»   » ಬಿಟೌನ್ ನ ಕಿಸ್ಸರ್ ಬಾಯ್ ಜೊತೆ 'ಗೂಗ್ಲಿ' ಬೆಡಗಿ ರೊಮ್ಯಾನ್ಸ್..!

ಬಿಟೌನ್ ನ ಕಿಸ್ಸರ್ ಬಾಯ್ ಜೊತೆ 'ಗೂಗ್ಲಿ' ಬೆಡಗಿ ರೊಮ್ಯಾನ್ಸ್..!

Posted By:
Subscribe to Filmibeat Kannada

ಚಂದನವನದ 'ಗೂಗ್ಲಿ' ಬೆಡಗಿ ಕೃತಿ ಕರಬಂಧ ಅವರು ಇತರೇ ಭಾಷೆಗಳಲ್ಲೂ ತಮ್ಮ ಛಾಪು ಮೂಡಿಸಿದ್ದು, ಇದೀಗ ಬಾಲಿವುಡ್ ಗೆ ಎಂಟ್ರಿ ಪಡೆದುಕೊಂಡಿದ್ದಾರೆ. ಹೌದು ಬಿಟೌನ್ ನಲ್ಲಿ ಕಿಸ್ಸರ್ ಬಾಯ್ ಅಂತಾನೇ ಖ್ಯಾತಿ ಗಳಿಸಿರುವ ಇಮ್ರಾನ್ ಹಶ್ಮಿ ಅವರ ಜೊತೆ 'ರಾಝ್ 4' ಚಿತ್ರದಲ್ಲಿ ಕ್ಯೂಟ್ ಬೆಡಗಿ ರೊಮ್ಯಾನ್ಸ್ ಮಾಡಲಿದ್ದಾರೆ.

ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಕೃತಿ ಅವರಿಗೆ ಬಾಲಿವುಡ್ ನಲ್ಲಿ ದೊಡ್ಡ ಬ್ಯಾನರ್ ನ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿರೋದು ವಿಶೇಷವಾಗಿದೆ. 'ವಿಶೇಷ್ ಫಿಲ್ಮ್' ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಮಹೇಶ್ ಭಟ್ ಹಾಗೂ ಮುಖೇಶ್ ಭಟ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾಕ್ಕೆ ನಿರ್ದೇಶಕ ವಿಕ್ರಮ್ ಭಟ್ ಆಕ್ಷನ್-ಕಟ್ ಹೇಳುವ ಸಾಧ್ಯತೆಯಿದೆ.[ಕೃತಿ ಕರಬಂಧಗೆ ಏರ್ ಪೋರ್ಟ್ ನಲ್ಲಿ ಆಗಿದ್ದೇನು? ]

CONFIRMED: Kriti Kharbanda To Debut In Bollywood Through 'Raaz 4'

ತ್ರಿಕೋನ ಪ್ರೇಮ ಕಥೆ ಇರುವ ಈ ಚಿತ್ರದಲ್ಲಿ ಇಮ್ರಾನ್ ಹಶ್ಮಿ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದು, ಗೌರವ್ ಅರೋರಾ ಹಾಗೂ ನಟಿ ಕೃತಿ ಕರಬಂಧ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ.

ಚಿತ್ರದ ಪ್ರೀ ಪ್ರೊಡಕ್ಷನ್ ಕಾರ್ಯ ನಡೆಯುತ್ತಿದ್ದು, ಡಿಸೆಂಬರ್ ತಿಂಗಳಿನಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ನಿರ್ಮಾಪಕರು ಈ ಸಿನಿಮಾವನ್ನು ಜುಲೈನಲ್ಲಿ ಬಿಡುಗಡೆಗೊಳಿಸುವ ಯೋಜನೆ ಹಾಕಿಕೊಂಡಿದ್ದಾರೆ.[ಕುರುಡಿಯಾದ ಕ್ಯೂಟ್ ಹುಡುಗಿ ಕೃತಿ ಖರಬಂಧ]

CONFIRMED: Kriti Kharbanda To Debut In Bollywood Through 'Raaz 4'

ಹಾರರ್ ಕಮ್ ಥ್ರಿಲ್ಲರ್ ಕಥೆಯಿರುವ 'ರಾಝ್' ಸರಣಿಯ ಸಿನಿಮಾಗಳು ನಟ ಇಮ್ರಾನ್ ಹಶ್ಮಿಯ ಇಮೇಜ್ ಅನ್ನು ಬಂಡವಾಳ ಮಾಡಿಕೊಂಡು ಜನಪ್ರಿಯತೆ ಗಳಿಸಿವೆ. ಮೊದಲ ಭಾಗದಲ್ಲಿ ಬಿಪಾಶಾ ಬಸು, ಎರಡನೇ ಭಾಗದಲ್ಲಿ ಕಂಗನಾ ರಾಣಾವತ್ ಹಾಗೂ ಮೂರನೇ ಭಾಗದಲ್ಲಿ ಇಶಾ ಗುಪ್ತಾ ಅವರು ಇಮ್ರಾನ್ ಹಶ್ಮಿ ಅವರಿಗೆ ಸಾಥ್ ನೀಡಿದ್ದರು. ಇದೀಗ ಇದೇ ಮೊದಲ ಬಾರಿಗೆ ಕಿಸ್ಸರ್ ಬಾಯ್ ಇಮ್ರಾನ್ ಗೆ ಸಾಥ್ ನೀಡುವ ಸರದಿ ನಮ್ಮ ಕನ್ನಡತಿ ಕೃತಿ ಅವರದು.

ಈಗಾಗಲೇ ಬಹುಭಾಷೆಗಳಲ್ಲಿ ಮಿಂಚಿರುವ ನಟಿಗೆ ಬಿಟೌನ್ ರತ್ನಗಂಬಳಿ ಹಾಸಿ ಕರೆದಿದೆ. ಇನ್ನು ಟಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಬ್ರೇಕ್ ಸಿಕ್ಕಂತೆ, ಬಾಲಿವುಡ್ ಕ್ಷೇತ್ರದಲ್ಲೂ ಕೃತಿ ಅವರಿಗೆ ದೊಡ್ಡ ಮಟ್ಟದ ಬ್ರೇಕ್ ಸಿಗುತ್ತಾ ಅಂತ ಕಾದು ನೋಡೋಣ.

English summary
'Chiru' and 'Googly' fame South actress Kriti Kharbanda will be seen romancing actor Emraan Hashmi in the fourth instalment of "Raaz".

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada