»   » ಮಣಿರತ್ನಂ ಮುಂದಿನ ಚಿತ್ರದಲ್ಲಿ ಸಲ್ಮಾನ್ ನಾಯಕ

ಮಣಿರತ್ನಂ ಮುಂದಿನ ಚಿತ್ರದಲ್ಲಿ ಸಲ್ಮಾನ್ ನಾಯಕ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಪ್ರತಿಯೊಬ್ಬ ನಟ ಅಥವಾ ನಟಿ ಒಂದಲ್ಲ ಒಂದು ದಿನ ಯಾವ ನಿರ್ದೇಶಕನ ಚಿತ್ರದಲ್ಲಿ ನಟಿಸುವ ಕನಸು ಕಾಣುತ್ತಾನೋ ಆ ಕನಸು ಸಲ್ಮಾನ್ ಪಾಲಿಗೆ ನನಸಾಗಿದೆ. ಮಣಿರತ್ನಂ ಚಿತ್ರವೆಂದರೆ ಕಣ್ಮುಚ್ಚಿಕೊಂಡು ಕಾಲ್ ಶೀಟ್ ನೀಡುತ್ತಾರೆ ಎಂಬ ಮಾತಿದೆ.

ಅದೇ ರೀತಿ ಸಲ್ಮಾನ್ ಕೂಡಾ ಈ ಹೊಸ ಚಿತ್ರಕ್ಕಾಗಿ ಸಲ್ಮಾನ್ ಮೂರು ತಿಂಗಳ ಕಾಲ್ ಶೀಟ್ ನೀಡಿದ್ದಾರೆ. ಅಂದ ಹಾಗೆ, ಮಣಿ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದು, ಬಾಲಿವುಡ್ ನ ಸಲ್ಮಾನ್ ಅಲ್ಲ ಮಾಲಿವುಡ್ ನ ಸಲ್ಮಾನ್. ಅಪ್ಪನ ಹಾದಿಯಲ್ಲೇ ಸಾಗಿ ಸಿನಿಮಾ ರಂಗದಲ್ಲಿ ಉತ್ತಮ ಹೆಸರು ಗಳಿಸುತ್ತಿರುವ ಮಲಯಾಳಂ ಸೂಪರ್ ಸ್ಟಾರ್ ಮಮ್ಮೂಟಿ ಅವರ ಪುತ್ರ ದಲ್ಕ್ವೇರ್ ಸಲ್ಮಾನ್ ಗೆ ಭರ್ಜರಿ ಆಫರ್ ಸಿಕ್ಕಿದೆ.

ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಮುಂದಿನ ಚಿತ್ರಕ್ಕೆ ನಾಯಕನಾಗಿ ಮಮ್ಮೂಟಿ ಅವರ ಪುತ್ರ ಸಲ್ಮಾನ್ ಆಯ್ಕೆಯಾಗಿದ್ದಾರೆ. ಅಕ್ಟೋಬರ್ 6 ರಂದು ಚೆನ್ನೈನಲ್ಲಿ ಸೆಟ್ಟೇರಲಿದೆ. ಮಣಿರತ್ನಂ ಸಿನಿಮಾ ಪ್ರಪಂಚದ ಆಸ್ಥಾನ ಕಲಾವಿದ ಎ.ಆರ್ ರೆಹಮಾನ್ ಎಂದಿನಂತೆ ಹೊಸ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಉಳಿದ ತಾರಾಗಣ, ತಂತ್ರಜ್ಞ ವರ್ಗಗಳ ವಿವರ ತಿಳಿದು ಬಂದಿಲ್ಲ. [30 ಕೋಟಿ ತೂಗುವ ಮಮ್ಮೂಟಿ]

Confirmed: Dulquer Salmaan Is Mani Ratnam's Next Hero

ಈ ಹಿಂದೆ ಕೂಡಾ ಮಾಲಿವುಡ್ ನ ಅನೇಕ ಪ್ರತಿಭಾವಂತರು ಮಣಿರತ್ನಂ ಅವರ ಚಿತ್ರಗಳಲ್ಲಿ ನಟಿಸಿದ ಉದಾಹರಣೆಗಳಿವೆ. ಸಾಮಾನ್ಯವಾಗಿ ಪ್ರತಿ ಚಿತ್ರದಲ್ಲೂ ಹೊಸಬರಿಗೆ ಹೆಚ್ಚಿನ ಆದ್ಯತೆ ನೀಡುವ ಮಣಿರತ್ನಂ ಅವರು ಹಿರಿಯ ಕಲಾವಿದರಿಗೂ ಮನ್ನಣೆ ನೀಡುತ್ತಾ ಬಂದಿದ್ದಾರೆ. ಮಣಿ ಅವರ ಚಿತ್ರಗಳಲ್ಲಿ ಮಮ್ಮೂಟಿ, ಮೋಹನ್ ಲಾಲ್, ಮನೋಜ್ ಕೆ ಕಲ್ಯಾಣ್, ಪೃಥ್ವಿರಾಜ್ ಉತ್ತಮ ಪಾತ್ರ ಪಡೆದಿದ್ದರು. ಈಗ ಸಲ್ಮಾನ್ ಗೆ ಉತ್ತಮ ಅವಕಾಶ ಸಿಕ್ಕಿದೆ.

ಮಣಿರತ್ನಂ ಅವರ ಹೊಸ ಚಿತ್ರ ಈ ಹಿಂದಿನ ಬ್ಲಾಕ್ ಬಸ್ಟರ್ 'ಮೌನರಾಗಂ' ರೀಮೇಕ್ ಎನ್ನುವ ಮಾತಿದೆ. ನಾಯಕಿಯಾಗಿ ಆಲಿಯಾ ಭಟ್ ಬರುತ್ತಾರೆ ಎಂಬ ಸುದ್ದಿಯೂ ಇದೆ. ಅದರೆ, ಇವೆಲ್ಲ ಸದ್ಯಕ್ಕೆ ಗಾಳಿಸುದ್ದಿಯಾಗಿವೆ. [ಆಲಿಯಾ ಬಿಟ್ರೆ 2 ಸ್ಟೇಟ್ಸ್ ನಲ್ಲಿ ಮತ್ತೇನಿಲ್ಲ]

ಬೆಂಗಳೂರು ಹುಡುಗ ಸಲ್ಮಾನ್: ಮಲಯಾಳಂ ನಟ ಸಲ್ಮಾನ್ ಅವರಿಗೆ ಬೆಂಗಳೂರಿನ ಮೋಹ ಹೆಚ್ಚು. ಬೆಂಗಳೂರು ಡೇಸ್ ಚಿತ್ರದಲ್ಲಿ ಅರ್ಜುನ್ ಪಾತ್ರದಲ್ಲಿ ನಟಿಸಿದ ಮೇಲಂತೂ ಆಗಾಗ ಇಲ್ಲಿ ಓಡಾಡುವುದು ಕಾಮನ್. ಸಿನಿಮಾ ನಟ ಅಲ್ಲದೆ ಉದ್ಯಮಿ ಕೂಡಾ ಆಗಿರುವ ಸಲ್ಮಾನ್ ಕಾರು ಟ್ರೇಡಿಂಗ್ ವೆಬ್ ಸೈಟ್ ನಡೆಸುತ್ತಾರೆ. ಚೆನ್ನೈನಲ್ಲಿ ಡೆಂಟಲ್ ಕ್ಲಿನಿಕ್ ಸಮೂಹವಿದೆ. ಬೆಂಗಳೂರಿನಲ್ಲಿ ಮದರ್ ಹುಡ್ ಆಸ್ಪತ್ರೆಯ ನಿರ್ದೇಶಕರಾಗಿದ್ದಾರೆ.

ಸದ್ಯ ಬೆಂಗಳೂರಿನಲ್ಲಿ ನಿತ್ಯಾ ಮೆನನ್ ಜೋಡಿಯಾಗಿ 100 ಡೇಸ್ ಆಫ್ ಲವ್ ಚಿತ್ರದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾನೆ. ಸೆ.30ಕ್ಕೆ ಶೂಟಿಂಗ್ ಮುಗಿಯಲಿದೆ. ನಂತರ ಮಣಿ ಚಿತ್ರದಲ್ಲಿ ಜ್ಯೂ.ಮಮ್ಮೂಟಿ ಹೊಸ ಅಧ್ಯಾಯ ಶುರು.

English summary
It is confirmed now! Dulquer Salmaan is playing the lead role in veteran director Mani Ratnam's upcoming untitled movie. The actor has allotted 3 months for the project. Dulquer Salmaan is son of film actor Mammootty

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada