೆ ಆರೋಪ ನಿಜವೇ?

  By Harshitha
  |

  'ಪುಂಡ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಮೇಘನಾ ರಾಜ್. ಹಿರಿಯ ನಟ ಸುಂದರ್ ರಾಜ್ ಹಾಗೂ ನಟಿ ಪ್ರಮೀಳಾ ಜೋಷಾಯಿ ಪುತ್ರಿಯಾಗಿರುವ ಮೇಘನಾ ರಾಜ್ ಕನ್ನಡ ಮಾತ್ರ ಅಲ್ಲ ಪಕ್ಕದ ತೆಲುಗು, ತಮಿಳು ಹಾಗೂ ಮಲೆಯಾಳಂ ಚಿತ್ರರಂಗದಲ್ಲೂ ಖ್ಯಾತಿ ಗಳಿಸಿದ್ದಾರೆ.

  ಸಿನಿಮಾಗಳಿಂದಾಗಿ ಸದಾ ಸುದ್ದಿಯಲ್ಲಿರುತ್ತಿದ್ದ ನಟಿ ಮೇಘನಾ ರಾಜ್ ಇದೀಗ ಬೇಡದ ವಿಷಯಕ್ಕೆ ವಿವಾದದ ಸುಳಿಯಲ್ಲಿ ಸಿಲುಕಿ ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ. [ಬೆಂಗಳೂರು 'ಸಂಪಿಗೆ' ಮೇಘನಾ, ಇದು ನಿಜನಾ?]

  'ರಾಜಾ ಹುಲಿ', 'ಆಟಗಾರ', 'ಬಹುಪರಾಕ್' ಚಿತ್ರಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಜನಪ್ರಿಯತೆ ಗಳಿಸಿದ ನಟಿ ಮೇಘನಾ ರಾಜ್ ಮೇಲೆ ಈಗೊಂದು ದೊಡ್ಡ ಆರೋಪ ಕೇಳಿ ಬಂದಿದೆ.

  ಆ ಆರೋಪ ಏನು, ಆರೋಪ ಮಾಡಿದವರು ಯಾರು? ಎನ್ನುವ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....

  ವಿವಾದದಲ್ಲಿ ಮೇಘನಾ ರಾಜ್!

  ವಿವಾದದಲ್ಲಿ ಮೇಘನಾ ರಾಜ್!

  ಸಿನಿಮಾ ನಟಿಯರು ಎಂದ ಮೇಲೆ ಗಾಸಿಪ್ ಕಾಲಂಗಳಿಗೆ ಆಹಾರವಾಗುವುದು ಸರ್ವೇ ಸಾಮಾನ್ಯ. ಆದ್ರೀಗ, ನಟಿ ಮೇಘನಾ ರಾಜ್ ಮೇಲೆ ಕೇಳಿ ಬಂದಿರುವುದು ಅಂತೆ-ಕಂತೆ ಸುದ್ದಿ ಅಲ್ಲ. ಪೊಲೀಸ್ ಕಮಿಷನರ್ ವರೆಗೂ ದೂರು ಹೋಗಿರುವ ದೊಡ್ಡ ಅಪವಾದ! ಅದೇನು ಅಂತ ತಿಳಿಯಲು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

  [ನಟ ಚಿರಂಜೀವಿ ಸರ್ಜಾಗೆ ನಿದಿರೆ ಬರದಿರೆ ಏನಂತೀ?]

  ಮದುವೆ ಆಗಿದ್ದಾರಾ ಮೇಘನಾ ರಾಜ್?

  ಮದುವೆ ಆಗಿದ್ದಾರಾ ಮೇಘನಾ ರಾಜ್?

  ಬೆಂಗಳೂರು ಪೊಲೀಸ್ ಕಮಿಷನರ್ ಗೆ ಸದ್ಯ ಹೋಗಿರುವ ದೂರಿನ ಪ್ರಕಾರ, ನಟಿ ಮೇಘನಾ ರಾಜ್ ತಮಿಳುನಾಡು ಮೂಲದ ಜನಾರ್ಧನ್ ಎಂಬ ವ್ಯಕ್ತಿಯನ್ನು ಮದುವೆ ಆಗಿ ವಂಚನೆ ಮಾಡಿದ್ದಾರೆ. [ಕನ್ನಡದಲ್ಲಿ ಸಿಕ್ಕಾಪಟ್ಟೆ ಬಿಜಿಯಾದ ಕನ್ನಡತಿ ಮೇಘನಾ ರಾಜ್]

  ಮದುವೆ ಆಗಿದ್ದು ಯಾವಾಗ?

  ಮದುವೆ ಆಗಿದ್ದು ಯಾವಾಗ?

  ದೂರಿನ ಪ್ರತಿಯಲ್ಲಿ ಇರುವ ಪ್ರಕಾರ, ನಟಿ ಮೇಘನಾ ರಾಜ್ ಫೆಬ್ರವರಿ 26, 2015 ರಂದು ತಮಿಳುನಾಡಿನ ಧರ್ಮಪುರಿ ಮೂಲದ ಜನಾರ್ಧನ್ ಎಂಬುವವರನ್ನ ನಟಿ ಮೇಘನಾ ರಾಜ್ ವಿವಾಹವಾಗಿದ್ದರು. [ಚಿರು ಸರ್ಜಾ-ಮೇಘನಾ ನಡುವೆ ಏನಿದೆ! ಏನಿಲ್ಲ?]

  ಮದುವೆ ಆದ್ಮೇಲೆ ವಂಚನೆ?

  ಮದುವೆ ಆದ್ಮೇಲೆ ವಂಚನೆ?

  ಜನಾರ್ಧನ್ ಎಂಬುವವರನ್ನ ರಿಜಿಸ್ಟರ್ ಮದುವೆ ಆದ ನಟಿ ಮೇಘನಾ ರಾಜ್, ಬಳಿಕ ಜನಾರ್ಧನ್ ಗೆ ಮದುವೆ ರಿಜಿಸ್ಟರ್ ಸರ್ಟಿಫಿಕೇಟ್ ಕೊಡದೆ ವಂಚನೆ ಮಾಡಿದ್ದಾರೆ ಅಂತ ಜನಾರ್ಧನ್ ಎಂಬ ವ್ಯಕ್ತಿ ಬೆಂಗಳೂರು ಪೊಲೀಸ್ ಕಮಿಷನರ್ ಗೆ ದೂರು ಕೊಟ್ಟಿದ್ದಾರೆ.

  ಈ-ಮೇಲ್ ಮುಖಾಂತರ ದೂರು

  ಈ-ಮೇಲ್ ಮುಖಾಂತರ ದೂರು

  ''ನಟಿ ಮೇಘನಾ ರಾಜ್ ನನ್ನ ಮದುವೆ ಆಗಿ ಮೋಸ ಮಾಡಿದ್ದಾರೆ'' ಅಂತ ಬೆಂಗಳೂರು ಪೊಲೀಸ್ ಕಮಿಷನರ್ ಗೆ ತಮಿಳುನಾಡಿನ ಧರ್ಮಪುರಿ ಮೂಲದ ಜನಾರ್ಧನ್ ಈ-ಮೇಲ್ ಮುಖಾಂತರ ಮೂರು ಬಾರಿ ದೂರು ನೀಡಿದ್ದಾರೆ.

  ಕಳೆದ ವರ್ಷವೇ ದೂರು ನೀಡಿದ್ದರು!

  ಕಳೆದ ವರ್ಷವೇ ದೂರು ನೀಡಿದ್ದರು!

  ಏಪ್ರಿಲ್ 9, 2015 ರಂದು ಮೊದಲ ದೂರು ಕಳುಹಿಸಲಾಗಿದ್ದು ಡಿಸೆಂಬರ್ 25, 2015 ರಂದು ಮತ್ತೊಂದು ದೂರು ನೀಡಿದ್ದಾರೆ ಜನಾರ್ಧನ್.

  ತನಿಖೆ ಶುರುವಾಯ್ತು!

  ತನಿಖೆ ಶುರುವಾಯ್ತು!

  ಡಿಸೆಂಬರ್ ನಲ್ಲಿ ದೂರು ಕೊಟ್ಟ ನಂತರ ಜೆ.ಪಿ.ನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

  ಸುಳ್ಳು ದೂರು?

  ಸುಳ್ಳು ದೂರು?

  ಮೂಲಗಳ ಪ್ರಕಾರ, ಇದು ಸುಳ್ಳು ದೂರು ಎಂಬ ತೀರ್ಮಾನಕ್ಕೆ ಬರಲಾಗಿದ್ದು, ದೂರು ಕೊಟ್ಟ ಜನಾರ್ಧನ್ ಎಂಬುವರನ್ನು ಪತ್ತೆ ಮಾಡಲು ಪೊಲೀಸರು ತೀರ್ಮಾನಿಸಿದ್ದಾರೆ.

  English summary
  Cheating complaint is lodged against Kannada Actress Meghana Raj by Janardhan from Tamil Nadu. Janardhan alleged that Meghana Raj married him in 2015 but denied to give marriage certificate.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X