For Quick Alerts
  ALLOW NOTIFICATIONS  
  For Daily Alerts

  ಪ್ರಚಾರದ ನಡುವೆಯೂ ಕೊರೊನಾ ಜಾಗೃತಿ ಮೂಡಿಸಿದ ನಟ ದರ್ಶನ್

  |

  ಚುನಾವಣೆ ಪ್ರಚಾರದ ವೇಳೆ ಸಾಮಾಜಿಕ ಅಂತರದ ಅರಿವೇ ಇಲ್ಲದೇ ನಡೆದುಕೊಳ್ಳುತ್ತಿರುವ ರಾಜಕಾರಣಿಗಳು, ಸಾರ್ವಜನಿಕರನ್ನು ನೋಡಬಹುದು. ಹೆಸರಿಗೆ ಮಾಸ್ಕ್ ಧರಿಸಿದ್ದರು, ಸರಿಯಾದ ರೀತಿಯಲ್ಲಿ ಮಾಸ್ಕ್ ಬಳಸದೇ ಇರುವುದು ಸಹ ಕಂಡು ಬಂದಿದೆ.

  ಎಲ್ಲರ ಮುಂದೆ ಅಭಿಮಾನಿಯನ್ನು ಪ್ರೀತಿಯಿಂದ ಮಾತನಾಡಿಸಿದ ಡಿ ಬಾಸ್ | Darshan | Munirathna | Filmibeat Kannada

  ಹಾಗಿದ್ದರೂ ಚುನಾವಣೆ ಪ್ರಚಾರ ಮಾತ್ರ ಜೋರಾಗಿ ನಡೆಯುತ್ತಿದೆ. ಇಂದು ಆರ್ ಆರ್ ನಗರದ ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ ಚಾಲೆಂಜಿಂಗ್ ದರ್ಶನ್ ಮತಯಾಚನೆ ಮಾಡುತ್ತಿದ್ದಾರೆ.

  ಮುನಿರತ್ನ ಪರ ನಟ ದರ್ಶನ್ ಪ್ರಚಾರ ಮಾಡೋದಕ್ಕೆ ಅದೊಂದೇ ಕಾರಣ!ಮುನಿರತ್ನ ಪರ ನಟ ದರ್ಶನ್ ಪ್ರಚಾರ ಮಾಡೋದಕ್ಕೆ ಅದೊಂದೇ ಕಾರಣ!

  ದರ್ಶನ್ ಅವರು ಪ್ರಚಾರಕ್ಕೆ ಬರುತ್ತಿದ್ದಾರೆ ಎಂದು ತಿಳಿದ ಜನರು ಹಾಗೂ ಡಿ ಬಾಸ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಈ ವೇಳೆ ದರ್ಶನ್ ಅವರು ಮುನಿರತ್ನ ಪರ ಮತಯಾಚಿಸುವುದು ಮಾತ್ರವಲ್ಲದೇ ಜನರಲ್ಲಿ ಕೊರೊನಾ ಕುರಿತು ಜಾಗೃತಿ ಸಜ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

  ತೆರೆದ ವಾಹನದಲ್ಲಿ ಪ್ರಚಾರ ಮಾಡುತ್ತಿದ್ದ ದರ್ಶನ್ ಅಭಿಮಾನಿಗಳ ಕಡೆ ಕೈ ಬೀಸಿ ಮಾತನಾಡಿಸಿ, ಮಾಸ್ಕ್ ಧರಿಸುವಂತೆ ಸೂಚಿಸಿದ್ದಾರೆ.

  ಕೊರೊನಾ ಲಾಕ್‌ಡೌನ್ ವೇಳೆ ಸಂಕಷ್ಟದಲ್ಲಿದ್ದವರಿಗೆ ಮುನಿರತ್ನ ಅವರು ಸಹಾಯ ಮಾಡಿದ್ದರು. ಹಸಿದವರಿಗೆ ಊಟ ನೀಡಿದ್ದರು. ಮಾನವೀಯತೆ ದೃಷ್ಟಿಯಿಂದ ಅವರಿಗಾಗಿ ಪ್ರಚಾರ ಮಾಡುತ್ತಿದ್ದೇನೆ ಎಂದು ನಟ ದರ್ಶನ್ ಮಾಧ್ಯಮದವರಿಗೆ ತಿಳಿಸಿದ್ದಾರೆ.

  ದರ್ಶನ್ ಅವರ ಜೊತೆ ನಟಿ ಅಮೂಲ್ಯ ಸಹ ಸಾಥ್ ನೀಡಿದರು. ಅಮೂಲ್ಯ ಅವರು ಸಹ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದರು. ರಾತ್ರಿಯವರೆಗೂ ಆರ್ ಆರ್ ನಗರದ ಎಲ್ಲ ವಾರ್ಡ್‌ಗಳಲ್ಲಿ ನಟ ದರ್ಶನ್ ಪ್ರಚಾರ ಮಾಡಲಿದ್ದಾರೆ.

  English summary
  Coronavirus awareness by Darshan during RR Nagar by election campaign.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X