»   » ಬಾಯ್ ಫ್ರೆಂಡ್ ಇದ್ದಾನಾ? ದರ್ಶನ್ ಪತ್ನಿ ವಿಜಯಲಕ್ಷ್ಮಿ ಏನಂದ್ರು ಗೊತ್ತಾ?

ಬಾಯ್ ಫ್ರೆಂಡ್ ಇದ್ದಾನಾ? ದರ್ಶನ್ ಪತ್ನಿ ವಿಜಯಲಕ್ಷ್ಮಿ ಏನಂದ್ರು ಗೊತ್ತಾ?

Posted By:
Subscribe to Filmibeat Kannada

ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಅಂತಾರೆ. ಆದ್ರೆ, 'ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ' ಎನ್ನುವ ಗಾದೆ ಮಾತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಸಾರದ ಪಾಲಿಗೆ ಮಾತ್ರ ಸುಳ್ಳಾಗಿದೆ.

ಹಿಂದೊಮ್ಮೆ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಜೈಲು ಕಂಬಿ ಎಣಿಸಿ ಬಂದರೂ, ನಟ ದರ್ಶನ್ ಸಂಸಾರ ಮಾತ್ರ ಸುಗಮ ಹಾದಿ ಹಿಡಿದಿಲ್ಲ. [ನನ್ನ ಹೆಂಡ್ತಿ ವಿಜಯಲಕ್ಷ್ಮಿಗೆ ಪ್ರಿಯಕರನಿದ್ದಾನೆ ಎಂದ ದರ್ಶನ್]

ಕಳೆದ ಕೆಲ ತಿಂಗಳುಗಳಿಂದ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ಪ್ರತ್ಯೇಕ ವಾಸವಿದ್ದಾರೆ. ಸಾಲದ್ದಕ್ಕೆ ಪತ್ನಿ ವಿಜಯಲಕ್ಷ್ಮಿಗೆ ಬಾಯ್ ಫ್ರೆಂಡ್ ಇದ್ದಾರೆ ಅಂತ ದರ್ಶನ್ ಗಂಭೀರ ಆರೋಪ ಮಾಡಿದ್ದಾರೆ. [ನಟ ದರ್ಶನ್-ವಿಜಯಲಕ್ಷ್ಮಿ ಸಂಸಾರದಲ್ಲಿ ಮತ್ತೆ ಸುಂಟರಗಾಳಿ]

ಈ ಬಗ್ಗೆ 'ಪಬ್ಲಿಕ್ ಟಿವಿ' ಜೊತೆ ಮಾತನಾಡುತ್ತಾ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬೇಸರ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ.....

ಮನ ನೊಂದಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ

''ನನ್ನ ಆಡಿ ಕಾರನ್ನು ವಿಜಯಲಕ್ಷ್ಮಿ ಕದ್ದುಕೊಂಡು ಹೋಗಿ ಆಕೆಯ ಬಾಯ್ ಫ್ರೆಂಡ್ ಗೆ ಕೊಟ್ಟಿದ್ದಳು'' ಅಂತ ನಟ ದರ್ಶನ್ ನೀಡಿರುವ ಹೇಳಿಕೆಗೆ ಪತ್ನಿ ವಿಜಯಲಕ್ಷ್ಮಿ ಬೇಸರಗೊಂಡಿದ್ದಾರೆ. ಈ ಬಗ್ಗೆ ಅವರ ಪ್ರತಿಕ್ರಿಯೆ ಏನು ಅಂತ ತಿಳಿಯಲು ಮುಂದಿನ ಸ್ಲೈಡ್ ಕ್ಲಿಕ್ಕಿಸಿ....

ಯಾಕೆ ಹೀಗೆ ಹೇಳಿದ್ದಾರೆ?

''ನನಗೆ ಬಾಯ್ ಫ್ರೆಂಡ್ ಇದ್ದಾರೆ ಅಂತ ಹೇಳಿಕೆ ನೀಡಿರುವುದು ಬೇಸರ ತಂದಿದೆ. ಹೀಗೆ ಯಾಕೆ ಹೇಳಿದ್ದಾರೋ, ನನಗೆ ಗೊತ್ತಿಲ್ಲ'' ಅಂತ 'ಪಬ್ಲಿಕ್ ಟಿವಿ'ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೇಳಿಕೆ ನೀಡಿದ್ದಾರೆ. [ದರ್ಶನ್‌ ಅವರಿಗೆ ಈಗ ಅರ್ಧಾಂಗಿಯೇ ಸತಿ ಸಾವಿತ್ರಿ]

ಬಾಯ್ ಫ್ರೆಂಡ್ ಇಲ್ಲ!

''ನನಗೆ ಯಾವ ಬಾಯ್ ಫ್ರೆಂಡ್ ಇಲ್ಲ. ನಾನು ಕೆಟ್ಟ ಮನೆತನದಿಂದ ಬಂದವಳಲ್ಲ'' - ವಿಜಯಲಕ್ಷ್ಮಿ, ದರ್ಶನ್ ಪತ್ನಿ [ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಹಬ್ಬಿರುವ ಗಾಸಿಪ್ ನಿಜವೇ?]

ದೂರ ಇರುವುದು ನಿಜ

''ದರ್ಶನ್ ನಿಂದ ನಾನು ಕೆಲ ದಿನಗಳಿಂದ ದೂರ ಇರುವುದು ನಿಜ. ನನ್ನ ಬಗ್ಗೆ ಅಪಪ್ರಚಾರ ಸರಿ ಅಲ್ಲ'' - ವಿಜಯಲಕ್ಷ್ಮಿ, ದರ್ಶನ್ ಪತ್ನಿ [ಚಾಲೇಂಜಿಂಗ್ ಸ್ಟಾರ್ ಕಿವಿ ಹಿಂಡಿದ ನಮ್ಮ ಓದುಗರು]

ಆಘಾತ ತಂದಿದೆ

''ದರ್ಶನ್ ನನ್ನ ನಡತೆ ಬಗ್ಗೆ ಮಾತನಾಡಿರುವುದು ತುಂಬಾ ಆಘಾತ ತಂದಿದೆ. ಪತಿ ಹೇಳ್ತಿರೋದೆಲ್ಲಾ ಅಪ್ಪಟ ಸುಳ್ಳು'' ಎಂದು ಕಣ್ಣೀರಿಟ್ಟಿದ್ದಾರೆ ದರ್ಶನ್ ಪತ್ನಿ ವಿಜಯಲಕ್ಷ್ಮಿ. [ದರ್ಶನ್ ಲವ್ವಿ ಡವ್ವಿ ಸ್ಟೋರಿ ಬಗ್ಗೆ ಮೌನ ಮುರಿದ ವಿಜಯಲಕ್ಷ್ಮಿ]

ದರ್ಶನ್ ನೀಡಿದ್ದ ಹೇಳಿಕೆ ಏನು?

''ನನ್ನ ಆಡಿ ಕಾರನ್ನು ವಿಜಯಲಕ್ಷ್ಮಿ ಕದ್ದುಕೊಂಡು ಹೋಗಿ ಆಕೆಯ ಬಾಯ್ ಫ್ರೆಂಡ್ ಗೆ ಕೊಟ್ಟಿದ್ದಳು. ನಾನು ನನ್ನ ಕಾರನ್ನು ವಾಪಸ್ ಕೊಡು ಅಂತ ಕೇಳಲು ಆಕೆಯ ಮನೆಯ ಬಳಿಕೆ ತೆರಳಿದ್ದೆ. ಅಷ್ಟರಲ್ಲಿ ಎಲ್ಲೋ ಗುದ್ದಿಸಿ ತಂದು ಕಾರನ್ನು ನಿಲ್ಲಿಸಿದ್ದರು. ಅದಕ್ಕೆ ಸಾಕ್ಷಿಯಾಗಿ ಕಾರಿನ ಗ್ಲಾಸ್ ಪೀಸ್ ಗಳು ಅಲ್ಲೇ ಬಿದ್ದಿವೆ. ಬೇಕಾದ್ರೆ ಹೋಗಿ ನೋಡಿ'' ಅಂತ ದರ್ಶನ್ ಹೇಳಿಕೆ ನೀಡಿದ್ದರು. [ಪತ್ನಿ ಲಕ್ಷ್ಮಿ ಕೈ ಕೊಟ್ರೆ ಬಾಸ್ ದರ್ಶನ್ ಗೆ ಚಿಪ್ಪೇ ಗತಿ]

ಮುಖಾಮುಖಿ ಆಗಿರಲಿಲ್ಲ!

''ಈ ಸಂದರ್ಭದಲ್ಲಿ ನನ್ನ ಹಾಗೂ ವಿಜಯಲಕ್ಷ್ಮಿ ನಡುವೆ ಮುಖಾಮುಖಿಯೇ ಆಗಿಲ್ಲ. ಸೆಕ್ಯೂರಿಟಿ ಗಾರ್ಡ್ ಒಬ್ಬ ಎದುರಿಗೆ ಸಿಕ್ಕಿದ್ದ. ಅವನು ಕೆಟ್ಟದಾಗಿ ವರ್ತಿಸಿದ್ದಕ್ಕೆ ಮಾತಿನ ಚಕಮಕಿ ನಡೆಯಿತು. ಅಷ್ಟೆ'' ಅಂತ 'ಪಬ್ಲಿಕ್ ಟಿವಿ'ಗೆ ದರ್ಶನ್ ಹೇಳಿದ್ದರು.

ಆರು ತಿಂಗಳಿನಿಂದ ಕಾರು ವಿವಾದ!

ಮಾಧ್ಯಮಗಳು ವರದಿ ಮಾಡುತ್ತಿರುವ ಪ್ರಕಾರ, ಆಡಿ ಕಾರಿನ ಸಲುವಾಗಿ ಕಳೆದ ಆರು ತಿಂಗಳಿನಿಂದ ದರ್ಶನ್ ಹಾಗೂ ವಿಜಯಲಕ್ಷ್ಮಿ ನಡುವೆ ಗಲಾಟೆ ನಡೆಯುತ್ತಲೇ ಇದೆ.

English summary
Vijayalakshmi, Darshan's wife has approached the Chennammanakere Achukattu Police asking them to warn her husband for his 'Bad Conduct'. Vijayalakshmi has reacted to this issue.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada