For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಎಫೆಕ್ಟ್: ಕನ್ನಡ ಸಿನಿಮಾ ಪ್ರದರ್ಶನ ರದ್ದಾಗುತ್ತಾ?

  |

  ಮಾರಣಾಂತಿಕ ಕೊರೊನಾ ವೈರಸ್ ಪರಿಣಾಮ ಈಗಾಗಲೆ ಕೇರಳದಲ್ಲಿ ಚಿತ್ರ ಪ್ರದರ್ಶನ ರದ್ದು ಮಾಡಲಾಗಿದೆ. ಇದೆ ಮಾದರಿಯಲ್ಲಿ ಕರ್ನಾಟಕದಲ್ಲೂ ಚಿತ್ರಮಂದಿರಗಳನ್ನು ಬಂದ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದೊಂದೆ ಬಾಕಿ ಇದೆ.

  ಮೂಲಗಳ ಪ್ರಕಾರ ಇಂದು ವಾಣಿಜ್ಯ ಮಂಡಳಿಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆಯಂತೆ. ಚಿತ್ರ ಪ್ರದರ್ಶನ ರದ್ದು ಮಾಡಬೇಕು ಎನ್ನುವುದಾದರೆ ಮೊದಲು ನಿರ್ಮಾಪಕರು ಮತ್ತು ವಿತರಕರ ಜೊತೆ ಮಾತುಕತೆ ನಡೆಸಿ ಆ ನಂತರ ನಿರ್ಧಾರ ತೆಗೆದುಕೊಳ್ಳಲು ವಾಣಿಜ್ಯ ಮಂಡಳಿ ನಿರ್ಧರಿಸಿದೆ.

  ಕೊರೊನಾ ಎಫೆಕ್ಟ್: ಮಲಯಾಳಂ ಸಿನಿಮಾ ಪ್ರದರ್ಶನ ರದ್ದು

  ಇವತ್ತು ಬುಧವಾರ ವಿತರಕರು ಮತ್ತು ನಿರ್ಮಾಪಕರ ಜೊತೆ ಯಾವಾಗ ಸಭೆ ಸೇರಬೇಕು ಎನ್ನುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತೆ ಎಂದು ಹೇಳಲಾಗುತ್ತಿದೆ. ಒಮ್ಮತ ವ್ಯಕ್ತವಾದರೆ ಮಾತ್ರ ಸಿನಿಮಾ ಪ್ರದರ್ಶನ ರದ್ದಾಗುವ ಸಾಧ್ಯತೆ ಇದೆ. ಆದರೆ ಈಗಾಗಲೆ ಕನ್ನಡ ಸಿನಿಮಾ ನಿರ್ಮಾಪಕರು ಸಿನಿಮಾ ರಿಲೀಸ್ ಮಾಡಲು ತಯಾರಿದ್ದಾರೆ. ಸಿನಿಮಾಗಳು ಪ್ರತಿವಾರ ತೆರೆಗೆ ಬರುತ್ತಿವೆ.

  ಹಾಗಾಗಿ ಕರ್ನಾಟಕದಲ್ಲಿ ಸಿನಿಮಾ ಪ್ರದರ್ಶನ ರದ್ದಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಈ ವಾರ ನರಗುಂದ ಬಂಡಾಯ, ಶಿವಾರ್ಜುನ ಸೇರಿದಂತೆ ಮುಂತಾದ ಸಿನಿಮಾಗಳು ಈ ವಾರ ತೆರೆಗೆ ಬರುತ್ತಿದೆ.

  English summary
  Corona Virus may Effect on Kannada film screening in Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X