»   » ನಟ ಕಿರಣ್ ರಾಜ್ ಹಾಗೂ ಯಾಸ್ಮಿನ್ ನೀಡಿದ ದೂರಿನಲ್ಲಿ ಏನಿದೆ?

ನಟ ಕಿರಣ್ ರಾಜ್ ಹಾಗೂ ಯಾಸ್ಮಿನ್ ನೀಡಿದ ದೂರಿನಲ್ಲಿ ಏನಿದೆ?

Posted By:
Subscribe to Filmibeat Kannada

ಕಿನ್ನರಿ ಧಾರಾವಾಹಿ ಮೂಲಕ ಮನೆ ಮಾತಾಗಿರುವ ನಟ ಕಿರಣ್ ರಾಜ್ ವಿರುದ್ದ ಮುಂಬೈ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಿನ್ನರಿ ಸೀರಿಯಲ್ ನಲ್ಲಿ ನಕುಲ್ ಪಾತ್ರವನ್ನ ನಿರ್ವಹಿಸುತ್ತಿರುವ ಕಿರಣ್ ರಾಜ್ ತನ್ನ ಬಹುದಿನದ ಗೆಳತಿ ಯಾಸ್ಮಿನ್ ಪಠಾಣ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆಯಂತೆ.

ಯಾಸ್ಮಿನ್ ದೂರು ನೀಡಿದ ವಿಚಾರ ತಿಳಿದ ನಂತರ ಕಿರಣ್ ಕೂಡ ಪ್ರೇಯಸಿ ಯಾಸ್ಮಿನ್ ವಿರುದ್ದ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಯಾಸ್ಮಿನ್ ಮಾಡಿದ ತಪ್ಪೇನು? ಕಿರಣ್ ಪ್ರೇಯಸಿ ಮೇಲೆ ಕಂಪ್ಲೆಂಟ್ ಕೊಡಲು ಕಾರಣವೇನು?

ಕಿನ್ನರಿ ಧಾರಾವಾಹಿ ನಾಯಕನ ವಿರುದ್ದ ಹಲ್ಲೆಯ ದೂರು ದಾಖಲು

ಅಷ್ಟಕ್ಕೂ ಕಿರಣ್ ರಾಜ್ ಬಹುದಿನದ ಗೆಳತಿ ಆಗಿದ್ದ ಯಾಸ್ಮಿನ್ ಪಠಾಣ್ ಯಾರು? ಕಿರಣ್ ರಾಜ್ ಕನ್ನಡ ಧಾರಾವಾಹಿಯಲ್ಲಿ ಮಾತ್ರವಲ್ಲದೆ ಬೇರೆ ಯಾವ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ? ಇಬ್ಬರು ನೀಡಿರುವ ದೂರಿನ ಪ್ರತಿಯಲ್ಲಿ ಏನಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ

ಪರಸ್ಪರ ದೂರು ದಾಖಲಿಸಿದ ಕಿರಣ್-ಯಾಸ್ಮಿನ್

ಕನ್ನಡ ಹಾಗೂ ಹಿಂದಿ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟ ಕಿರಣ್ ರಾಜ್ ಹಾಗೂ ಹಿಂದಿ ನಟಿ ಯಾಸ್ಮಿನ್ ಪಠಾಣ್ ಇಬ್ಬರು ಪರಸ್ಪರ ದೂರು ದಾಖಲು ಮಾಡಿದ್ದಾರೆ. ಯಾಸ್ಮಿನ್ ಮುಂಬೈನಲ್ಲಿ ದೂರು ದಾಖಲಿಸಿದರೇ ಕಿರಣ್ ಬೆಂಗಳೂರಿನ ಆರ್ ಆರ್ ನಗರದಲ್ಲಿ ದೂರು ದಾಖಲಿಸಿದ್ದಾರೆ.

ಪ್ರೇಯಸಿ ವಿರುದ್ದ ಕಿರಣ್ ರಾಜ್ ದೂರು

"ಯಾಸ್ಮಿನ್ ಮಾರ್ಚ್ 31 ರಂದು ನಮ್ಮ ಮನೆಗೆ ಬಂದು ನನ್ನ ತಂದೆ ಹಾಗೂ ತಾಯಿ ಮೇಲೆ ಹಲ್ಲೆ ಮಾಡಿದ್ದಾಳೆ. ಅದಷ್ಟೇ ಅಲ್ಲದೇ ನನ್ನ ಕಾರ್ ಗ್ಲಾಸ್ ಹೊಡೆದು ಹಾಕಿದ್ದಾಳೆ. ಅದಕ್ಕಾಗಿ ದೂರು ದಾಖಲು ಮಾಡಿದ್ದೇನೆ ನಾನು ಎಫ್ ಐ ಆರ್ ಹಾಕಿಲ್ಲ ಕಾರಣ ಇದು ಹೀಗೆ ಮುಂದುವರೆಸಲು ನನಗೆ ಇಷ್ಟವಿಲ್ಲ. ಯಾಸ್ಮಿನ್ ತುಂಬಾ ಜನಕ್ಕೆ ಮೋಸ ಮಾಡಿದ್ದಾಳೆ ಈಗಾಗಲೇ ಅವಳ ವಿರುದ್ದ ಮೂರ್ನಾಲ್ಕು ಕೇಸ್ ಗಳಿವೆ. ಹನಿ ಟ್ರ್ಯಾಪ್ ಮಾಡಿ ಜನರಿಗೆ ಮೋಸ ಮಾಡುವುದೆ ಅವಳ ಉದ್ದೇಶ. ನಮ್ಮ ಸಂಬಂಧ ಎಂದಿಗೂ ಚೆನ್ನಾಗಿ ಇರಲಿಲ್ಲ" ಎಂದು ದೂರಿನಲ್ಲಿದೆ.

ದೂರು ದಾಖಲಿಸಿರುವ ಯಾಸ್ಮಿನ್ ಪಠಾಣ್

"ಮಾರ್ಚ್ 29 ರಂದು ಕಿರಣ್ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ಕಾರಿನಲ್ಲೇ ನನಗೆ ಮನಬಂದಂತೆ ತಳಿಸಿದ್ದಾರೆ. ನಂತರ ನಾನು ಕಾರಿನ ಗ್ಲಾಸ್ ಹೊಡೆದು ಕಿರುಚಲು ಆರಂಭಿಸಿದೆ ತದ ನಂತರ ಒಂದು ಗ್ಯಾರೆಜ್ ಗೆ ನನ್ನನ್ನು ಕರೆದುಕೊಂಡು ಹೋಗಿ ಅಲ್ಲಿಯೂ ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ. ಈ ವಿಚಾರವನ್ನು ನಾನು ಅವರ ತಂದೆ ತಾಯಿಗೆ ತಿಳಿಸಿದೆ. ಅವರು ಪೋಲೀಸರಿಗೆ ವಿಚಾರ ತಿಳಿಸದಂತೆ ನನ್ನನ್ನು ತಡೆದರು. ಆದರೆ ಕಿರಣ್ ಕಾಟ ತಡೆಯಲಾರದೆ" ನಾನು ಪೋಲಿಸರಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಪ್ರೇಮಿಗಳೇ ಈಗ ದುಶ್ಮನ್

ಯಾಸ್ಮಿನ್ ಹಾಗೂ ಕಿರಣ್ ರಾಜ್ ಸಾಕಷ್ಟು ದಿನಗಳಿಂದ ಪರಿಚಿತರು. ಸುಮಾರು ಐದು ವರ್ಷ ಲಿವಿಂಗ್ ಟು ಗೆದರ್ ನಲ್ಲಿದ್ದರು. ಮದುವೆ ಆಗಬೇಕೆಂದು ತೀರ್ಮಾನಿಸಿದ್ದರು. ಆದರೆ ಈಗ ಇಬ್ಬರು ಪರಸ್ಪರ ದೂರುತ್ತಾ ದೂರವಾಗಲು ನಿರ್ಧರಿಸಿದ್ದಾರೆ.

English summary
Read the Complete details about the complaint lodged against Kannada Actor Kiran Raj by Model, Actress Yasmin Pathan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X