»   » 2016ರ ಗಾಂಧಿನಗರದ ಗಲಾಟೆ ಗಲ್ಲಿಯಲ್ಲಿ ಒಂದು ಸುತ್ತು

2016ರ ಗಾಂಧಿನಗರದ ಗಲಾಟೆ ಗಲ್ಲಿಯಲ್ಲಿ ಒಂದು ಸುತ್ತು

Posted By:
Subscribe to Filmibeat Kannada

2016 ರಲ್ಲಿ.. ಗಾಂಧಿನಗರದಲ್ಲಿ ಬರೀ ಸಿನಿಮಾಗಳು ಮಾತ್ರ ಸುದ್ದಿ ಮಾಡ್ಲಿಲ್ಲ. ಸಿನಿಮಾಗಳ ರಸವತ್ತಾದ ಸುದ್ದಿಗಳ ಜೊತೆ ದಿನಕ್ಕೊಂದರಂತೆ ವಿವಾದಗಳೂ ಕೂಡ ಸದ್ದು ಮಾಡಿದ್ವು. ಅದರಲ್ಲಿ ಹೆಚ್ಚು ಬ್ರೇಕಿಂಗ್ ನ್ಯೂಸ್ ಮಾಡಿದ್ದು ನಮ್ಮ ಸ್ಯಾಂಡಲ್ ವುಡ್ ನ ಸ್ಟಾರ್ ನಟರೇ.!

ಯಶ್ ವಿರುದ್ಧ ಕನ್ನಡ ಸುದ್ದಿ ವಾಹಿನಿಗಳು ತೊಡೆ ತಟ್ಟಿ ನಿಂತದ್ದು, ಟಿವಿ ವಾಹಿನಿಗಳ ರಿಯಾಲಿಟಿ ಶೋಗಳ ವಿರುದ್ಧ ನಿರ್ಮಾಪಕರು ಬೀದಿಗಳಿದಿದ್ದು, ಪಾಕಿಸ್ತಾನ ಪರ ವಹಿಸಿಕೊಂಡು ರಮ್ಯಾ ನ್ಯಾಷನಲ್ ಲೆವೆಲ್ ನ್ಯೂಸ್ ಮಾಡಿದ್ದು ಇದೇ ವರ್ಷದಲ್ಲಿ.![2016ರ ಅತ್ಯುತ್ತಮ ಚಿತ್ರ-ನಟ-ನಟಿ-ನಿರ್ದೇಶಕರನ್ನ ಆಯ್ಕೆ ಮಾಡಿ!]

'ಇತರೆ' ವಿಷಯಗಳಿಗೆ ಸುದ್ದಿಯಾದ ಗಾಂಧಿನಗರದ ವಿವಾದಗಳ ಕಂಪ್ಲೀಟ್ ರೌಂಡಪ್ ಇಲ್ಲಿದೆ, ಓದಿರಿ....

ಬುಲೆಟ್ ಪ್ರಕಾಶ್ v/s ದಿನಕರ್ ತೂಗುದೀಪ

2016 ರ ವರ್ಷಾರಂಭದಲ್ಲಿ ವಿವಾದದಿಂದ ಮೊದಲು ಸೌಂಡ್ ಮಾಡಿದ್ದು ನಟ ಬುಲೆಟ್ ಪ್ರಕಾಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ ದಿನಕರ್ ತೂಗುದೀಪ. 'ಸುಲ್ತಾನ್' ಸಿನಿಮಾ ವಿಷಯವಾಗಿ ದಿನಕರ್ ತೂಗುದೀಪ ಮತ್ತು ಬುಲೆಟ್ ಪ್ರಕಾಶ್ ನಡುವೆ ಮಾತಿನ ಚಕಮಕಿ ನಡೆದು, ಅದು ಹಲ್ಲೆವರೆಗೂ ಹೋಗಿದ್ದರಿಂದ ಬುಲೆಟ್ ಪ್ರಕಾಶ್ ಪೊಲೀಸ್ ಕಂಪ್ಲೇಂಟ್ ಕೊಟ್ಟು ರಾದ್ಧಾಂತ ಮಾಡಿಕೊಂಡರು. ನಂತರ ಪೊಲೀಸರ ಮಧ್ಯಸ್ಥಿಕೆಯಲ್ಲಿ ವಿವಾದ ಕ್ಲೋಸ್ ಆಯ್ತು. [ಬುಲೆಟ್ ಪ್ರಕಾಶ್ ದೊಡ್ಡ ಸುಳ್ಳುಗಾರ; ದಿನಕರ್ ತೂಗುದೀಪ ಸಿಡಿಸಿದ ಬಾಂಬ್!]

ಮೇಘನಾ ರಾಜ್ ವಿರುದ್ಧ ವಂಚನೆ ಆರೋಪ

ಹಿರಿಯ ನಟ ಸುಂದರ್ ರಾಜ್ ಹಾಗೂ ನಟಿ ಪ್ರಮೀಳಾ ಜೋಷಾಯಿ ಪುತ್ರಿಯಾಗಿರುವ ಮೇಘನಾ ರಾಜ್ ವಿರುದ್ಧ ವಂಚನೆ ಆರೋಪ ಕೇಳಿಬಂದಿತ್ತು. ತಮಿಳುನಾಡು ಮೂಲದ ಜನಾರ್ಧನ್ ಎಂಬ ವ್ಯಕ್ತಿಯನ್ನ ಮದುವೆ ಆಗಿ ಮೇಘನಾ ವಂಚನೆ ಮಾಡಿದ್ದಾರೆ ಅಂತ ಜನಾರ್ಧನ್ ದೂರು ನೀಡಿದ್ದರು. ಆದ್ರೆ ಸೂಕ್ತ ಸಾಕ್ಷಿ ಆಧಾರ ಇಲ್ಲದ ಕಾರಣ ಪ್ರಕರಣ ಕ್ಲೋಸ್ ಆಯ್ತು.[ನಟಿ ಮೇಘನಾ ರಾಜ್ ಬಗ್ಗೆ ಕೇಳಿಬಂದಿರುವ ವಂಚನೆ ಆರೋಪ ನಿಜವೇ?]

ದರ್ಶನ್ 'ಗಲಾಟೆ' ಸಂಸಾರ

ತಮ್ಮ 'ಗಲಾಟೆ ಸಂಸಾರ'ದಿಂದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ಹೆಡ್ ಲೈನ್ ಮಾಡಿದ್ರು. ಪತ್ನಿ-ಪುತ್ರನ ಬಗ್ಗೆ ದರ್ಶನ್ ಆಡಿದ್ದಾರೆ ಎನ್ನಲಾದ ಮಾತುಗಳು ಹಾದಿ ಬೀದಿಯಲ್ಲಿ ಚರ್ಚೆಗೆ ಗ್ರಾಸವಾಯ್ತು.[ನನ್ನ ಹೆಂಡ್ತಿ ವಿಜಯಲಕ್ಷ್ಮಿಗೆ ಪ್ರಿಯಕರನಿದ್ದಾನೆ ಎಂದ ದರ್ಶನ್]

ತುರ್ತು ಸುದ್ದಿಗೋಷ್ಠಿ, ಮಾಲಾಶ್ರೀ ಮತ್ತು ಕಣ್ಣೀರು

'ನಿಮ್ಮ ಅಭಿನಯ ಚೆನ್ನಾಗಿಲ್ಲ. ನಿಮಗೆ ನಟಿಸಲು ಬರಲ್ಲ'' ಅಂತ್ಹೇಳಿ 'ಉಪ್ಪು-ಹುಳಿ-ಖಾರ' ನಿರ್ದೇಶಕ ಇಮ್ರಾನ್ ಸರ್ದಾರಿಯಾ ಹಾಗೂ ನಿರ್ಮಾಪಕ ಕೆ.ಮಂಜು ಅವಮಾನ ಮಾಡಿದ್ದಾರೆ ಅಂತ ತುರ್ತು ಸುದ್ದಿಗೋಷ್ಠಿ ಕರೆದು ಮಾಲಾಶ್ರೀ ಕಣ್ಣೀರಿಟ್ಟರು. ಬಳಿಕ ವಾದ-ವಾಗ್ವಾದ-ವಿವಾದ, ಮೂರ್ನಾಲ್ಕು ಪ್ರೆಸ್ ಮೀಟ್ ನಡೆದ್ಮೇಲೆ ವಿವಾದಕ್ಕೆ ಫುಲ್ ಸ್ಟಾಪ್ ಬಿತ್ತು.[ತುರ್ತು ಸುದ್ದಿಗೋಷ್ಠಿ ಕರೆದು ನಟಿ ಮಾಲಾಶ್ರೀ ಕಣ್ಣೀರಿಟ್ಟಿದ್ದು ಯಾಕೆ?]

'ಬಾಂಬ್' ಸಿಡಿಸಿದ ಐಂದ್ರಿತಾ ರೇ

''ಕನ್ನಡ ಚಿತ್ರರಂಗದಲ್ಲಿ ನಾಯಕಿಯರಿಗೆ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ. ಹೀರೋಯಿನ್ ಗಳಿಗೆ ಕ್ಯಾರಾವಾನ್ ಇರೋದಿಲ್ಲ. ನಾನು ಎಷ್ಟೋ ಬಾರಿ ಮರದ ಅಡ್ಡದಲ್ಲಿ ಡ್ರೆಸ್ ಚೇಂಜ್ ಮಾಡಿದ್ದೀನಿ. ಸಂಭಾವನೆ ವಿಚಾರದಲ್ಲೂ ತಾರತಮ್ಯ ನಡೆಯುತ್ತಿದೆ'' ಅಂತ ಐಂದ್ರಿತಾ ರೇ ಗಂಭೀರ ಆರೋಪ ಮಾಡಿ, ವಿವಾದವನ್ನ ಮೈಮೇಲೆ ಎಳೆದುಕೊಂಡರು.[ಸ್ಯಾಂಡಲ್ ವುಡ್ ಕಹಿಸತ್ಯಗಳನ್ನು ಬಿಚ್ಚಿಟ್ಟ ಐಂದ್ರಿತಾ ರೇ]

ಪಾಕಿಸ್ತಾನ ಮತ್ತು ರಮ್ಯಾ

''ರಕ್ಷಣಾ ಸಚಿವರು ಹೇಳಿದಂತೆ ಪಾಕಿಸ್ತಾನವಿಲ್ಲ. ಅಲ್ಲಿಯ ಜನ ನಮ್ಮ ರೀತಿನೇ ಇದ್ದಾರೆ. ಸಾರ್ಕ್ ಕಾನ್ಫರೆನ್ಸ್ ನಲ್ಲಿ ನನ್ನನ್ನು ಚೆನ್ನಾಗಿಯೇ ನೋಡಿಕೊಂಡರು. ಅನ್ಯೋನ್ಯವಾಗಿಯೇ ಮಾತನಾಡಿಸಿದರು'' ಅಂತ ಪಾಕಿಸ್ತಾನ ರಾಷ್ಟ್ರವನ್ನ ರಮ್ಯಾ ಹೊಗಳಿದಕ್ಕೆ ದೊಡ್ಡ ರಾದ್ಧಾಂತ ನಡೆದುಹೋಯ್ತು.[ಪಾಕ್ ಬಗ್ಗೆ ಹೇಳಿಕೆ ವಿವಾದ: ಟ್ವಿಟ್ಟರ್ ನಲ್ಲಿ ಮೌನ ಮುರಿದ ರಮ್ಯಾ]

ರಮ್ಯಾ v/s ಜಗ್ಗೇಶ್

ಪಾಕಿಸ್ತಾನ ರಾಷ್ಟ್ರವನ್ನ ಹೊಗಳಿದಕ್ಕೆ ನಟಿ ರಮ್ಯಾ ವಿರುದ್ಧ ನಟ ಜಗ್ಗೇಶ್ ಮಾಧ್ಯಮಗಳ ಮುಂದೆ ಕಿಡಿ ಕಾರಿದರು. ಸಾಲದಕ್ಕೆ ತಮ್ಮ ಟ್ವೀಟ್ ಗಳ ಮೂಲಕ ಅಣಕವಾಡಿದರು.[ಪಾಕ್ ಹೊಗಳಿದ ರಮ್ಯಾಗೆ ಛೀಮಾರಿ ಹಾಕಿದ ನಟ ಜಗ್ಗೇಶ್]

ಡಾ.ವಿಷ್ಣುವರ್ಧನ್ ಸ್ಮಾರಕ ವಿವಾದ

2016 ರ ವರ್ಷಪೂರ್ತಿ ಡಾ.ವಿಷ್ಣುವರ್ಧನ್ ರವರ ಸ್ಮಾರಕ ವಿವಾದ ಸದ್ದು ಮಾಡ್ತು. 'ಸಾಹಸ ಸಿಂಹ' ವಿಷ್ಣು ರವರ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋಗೆ ಕಾಲಿಡಲ್ಲ ಅಂತ ಭಾರತಿ ವಿಷ್ಣುವರ್ಧನ್ ಹೇಳಿದ್ದು, ಜೊತೆಗೆ ಮೈಸೂರಿಗೆ ಡಾ.ವಿಷ್ಣು ಸ್ಮಾರಕ ಶಿಫ್ಟ್ ಅಂತ ಅನೌನ್ಸ್ ಆಗಿದ್ದು ಇದೇ ವರ್ಷ.[ಸೆ.18ಕ್ಕೆ ಡಾ.ವಿಷ್ಣುವರ್ಧನ್ ಹುಟ್ಟುಹಬ್ಬ: ಭುಗಿಲೆದ್ದ ಹೊಸ ವಿವಾದ ಏನು?]

ನಟಿ ಸೋನು ಗೌಡ ರವರ ಖಾಸಗಿ ಫೋಟೋಗಳು ಲೀಕ್

ತಾವಾಯಿತು, ತಮ್ಮ ಕೆಲಸವಾಯಿತು ಅಂತ ತಮ್ಮಷ್ಟಕ್ಕೆ ತಾವಿದ್ದ ನಟಿ ಸೋನು ಗೌಡ ಅವರ ಮಾನ-ಮಾರ್ಯಾದೆಗೆ ಧಕ್ಕೆ ತರುವಂತಹ ಕೆಲಸ ಈ ವರ್ಷ ನಡೆಯಿತು.[ಕಿಡಿಗೇಡಿಯಿಂದ ನಟಿಯ ಖಾಸಗಿ ಫೋಟೋ ಲೀಕ್, ದೂರು ದಾಖಲಿಸಿದ ನಟಿ]

ದಿಗಂತ್ ಸಂಭಾವನೆ ಕಿರಿಕ್

'ನಾಗರಹಾವು' ಚಿತ್ರದಲ್ಲಿನ ಅಭಿನಯಕ್ಕೆ ಸಂಪೂರ್ಣ ಸಂಭಾವನೆ ಸಂದಾಯ ಆಗಿಲ್ಲ ಅಂತ ನಿರ್ಮಾಪಕರ ಮೇಲೆ ದಿಗಂತ್ ಆರೋಪ ಮಾಡಿದ್ರೆ, ಫೈನಲ್ ಅಮೌಂಟ್ ಕ್ಲಿಯರ್ ಮಾಡಿದ್ದೇನೆ ಅಂತ ನಿರ್ಮಾಪಕ ಸಾಜಿದ್ ಖುರೇಶಿ ಸ್ಪಷ್ಟನೆ ನೀಡಿದ್ದರು.[ದಿಗಂತ್ 'ಅಸಲಿ'ಯತ್ತು ಬಯಲು ಮಾಡಿದ 'ನಾಗರಹಾವು' ನಿರ್ಮಾಪಕ.!]

ಕಾವೇರಿ ವಿವಾದ: ಅಂಬಿ ನಾಪತ್ತೆ

ಕಾವೇರಿ ವಿವಾದ ಭುಗಿಲೆದ್ದಾಗ ಮಂಡ್ಯ ಕ್ಷೇತ್ರದ ಶಾಸಕನಾಗಿ ನಟ ಅಂಬರೀಶ್ ಕಾವೇರಿ ಅಧಿವೇಶನದಲ್ಲಿ ಭಾಗಿಯಾಗಲಿಲ್ಲ. ಮಂಡ್ಯ ಕ್ಷೇತ್ರಕ್ಕೂ ಭೇಟಿ ಕೊಡಲಿಲ್ಲ. ಕಾರಣ 'ಅಕ್ಕ' ಸಮ್ಮೇಳನದಲ್ಲಿ ಭಾಗವಹಿಸಲು ಅಂಬರೀಶ್ ಅಮೇರಿಕಾಕ್ಕೆ ತೆರಳಿದ್ದರು. ವಾಪಸ್ ಬಂದ್ಮೇಲೆ ಮಂಡ್ಯ ಜನತೆಗೆ ಅಂಬರೀಶ್ ಕ್ಷಮೆ ಕೋರಿದರು.[ಮಂಡ್ಯ ಶಾಸಕ ಅಂಬರೀಶ್ ಗೆ ಇಷ್ಟೊಂದು ಅಸಡ್ಡೆ ಯಾಕೆ.?]

ಪ್ರಕಾಶ್ ರೈ ರಾಮಾಯಣ

'ಕಾವೇರಿ ನೀರು' ವಿವಾದದ ಬಗ್ಗೆ ಒಬ್ಬ ಕನ್ನಡಿಗರಾಗಿ ನೀವು ಏನು ಹೇಳೋಕೆ ಇಚ್ಛಿಸ್ತೀರಾ ಅಂತ ಸಂದರ್ಶಕಿ ಕೇಳಿದ ಪ್ರಶ್ನೆಗೆ, ಪ್ರಕಾಶ್ ರೈ ಅವರು ಸಿಡಿಮಿಡಿಗೊಂಡ ನಂತರ ದೊಡ್ಡ ರಂಪಾಟ ನಡೆಯಿತು.[ರೈಗಳ 'ಕಾವೇರಿ' ರಾಮಾಯಣ: ಕನ್ನಡಿಗರಾಗಿ ಪ್ರಕಾಶ್ ಹೀಗಾ ಮಾಡೋದು?]

'ದನ ಕಾಯೋನು' ವಿವಾದ

ನಿರ್ಮಾಪಕ ಕನಕಪುರ ಶ್ರೀನಿವಾಸ್ ತಮ್ಮನ್ನ ನಿಂದಿಸಿದ್ದಾರೆ. ಆದ್ದರಿಂದ ಅವರು ಕ್ಷಮೆ ಕೇಳುವವರೆಗೂ 'ದನ ಕಾಯೋನು' ಬಿಡುಗಡೆ ಮಾಡಲ್ಲ ಅಂತ ನಿರ್ದೇಶಕ ಯೋಗರಾಜ್ ಭಟ್ ಪಟ್ಟು ಹಿಡಿದಿದ್ದರು. ಕೊನೆಗೆ ಕ್ಷಮೆ ಕೇಳಿದ್ಮೇಲೆ ಶಾಂತವಾದರು.['ದನ ಕಾಯೋನು' ವಿವಾದ: ನಿರ್ಮಾಪಕ ಆರ್ ಶ್ರೀನಿವಾಸ್ ವಿರುದ್ಧ ಭಟ್ರ ಆಕ್ರೋಶ]

'ಬಿಗ್ ಬಾಸ್' ವಿರುದ್ಧ ಪ್ರತಿಭಟನೆ

ಕಳೆದ ವರ್ಷದಂತೆ ಈ ವರ್ಷ ಕೂಡ 'ಬಿಗ್ ಬಾಸ್' ಶುರು ಆಗುವ ಮುನ್ನ ನಿರ್ಮಾಪಕರು ಪ್ರತಿಭಟನೆ ಮಾಡಿದರು. ಏನೇ ನಡೆದರೂ, 'ಬಿಗ್ ಬಾಸ್' ಮಾತ್ರ ನಿಲ್ಲಲಿಲ್ಲ.[ನಿರ್ಮಾಪಕರ ಪ್ರತಿಭಟನೆ: 'ಬಿಗ್ ಬಾಸ್ ಕನ್ನಡ-4'ಗೆ ಆತಂಕ ಇಲ್ಲ.!]

ಎಲ್ಲಿದ್ದೀರಾ ಯಶ್?!

ಕನ್ನಡ ಸುದ್ದಿ ವಾಹಿನಿಗಳಿಗೆ ರಾಕಿಂಗ್ ಸ್ಟಾರ್ ಯಶ್ ಓಪನ್ ಸವಾಲು ಹಾಕಿದ್ದು, ಅದನ್ನ ಪಬ್ಲಿಕ್ ಟಿವಿ ಹಾಗೂ ಪ್ರಜಾ ಟಿವಿ ಸ್ವೀಕರಿಸಿ ಆಹ್ವಾನ ನೀಡಿದ್ದು, ಕಡೆಗೆ ಅದು ಏನೇನೋ ಆಗಿ, ಎಲ್ಲೆಲ್ಲಿಗೋ ಹೋಗಿ 'ಎಲ್ಲಿದ್ದೀರಾ ಯಶ್' ಎಂಬ ಪ್ರಶ್ನೆ ಸುದ್ದಿ ವಾಹಿನಿಗಳಲ್ಲಿ ಉದ್ಭವ ಆಗುವವರೆಗೂ ಯಶ್ ಬ್ರೇಕಿಂಗ್ ನ್ಯೂಸ್ ಮಾಡಿದರು.[ಯಶ್ v/s ಕನ್ನಡ ಮಾಧ್ಯಮ: ಕಥೆ ಶುರು ಆಗಿದ್ದು ಎಲ್ಲಿಂದ?]

ಮೇಘನಾ ಕಂಪ್ಲೇಂಟ್ ಕಥೆ

ಪ್ರಿಯಕರ ಹರೀಶ್ ಕುಟುಂಬದಿಂದ ಕಿರುಕುಳ ಹಾಗೂ ಲೈಂಗಿಕ ದೌರ್ಜನ್ಯ ನಡೆದಿದೆ ಅಂತ ಆರೋಪಿಸಿ ಕಿರುತೆರೆ ನಟಿ ಮೇಘನಾ ಪೊಲೀಸ್ ಠಾಣೆ ಮೇಟಿಲೇರಿ ವಿವಾದ ಸೃಷ್ಟಿಸಿದ್ರು.[ನಟಿ ಮೇಘನಾ-ಹರೀಶ್ ಮಧ್ಯೆ ಜಗಳ: 'ಫೋನ್ ಸಂಭಾಷಣೆ' ಬಿಚ್ಚಿಟ್ಟ ರಹಸ್ಯವೇನು?]

ದುನಿಯಾ ವಿಜಯ್ ಗೂಂಡಾಗಿರಿ ಆರೋಪ

'ಮಾಸ್ತಿ ಗುಡಿ' ನಿರ್ಮಾಪಕ ಸುಂದರ್.ಪಿ.ಗೌಡ ಅಣ್ಣನ ಫ್ಯಾಮಿಲಿ ಮ್ಯಾಟರ್ ನಲ್ಲಿ ಮೂಗು ತೂರಿಸಿ 'ಗೂಂಡಾಗಿರಿ' ಆರೋಪ ಎದುರಿಸಿದ್ದರು ನಟ ದುನಿಯಾ ವಿಜಯ್.[ಬ್ರೇಕಿಂಗ್ ನ್ಯೂಸ್ : ದುನಿಯಾ ವಿಜಯ್ ವಿರುದ್ಧ 'ಗೂಂಡಾಗಿರಿ' ಆರೋಪ.!?]

ಪ್ರಥಮ್ ಗೆ ಹುಚ್ಚ ವೆಂಕಟ್ ಪಂಚ್

'ಬಿಗ್ ಬಾಸ್ ಕನ್ನಡ-3' ಕಾರ್ಯಕ್ರಮದಿಂದ ಕಿಕ್ ಔಟ್ ಆಗಿದ್ದ ಹುಚ್ಚ ವೆಂಕಟ್, 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಎಂಟ್ರಿಕೊಟ್ಟು ಸ್ಪರ್ಧಿ ಪ್ರಥಮ್ ಗೆ ಪಂಚ್ ಕೊಟ್ಟು ಮತ್ತೆ ವಿವಾದದ ಕೇಂದ್ರಬಿಂದುವಾದರು.['ಬಿಗ್' ಅವಾಂತರ: 'ಒಳ್ಳೆ ಹುಡುಗ' ಪ್ರಥಮ್ ಗೆ ಪಂಚ್ ಕೊಟ್ಟ ಹುಚ್ಚ ವೆಂಕಟ್.!]

ಕ್ಷಮೆ ಕೇಳಿದ ಹುಚ್ಚ ವೆಂಕಟ್

ಹುಚ್ಚ ವೆಂಕಟ್ ವಿರುದ್ಧ ಕಿಚ್ಚ ಸುದೀಪ್ ಕೆರಳಿದ ಮೇಲೆ, 'ಬಿಗ್ ಬಾಸ್' ವೇದಿಕೆ ಮೇಲೆ ನಿಂತು ಹುಚ್ಚ ವೆಂಕಟ್ ಕ್ಷಮೆ ಕೇಳಿದರು. ಇನ್ನೂ ಪ್ರಥಮ್ ಕೂಡ ದೂರು ನೀಡುವುದಿಲ್ಲ ಅಂತ ಹೇಳಿದ್ದರಿಂದ ಕಾಂಟ್ರವರ್ಸಿ ಕ್ಲೋಸ್ ಆಯ್ತು.[ಹುಚ್ಚ ವೆಂಕಟ್ ಕ್ಷಮೆ ಕೇಳಿದರು, ಕಿಚ್ಚ ಸುದೀಪ್ ವಾಪಸ್ ಬಂದರು.!]

English summary
Sandalwood and Kannada Stars made Headlines this year for many controversies. Here, is the detailed report of Controversies of Sandalwood in 2016.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada